ಓಟಗಾರ್ತಿ ಹಿಮಾದಾಸ್ಗೆ ಡಿಎಸ್‌ಪಿ ಹುದ್ದೆ: ಅಸ್ಸಾಂ ಸರ್ಕಾರ

ಗುವಾಹಟಿ, ಫೆ. 11: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದು ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳಾಗಿ ಕ್ರೀಡಾಪಟುಗಳನ್ನು ನೇಮಕ ಮಾಡಲು ರಾಜ್ಯದ ಸಮಗ್ರ ಕ್ರೀಡಾ ನೀತಿಗೆ ಸಂಪುಟ ತಿದ್ದುಪಡಿ ಮಾಡಿದೆ. ಭಾರತದ ಸ್ಟಾರ್​ ಓಟಗಾರ್ತಿ ಹಿಮಾದಾಸ್ ಅವರಿಗೆ ರಾಜ್ಯದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಯನ್ನು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್​ ಸೋನಾವಾಲ್ ಘೋಷಿಸಿದ್ದಾರೆ.

ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಿಗೆ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದ್ದು, ಸ್ಪ್ರಿಂಟರ್ ಹಿಮಾ ದಾಸ್​ರನ್ನು ಡಿಎಸ್‌ಪಿಯಾಗಿ‌ ನೇಮಕ ಮಾಡಲು ಸಂಪುಟ ಸಚಿವರು ಅನುಮೋದನೆ ನೀಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು, ಸ್ಪ್ರಿಂಟರ್ ಕ್ವೀನ್​​ ಹಿಮಾ ದಾಸ್‌ಗೆ ಡಿಎಸ್‌ಪಿ ಹುದ್ದೆ ನೀಡುವ ಸಂಪುಟದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

Exit mobile version