ಆಹಾರ ತಯಾರಿಸಲು, ಆರೋಗ್ಯ ಕಾಪಾಡಿಕೊಳ್ಳಲು ಮಣ್ಣಿನ ಪಾತ್ರೆಯೇ ಬೆಸ್ಟ್​- ಐಸಿಎಂಆರ್

ಇತ್ತೀಚೆಗಿನ ದಿನಗಳಲ್ಲಿ ಕಲಬೆರಕೆಪೂರಿತ ಆಹಾರಗಳು ಹೆಚ್ಚಾಗಿದೆ. ಈ ಆಹಾರ ಪದಾರ್ಥಗಳ (Food) ಸೇವನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಹಾರ ಖರೀದಿ ಹಾಗೂ ಆಹಾರ ತಯಾರಿಸುವಾಗಲೂ ಎಚ್ಚರಿಕೆ ವಹಿಸಬೇಕು. ಸ್ಟೀಲ್ , ಕಬ್ಬಿಣಕ್ಕಿಂತ ಮಣ್ಣಿನ ಪಾತ್ರೆ ಅಹಾರ ತಯಾರಿಸಲು ಬೆಸ್ಟ್ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (Indian Council of Medical Research) ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಆರೋಗ್ಯಕ್ಕೆ ಸ್ನೇಹಿಯಾಗಿರುವ ಕಡಿಮೆ ತೈಲ ಅವಶ್ಯಕತೆಗಳು ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಮಣ್ಣಿನ ಪಾತ್ರೆ ಉತ್ತಮ. ಈ ಮಣ್ಣಿನ ಪಾತ್ರೆ ಸಮಾನ ಶಾಖ ವಿತರಿಸುತ್ತದೆ ಹಾಗೂ ಆಹಾರದಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಆರೋಗ್ಯ ದೃಷ್ಟಿಯಲ್ಲಿ ನಾನ್-ಸ್ಟಿಕ್ (Non Stick) ಪಾತ್ರೆಗಳು ಹಾನಿಕಾರಕವಾಗಿದೆ.ಹೀಗಾಗಿ ಅಡುಗೆ ಮಾಡುವಾಗ ಸರಿಯಾದ ಪಾತ್ರೆಗಳ ಬಳಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆಯಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ. ಮಣ್ಣಿನ ಪಾತ್ರೆ (Earthen Pot)ಗಳನ್ನು ತಯಾರಿಸಲು ಬಳಸುವ ಮಣ್ಣಿನಲ್ಲಿ ಕೆಲವೊಂದು ಒಳ್ಳೆಯ ಗುಣಮಟ್ಟದ ಪೋಷಕಾಂಶಗಳಾದ ವಿಟಮಿನ್ ಬಿ12, ಕ್ಯಾಲ್ಸಿಯಂ, ಫೋಸ್ಪರಸ್, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ (Vitamin B12, Calcium, Phosphorus, Iron and Magnesium) ಇದೆ. ಹಾಗಾಗಿ ಬೇರೆ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆ ಆಯ್ಕೆ ಒಳ್ಳೆಯದು.

ಅಲ್ಲದೆ ಮಣ್ಣಿನ ಪಾತ್ರೆಗಳು ದೀರ್ಘಕಾಲದ ತನಕ ಆಹಾರ ಬಿಸಿಯಾಗಿರುವಂತೆ ಮಾಡುತ್ತದೆ. ಇದರಿಂದಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಾಶವಾಗದೆ ಹಾಗೆ ಉಳಿಯುತ್ತದೆ. ಹಾಗಾಗಿ ಮಣ್ಣಿನ ಪಾತ್ರೆ ಬಳಸುವುದು ಉತ್ತಮ ಎಂದು ಐಸಿಎಂಆರ್ (ICMR) ಸೂಚನೆ ನೀಡಿದೆ.

Exit mobile version