ಬೆಂಗಳೂರಿನಲ್ಲಿ ಇ-ಬೈಕ್‌ ಅಂಚೆ ವಿತರಣೆಗೆ ಚಾಲನೆ

ಬೆಂಗಳೂರು ಅ 29 : ದೇಶದ ಎಲ್ಲಾ ವಲಯಗಳಂತೆ ಅಂಚೆಯಲ್ಲೂ ಕೂಡ ಪರಿವರ್ತನೆಗಳು ಬರುತ್ತಿವೆ. ದೇಶದಲ್ಲೇ ಮೊದಲು ಎಂಬಂತೆ ಬೆಂಗಳೂರಿನ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳು ಇ-ಬೈಕ್ ಮೂಲಕ ಪೋಸ್ಟ್­ಗಳನ್ನು ವಿತರಣೆ ಮಾಡಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳು ಎಲೆಕ್ಟ್ರಿಕ್‌ ಬೈಕ್ ಮೂಲಕ ಪೋಸ್ಟ್­ಗಳನ್ನು ವಿತರಿಸಲು ಆರಂಭಿಸಿದ್ದಾರೆ. ಈ ಅಂಚೆ ಕಛೇರಿಯಲ್ಲಿ ಒಟ್ಟು 15 ಪೋಸ್ಟ್‌ಮೆನ್ ಮತ್ತು ಪೋಸ್ಟ್‌ವುಮೆನ್‌ಗಳು ನೀಲಿ ಬಣ್ಣದ ಯುಲು ಬೈಕ್‌ಗಳಲ್ಲಿ ಪೋಸ್ಟ್­ಗಳನ್ನು ವಿತರಣೆ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಕಾರ್ಯ ನಡೆಯುತ್ತಿದೆ.

ಅಕ್ಟೋಬರ್ 14 ರಿಂದ ಈ ಕಾರ್ಯ ಆರಂಭವಾಗಿದೆ. ಇದು ಯಶಸ್ವಿಯಾದರೆ ಬೆಂಗಳೂರು ನಗರದ ಇತರ ಅನೇಕ ಅಂಚೆ ಕಚೇರಿಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ.

ವಸ್ತುಗಳನ್ನು ವಿತರಿಸಲು ಇಂಧನ-ಚಾಲಿತ ದ್ವಿಚಕ್ರ ವಾಹನಗಳನ್ನು ಬಳಸುವುದಕ್ಕೆ ಹೋಲಿಸಿದರೆ ಇದು ಆರ್ಥಿಕವಾಗಿ ಉತ್ತಮವೆಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಅಂಚೆ ಕಛೇರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯುಲು ಸಂಸ್ಥೆ ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.

Exit mobile version