ಈ ಸೊಪ್ಪು ತೂಕವನ್ನು ಇಳಿಸಲು ಯೋಗ್ಯ!

ಪುದೀನಾ ಸೊಪ್ಪು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ, ಇದನ್ನು ಅನೇಕ ಅಡಿಗೆಗಳಿಗೆ ಬಳಸುತ್ತಾರೆ. ಇದರ ಸೊಪ್ಪು, ಪಲಾವ್, ತಂಬುಳಿ ಚಟ್ನಿ, ಸಾಂಬಾರ್ ,ಪಕೋಡಾ ಮುಂತಾದ ಅನೇಕ ಖಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಖಾದ್ಯಗಳಲ್ಲಿ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತದೆ. ರೋಗಾಣುಗಳನ್ನು ನಿಗ್ರಹಿಸುತ್ತದೆ.

ಇನ್ನು ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಸೌಂದರ್ಯ ವರ್ಧಕಗಳಲ್ಲೂ ಇದು ಬಳಕೆಯಾಗುತ್ತದೆ. ಪ್ರತೀ ದಿನ ಬೆಳಿಗ್ಗೆ ಇದರ ಕಷಾಯ ಮಾಡಿ ಕುಡಿಯುವುದರಿಂದ ಚರ್ಮಕ್ಕೆ ಹೊಳಪು ಬರುವುದಲ್ಲದೆ ಕರುಳನ್ನು ಆರೋಗ್ಯವಾಗಿಡುತ್ತದೆ. ಅಜೀರ್ಣ ಸಮಸ್ಯೆಗೆ ಪರಿಹಾರವಾಗುತ್ತದೆ, ಲಿವರ್ ಆರೋಗ್ಯ ದಿಂದ ಕೂಡಿರುತ್ತದೆ. ನೆಗಡಿ ಕೆಮ್ಮುಗಳಿಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ  ಕೆಮ್ಮು ನೆಗಡಿ ನಿವಾರಣೆಯಾಗುತ್ತದೆ.

ಇದರ ಎಣ್ಣೆಯನ್ನು ತಲೆಗೆ ಹಾಗೂ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ  ಚರ್ಮದ ಅಲರ್ಜೀ ಸಮಸ್ಯೆಗೆ ಪರಿಹಾರವಾಗುತ್ತದೆ. ತಲೆಗೆ ಹಚ್ಚಿ ಮರುದಿನ ಸ್ನಾನ ಮಾಡುವುದರಿಂದ ತಲೆಹೊಟ್ಟು ತುರಿಕೆ, ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.

ಪ್ರತೀ ದಿನ ಇದರ ಕಷಾಯ ಕುಡಿಯುವುದರಿಂದ  ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬು ಕರಗಿ ದೇಹವನ್ನು ಸ್ಲಿಮ್  ಆಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ತೂಕವನ್ನು ಇಳಿಸಿಕೊಂಡು  ದೇಹ ಮನಸ್ಸುಗಳೆರಡೂ ಕಳೆ ಕಳೆಯಾಗಿ ಕಾಣಿಸಲು ಇದು ಸಹಕಾರಿಯಾಗುತ್ತದೆ. ಹೀಗೆ ಈ ಪುದೀನಾ ಸೊಪ್ಪಿನ ನಿತ್ಯ ಬಳಕೆಯಿಂದ ನಮಗೆ  ಅನೇಕ ಉಪಯೋಗಗಳಿವೆ.

Exit mobile version