ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ..!

New Delhi: ಈಶಾನ್ಯ ಭಾರತದ ಕೆಲವು ಭಾಗಗಳು ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲಿ ಇಂದು (ಅಕ್ಟೋಬರ್ 3ರಂದು) ಮಧ್ಯಾಹ್ನ ಸರಣಿ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ರಾಜಧಾನಿ ದೆಹಲಿ-ಎನ್ಸಿಆರ್, ಪಂಜಾಬ್ ಮತ್ತು ಹರಿಯಾಣ , ಉತ್ತರಾಖಂಡ(Uttarkand), ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಭೂಕಂಪನವಾಗಿದೆ. ದೆಹಲಿಯಲ್ಲಿ 4.2 ತೀವ್ರತೆಯಲ್ಲಿ ಭೂಮಿ ಕಂಪನವಾದರೆ, ಹರಿಯಾಣದಲ್ಲಿ (Harayan) 2.7 ತೀವ್ರತೆಯಲ್ಲಿ ಮತ್ತು 3.0 ತೀವ್ರತೆಯಲ್ಲಿ ಈಶಾನ್ಯ ಭಾರತದ ಅಸ್ಸಾಂನಲ್ಲಿ (Assam) ಭೂಕಂಪನ ಸಂಭವಿಸಿದೆ. ಇದಕ್ಕೂ ಮುನ್ನ ಮಧ್ಯಾಹ್ನ 2:15ರ ವೇಳೆಗೆ ನೇಪಾಳದಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರ ಪ್ರಭಾವ ಭಾರತದ ಉತ್ತರ ರಾಜ್ಯಗಳ ಮೇಲೆ ಉಂಟಾಗಿದೆ.

ಇನ್ನು ಭಾರತ, ನೇಪಾಳ(Nepal) ಚೀನಾ ಗಡಿಯಲ್ಲಿ ಸರಣಿ ಭೂಕಂಪನಗಳು ಸಂಭವಿಸುತ್ತಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ. ಸೋಮವಾರ ರಾತ್ರಿ ನೆರೆದೇಶ ಮಯನ್ಮಾರ್ನಲ್ಲಿ ಭೂಕಂಪನವಾಗಿದ್ದು, ಇದರ ಪರಿಣಾಮ ಈಶಾನ್ಯ ಭಾರತದಲ್ಲೂ ಭೂಕಂಪನದ ಅನುಭವವಾಗಿದೆ. ಬಹು ಅಂತಸ್ತಿನ ಕಟ್ಟಡಗಳಲ್ಲಿದ್ದ ಜನರಿಗೆ ಭೂಕಂಪನದ ತೀವ್ರತೆ ಅರಿವಾಗಿದ್ದು, ಕಂಪ್ಯೂಟರ್(Computer), ಮೇಜು, ಕುರ್ಚಿಗಳು ಅಲುಗಾಡುತ್ತಿದ್ದಂತೆ ಕಟ್ಟಡಗಳಿಂದ ಹೊರ ಬಂದಿದ್ದಾರೆ. ಹೀಗಾಗಿ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಜನರು ಆತಂಕದಲ್ಲಿದ್ದಾರೆ ಎಂದು ವರದಿಯಾಗಿದೆ.

Exit mobile version