ಈ ಜ್ಯೂಸ್ ಕುಡಿದು ಆರೋಗ್ಯವನ್ನು ವೃದ್ಧಿಸಿಕೊಳ್ಳಿ

ಕ್ಯಾರೆಟ್ ದೇಹದ ಆರೋಗ್ಯದಲ್ಲಿ ಉತ್ತಮ ನಿರ್ವಹಿಸುತ್ತದೆ. ಕ್ಯಾರೆಟ್ ಜ್ಯೂಸ್‌ನ್ನು ನಿತ್ಯ ಸೇವನೆ ಮಾಡಿದರೆ ಹ್ರದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ.

ಇದರಲ್ಲಿ ಕಾರೋಟಿನ್ ಅಂಶವಿದ್ದು, ದೇಹದ ಶುದ್ಧೀಕರಣ ಮಾಡಲು ಸಹಾಯಕವಾಗಿದೆ. ದೃಷ್ಟಿ ಮಂದವಾಗಿದ್ದಲ್ಲಿ ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿದರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ.

ಕ್ಯಾರೆಟಲ್ಲಿ ಐಯೋಡಿನ್ ಹಾಗೂ ಫೈಬರ್ ಅಂಶಗಳು ಇರುವ ಕಾರಣ ದೇಹದ ತೂಕ ಇಳಿಸಲು ಇದು ಸಹಾಯಕವಾಗಿದೆ. ಇದರಲ್ಲಿ ವಿಟಮಿನ್‌-ಬಿ ಸತ್ವ ಹೇರಳವಾಗಿರುವುದರಿಂದ ದೇಹವನ್ನು ತಂಪಾಗಿಡುತ್ತದೆ.

ದೇಹ ದಣಿದಾಗ ಕ್ಯಾರೆಟ್ ಜ್ಯೂಸನ್ನು ಕುಡಿದರೆ, ಸುಸ್ತು ಕಡಿಮೆಯಾಗಿ, ಮಾಂಸಖಂಡಗಳ ಸೆಳೆತವನ್ನು ತಡೆದು ದೇಹಕ್ಕೆ ಶಕ್ತಿಒದಗಿಸುತ್ತದೆ.

ನಿತ್ಯ ಕ್ಯಾರೆಟ್ ಜ್ಯೂಸ್‌ ಕುಡಿದರೆ  ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬಿನಂಶ ಕರಗಿ ಚರ್ಮದ ಕಾಂತಿ ಹೆಚ್ಚಾಗುವುದಲ್ಲದೇ ಚರ್ಮ ನಳನಳಿಸುವಂತೆ ಮಾಡುತ್ತದೆ.

Exit mobile version