ಈ ಹಣ್ಣು ತಿಂದರೆ ನಿಮ್ಮದಾಗುತ್ತದೆ ಯಥೇಷ್ಟ ಆರೋಗ್ಯ ಸತ್ವ

ನೇರಳೆ ಹಣ್ಣು ಯಥೇಷ್ಟವಾದ  ಕಬ್ಬಿಣಾಂಶವನ್ನು ಹೊಂದಿದ್ದು, ಇದರ ಜ್ಯೂಸ್‌ನ್ನು ಕುಡಿದರೆ ರಕ್ತದ ಕಣಗಳು ಶುದ್ದೀಕರಣವಾಗುವುದು. ಆಯುರ್ವೇದದಲ್ಲಿ ಮಹತ್ಬಪೂರ್ಣ ಸ್ಥಾನ ಪಡೆದಿದೆ ನೇರಳೆ ಹಣ್ಣು. ವರ್ಷಕ್ಕೊಮ್ಮೆ ಸಿಗುವ ಅಪರೂಪದ ಹಣ್ಣು ಇದು.  ಯಾವುದೇ  ರಾಸಾಯನಿಕ ಗೊಬ್ಬರವಿಲ್ಲದೆ ನೈಸರ್ಗಿಕವಾಗಿ ಬೆಳೆಯುವ ಈ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಸಕ್ಕರೆ ಕಾಯಿಲೆ ಇರುವವರಿಗೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಈ ಹಣ್ಣು ಸಹಕಾರಿಯಾಗಿದೆ. ನೇರಳೆ ಹಣ್ಣಿನಲ್ಲಿ ವಿಶೇಷವಾದ ಪೊಟ್ಯಾಷಿಯಂ ಇದೆ. ರಕ್ತದೊತ್ತಡ ಹಾಗೂ ರಕ್ತ ಹೀನತೆಯನ್ನು ಇದು ಹೋಗಲಾಡಿಸುತ್ತದೆ.

ಪಿತ್ತದೋಷ ನಿವಾರಣೆಗೂ ನೇರಳೆ ಹಣ್ಣಿನ ಜ್ಯೂಸ್  ಅತ್ಯುತ್ತಮವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಇದು ಹೊಂದಿದೆ. ಇದು ಕಿಡ್ನಿಯಲ್ಲಿರುವ ತೊಂದರೆಗಳನ್ನು ನಿವಾರಣೆ ಮಾಡುತ್ತದೆ. ಇದರ ಬೀಜಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಇಟ್ಟು, ಒಂದು ಗ್ಲಾಸ್ ನೀರಿಗೆ ಸ್ವಲ್ಪ ಪುಡಿಯನ್ನು ಸೇರಿಸಿ ಕುಡಿದರೆ ಮಧುಮೇಹ ರೋಗ ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ.

ಇದರ ತೊಗಟೆಯನ್ನು ತಂದು ಮೆಂತೆ ಹಾಗೂ ಜೀರಿಗೆ  ಹಾಕಿ ಕಷಾಯ ಮಾಡಿ ಕುಡಿದರೆ ಬಹಳ ಒಳ್ಳೆಯ ಆರೋಗ್ಯ ಸಿಗುವುದರಲ್ಲಿ ಸಂದೇಹವಿಲ್ಲ. ಈ ಕಷಾಯವು ಕರುಳನ್ನು ಸ್ವಚ್ಛಗೊಳಿಸುವುದು ಹಾಗೂ ಹೃದಯ ಸಮಸ್ಯೆಗಳಿಗೂ ಒಳ್ಳೆಯದು. ಅಸ್ತಮಾ ರೋಗಿಗಳಿಗೂ ಈ ಜ್ಯೂಸ್‌ಗೆ ಚಿಟಿಕೆ ಅರಿಶಿನ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಉತ್ತಮ ಪರಿಹಾರವನ್ನು ಕಾಣಬಹುದಾಗಿದೆ.

Exit mobile version