ಋತುಸ್ರಾವದ ದಿನಗಳಲ್ಲಿ ಅಧಿಕ ರಕ್ತಸ್ರಾವವಿದ್ದರೆ ಈ ಆಹಾರಗಳನ್ನು ಸೇವಿಸಿ

ಪ್ರತಿ ತಿಂಗಳು ಋತುಸ್ರಾವವಾಗುವುದು ಪ್ರತಿ ಹೆಣ್ಣಿಗೂ ಸಾಮಾನ್ಯವಾಗಿದ್ದರೂ, ಆ ದಿನಗಳು ಪ್ರತಿ ಮಹಿಳೆಗೆ ಒಂದೇ ರೀತಿಯಾಗಿ ಇರುವುದಿಲ್ಲ. ಆ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಅತಿಯಾದ ರಕ್ತಸ್ರಾವದ ಜೊತೆಗೆ ತೀವ್ರ ಹೊಟ್ಟೆ ನೋವು, ವೀಕ್ ನೆಸ್, ಮೈ-ಕೈ ನೋವು, ತಲೆನೋವು, ನಿದ್ರಾಹೀನತೆ ಅಥವಾ ರಕ್ತಹೀನತೆಯನ್ನು ಅನುವಿಸುತ್ತಾರೆ.

ಕೆಲವರು 7 ದಿನಗಳವರೆಗೆ ಅಸಹಜ ರಕ್ತಸ್ರಾವ ಹೊಂದಿರುತ್ತಾರೆ. ಈ ಸಮಯದಲ್ಲಿ, ಅನೇಕ ಬಾರಿ ಮಹಿಳೆಯರು 2 ಗಂಟೆಗಳಿಗೊಮ್ಮೆ ಪ್ಯಾಡ್ ಅಥವಾ ಟ್ಯಾಂಪೂನ್ಗಳನ್ನು ಬದಲಾಯಿಸಬೇಕಾಗುತ್ತದೆ. ನಿಮಗೆ ಈ ಸಮಸ್ಯೆ ಇದ್ದರೆ, ಭಾರೀ ರಕ್ತಸ್ರಾವ ಮತ್ತು ಮುಟ್ಟಿನ ಸಮಯದ ವೀಕ್ ನೆಸ್ ಕಡಿಮೆ ಮಾಡಲು ನೀವು ಆಹಾರದಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬುದನ್ನು ಇಲ್ಲಿ ವಿವರಿಸುತ್ತೇವೆ, ನೋಡಿ..

ಋತುಸ್ರಾವದ ಸಮಯದಲ್ಲಿ ಅತಿಯಾದ ರಕ್ತಸ್ರಾವ ಆಗುತ್ತಿದ್ದರೆ ಎಂತಹ ಆಹಾರ ಸೇವಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ದೇಹವನ್ನು ಹೈಡ್ರೀಕರಿಸಿ:
ಋತುಸ್ರಾವದ ದಿನಗಳಲ್ಲಿ ನಿಮಗೆ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ನಿಮ್ಮ ರಕ್ತದ ಪ್ರಮಾಣ ಕಡಿಮೆ ಆಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹವನ್ನು ಹೈಡ್ರೀಕರಿಸಿದಂತೆ ಇರಲು ಪ್ರಯತ್ನಿಸಬೇಕು. ಭಾರೀ ರಕ್ತಸ್ರಾವದಿಂದಾಗಿ ಮಹಿಳೆಯರಲ್ಲಿ ದೌರ್ಬಲ್ಯ ಅಥವಾ ತಲೆತಿರುಗುವಿಕೆಯು ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಹೀಗಿದ್ದಾಗ ದೇಹವನ್ನು ಹೈಡ್ರೀಕರಿಸುವ ಮೂಲಕ, ನೀವು ತಲೆತಿರುಗುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ನೀವು ಹೆಚ್ಚೆಚ್ಚು ನೀರು ಸೇವಿಸಿ, ಅಥವಾ ಹಣ್ಣುಗಳ ಜ್ಯೂಸ್ ಅಥವಾ ರಸವನ್ನು ಸೇವಿಸಬಹುದು.

