ಇನ್ನು ಮುಂದೆ ಕೂತಲ್ಲೇ ಲೋಕ ಅದಾಲತ್

ಕೋವಿಡ್ ಮಹಾಮಾರಿ ನಂತರ ಕರ್ನಾಟ ಕೋರ್ಟ್‌ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಕರ್ನಾಟಕದೆಲ್ಲೆಡೆ ವಿಡಿಯೋ ಮೂಲಕ ಕೋರ್ಟ್ ಲೋಕ ಅದಾಲತ್ ನಡೆಸಲು ತೀರ್ಮಾನಿಸಿದೆ.

ಪ್ರತೀ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಲೋಕ್‌ ಅದಾಲತ್‌ನಲ್ಲಿ ಅರ್ಜೀದಾರರು ಸ್ಥಿರಾಸ್ತಿ, ಒಡಂಬಡಿಕೆಗಳ ಉಲ್ಲಂಘನೆ, ಹಣ ವಸೂಲಾತಿ, ಮಾನನಷ್ಟ ಮತ್ತಿತರ ಸಿವಿಲ್‌ ದಾವೆಗಳಿಗೆ ಸಂಬಂಧಿಸಿದಂತೆ, ರಾಜಿ-ಸಂಧಾನ ಅಥವಾ ದಾವೆ ವಾಪಸ್‌ ಪಡೆದುಕೊಳ್ಳುವ ತೀರ್ಪು ಅಥವಾ ಚರ್ಚೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೋವಿಡ್‌ ಬಳಿಕ ಲೋಕ್‌ ಅದಾಲತ್‌ ನಡೆದಿರಲಿಲ್ಲ.

ಇದೀಗ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸುಪ್ರೀಂ ಆದೇಶಿಸಿದ ಬಳಿಕ ಈ ನೂತನ ತೀರ್ಮಾನಕ್ಕೆ ಬಂದಿರುವ ರಾಜ್ಯ ನ್ಯಾಯಾಲಯ, ಸೆಪ್ಟೆಂಬರ್ 19 ರಿಂದ ಮೊದಲ ಬಾರಿಗೆ E-ಲೋಕ್‌ ಅದಾಲತ್‌ ಲಾಂಚ್‌ ಮಾಡಲು ತೀರ್ಮಾನಿಸಿದೆ.
ಇದರ ಬಗ್ಗೆ ಎಲ್ಲಾ ಜಿಲ್ಲಾ ಸೆಂಟರ್‌ಗಳಲ್ಲೂ ಮಾಹಿತಿ ಹಂಚಿಕೊಳ್ಳಲು ಆದೇಶಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಸಿಜೆ ಜಸ್ಟಿಸ್ ಅಭಯ್ ಶ್ರೀನಿವಾಸ್ ಓಕ ಮುಂದಾಳತ್ವದಲ್ಲಿ E-ಲೋಕ್ ಅದಾಲತ್ ಮೂಲಕ ಜನರನ್ನು ತಲುಪುವ ಪ್ರಯತ್ನಕ್ಕೆ ಮುಂದಾಗಿದ್ದು, ರಾಜ್ಯಾದ್ಯಂತ ಎಲ್ಲಾ ಕೋರ್ಟ್ಗಳಲ್ಲಿ ಸೆಪ್ಟೆಂಬರ್ 19 ರಿಂದ ಜಾರಿಯಾಗಲಿದೆ.

ಈ ಕುರಿತು ನ್ಯಾಯಾಧೀಶ ಅರವಿಂದ್ ಕುಮಾರ್, ಸುದ್ದಿ ಗೋಷ್ಠಿ ನಡೆಸಿದ್ದು, ಈ ಮೊದಲಾಗಿ ವಾಹನ ವಿಮಾ ಯೋಜನೆ ಬಗ್ಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೆವು, ಪ್ರಯೋಗ ಯಶಸ್ವಿ ಕಂಡಿದ್ದು ಇದೀಗ ಸೆಪ್ಟಂಬರ್‌ ತಿಂಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇದಕ್ಕಾಗಿ ಎಲ್ಲಾ ಪ್ರಕರಣಗಳ ಲಾಯರ್‌ಗಳು ಕಚೇರಿಯಿಂದ ಪಾಲ್ಗೊಳ್ಳಬಹುದು.

Exit mobile version