ವಿಟಮಿನ್ ಸಿ:
ವಿಟಮಿನ್ ಸಿ ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವದಿಂದ ಉಂಟಾಗುವ ರಕ್ತಹೀನತೆಯನ್ನು ಕಡಿಮೆ ಮಾಡಲು ನೀವು ವಿಟಮಿನ್ ಸಿ ಸಮೃದ್ಧವಾದ ಆಹಾರಗಳನ್ನು ಸೇವಿಸಬೇಕು. ನಿಮಗೆ ವಿಟಮಿನ್ ಸಿ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿಹಣ್ಣು ಇತ್ಯಾದಿಗಳಲ್ಲಿ ದೊರೆಯುವುದು.

ವಿಟಮಿನ್-ಇ:
ವಿಟಮಿನ್-ಇ ಹೊಟ್ಟೆ ನೋವು ಮತ್ತು ಅಧಿಕ ರಕ್ತಸ್ರಾವವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಟ್ಟು ಪ್ರಾರಂಭವಾಗುವ ಎರಡು ದಿನಗಳ ಮೊದಲು ವಿಟಮಿನ್-ಇ ತೆಗೆದುಕೊಳ್ಳಲು ಪ್ರಾರಂಭಿಸಿ ಮತ್ತು ಮುಟ್ಟಿನ ಮೂರನೇ ದಿನದವರೆಗೆ ಮಾತ್ರ ತೆಗೆದುಕೊಳ್ಳಿ. ಆದರೆ ದೇಹದಲ್ಲಿನ ವಿಟಮಿನ್-ಇ ಕೊರತೆಯನ್ನು ಕಡಿಮೆ ಮಾಡಲು ಯಾವುದೇ ಪೂರಕವನ್ನು ತೆಗೆದುಕೊಳ್ಳುವ ಮೊದಲು, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದಲ್ಲದೆ ನಿಮ್ಮ ಆಹಾರದಲ್ಲಿ ಪಪ್ಪಾಯಿ, ಕಿವಿ ಹಣ್ಣು ಮತ್ತು ಬಾದಾಮಿಗಳನ್ನು ಸೇರಿಸಿಕೊಳ್ಳಬಹುದು.

ವಿಟಮಿನ್- ಡಿ:
ವಿಟಮಿನ್-ಡಿ ನಿಮ್ಮ ಮುಟ್ಟಿನ ಚಕ್ರವನ್ನು ಸರಿಯಾಗಿ ಇರಿಸಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್-ಡಿ ಟ್ಯಾಬ್ಲೆಟ್ ಅಥವಾ ಪುಡಿಯನ್ನು ತೆಗೆದುಕೊಳ್ಳುವ ಮೊದಲು, ದಯವಿಟ್ಟು ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ವಿಟಮಿನ್ ಡಿ ಯ ದೊಡ್ಡ ಮೂಲವೆಂದರೆ ಸೂರ್ಯನ ಬೆಳಕು. ಆದ್ದರಿಂದ ಆದಷ್ಟು ಬೆಳಗ್ಗೆ ಹೊತ್ತು ಹೊರಗಿನ ಬೆಳಕನ್ನು ಪಡೆಯಿರಿ. ಇದು ನಿಮಗೆ ಸಾಕಷ್ಡು ವಿಟಮಿನ್ ಡಿಯನ್ನು ಪೂರೈಸುವುದು.

ಕಬ್ಬಿಣದ ಸಮೃದ್ಧ ಆಹಾರ:
ಮಹಿಳೆಯರ ದೇಹದಲ್ಲಿನ ಕಬ್ಬಿಣದ ಕೊರತೆಗೆ ಮುಟ್ಟಿನ ಸಮಯದಲ್ಲಾಗುವ ಅತಿಯಾದ ರಕ್ತಸ್ರಾವವು ಪ್ರಮುಖ ಕಾರಣವಾಗಿದೆ. ಆ ಈ ಕಬ್ಬಿಣದ ಕೊರತೆಯನ್ನು ಪೂರೈಸಲು, ನಿಮ್ಮ ಆಹಾರದಲ್ಲಿ ಬೀನ್ಸ್, ಪಾಲಕ ಸೊಪ್ಪು, ಇತ್ಯಾದಿಗಳನ್ನು ಸೇರಿಸುವುದು ಮುಖ್ಯ. ಇದಲ್ಲದೆ, ನೀವು ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವ ಮೂಲಕ ಆಹಾರವನ್ನು ಸೇವಿಸವುದು ಕೂಡ, ಕಬ್ಬಿಣದ ಅಂಶವನ್ನು ನಿಮ್ಮ ದೇಹಕ್ಕೆ ನೀಡುವುದು.

Exit mobile version