ನೀವೇನಾದ್ರು ದಪ್ಪ ಹಾಗ್ತಿಲ್ಲ ಅಂತ ಚಿಂತೆ ಮಾಡ್ತಾ ಇದ್ದೀರಾ? ಹಾಗದ್ರೆ ಈ ಆಹಾರಗಳನ್ನು ಸೇವಿಸಿ

Health Benefits: ಇತ್ತೀಚಿನ ದಿನಗಳಲ್ಲಿ ದಪ್ಪ ಇರೋರು ಡಯಟ್ (Diet) ಮಾಡಿ ಸಣ್ಣ ಆಗುವುದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸಣ್ಣ ಇರೋರು ಹೇಗಪ್ಪಾ ದಪ್ಪ ಆಗುವುದು ಅಂತ ತಲೆ ಕೆಡಿಸಿಕೊಳ್ತಾ ಇದ್ದೀರಾ? ಅಲ್ಲದೆ ನೀವು ಎಷ್ಟೇ ತಿಂದರೂ ದಪ್ಪವಾಗುತ್ತಿಲ್ಲವೇ, ಮಸಲ್ (Masal)ಬೆಳವಣಿಗೆ ಆಗಬೇಕೆಂದರೆ ಯಾವ ಯಾವ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.

ತೂಕ ಹೆಚ್ಚಳಕ್ಕೆ ಟಿಪ್ಸ್ :
ಬಾದಾಮಿ, ಗೋಡಂಬಿ,ಒಣ ದ್ರಾಕ್ಷಿ ಮತ್ತು ಕರ್ಜೂರ ಗಳಲ್ಲಿ ಹೆಚ್ಚು ಕ್ಯಾಲರಿ (Calorie) ಅಂಶಗಳು ಹೊಂದಿರುತ್ತವೆ ಮತ್ತು ನಾರಿನಾಂಶದ ಡ್ರೈ ಫ್ರೂಟ್ ಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ತೂಕ ಹೆಚ್ಚಿಸಬಹುದು.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಸಾಕಷ್ಟು ಪೊಟಾಸಿಯಂ (Potassium) ಮತ್ತು ಮೆಗ್ನೀಷಿಯಂ ಇದ್ದು, ಆರೋಗ್ಯಕ್ಕೆ ಒಳ್ಳೆಯದು ಮತ್ತು ತೂಕವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತವೆ.

ಮೊಟ್ಟೆ: ಮೊಟ್ಟೆಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಒಳ್ಳೆಯ ಗುಣಮಟ್ಟದ ಪ್ರೋಟೀನ್ (Protien) ಇದ್ದು, ಮೊಟ್ಟೆಯ ಹಳದಿ ಭಾಗವು ಸ್ಯಾಚುರೇಟೆಡ್ ಫ್ಯಾಟ್ ಆಸಿಡ್ (Saturated Fat Acid) ಅಂಶವನ್ನು ಹೊಂದಿರುತ್ತದೆ. ಇದು ದೇಹಕ್ಕೆ ಬೇಕಾಗಿರುವ ಒಳ್ಳೆಯ ಕೊಬ್ಬಿನಂಶ ಇದರಲ್ಲಿ ದೊರೆಯುತ್ತದೆ. ದಿನನಿತ್ಯ ಕನಿಷ್ಠ ಪಕ್ಷ ಎರಡು ಮೊಟ್ಟೆ ತಿನ್ನುವುದರಿಂದ, ನಿಮ್ಮ ತೂಕವನ್ನು ಹೆಚ್ಚಿಸಬಹುದಾಗಿದೆ.

ಅನ್ನ : ಅನ್ನದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ಸ್ (Carbohydrates) ಇರುವ ಕಾರಣದಿಂದ ಸೇವಿಸಿದರೆ ಅನೇಕ ಕ್ಯಾಲರಿಗಳು ದೇಹಕ್ಕೆ ದೊರೆಯುತ್ತವೆ, ಇದರಿಂದ ತೂಕವನ್ನು ಜಾಸ್ತಿ ಮಾಡುವುದಲ್ಲದೆ ಅಕ್ಕಿಯಿಂದ ಮಾಡಿದ ತಿನಿಸುಗಳನ್ನು ಸೇವಿಸಿದರೆ ತೂಕ ಹೆಚ್ಚಿಸಬಹುದು.

ಹಾಲು: ಹಾಲಿನಲ್ಲಿ ಅನೇಕ ಕ್ಯಾಲೋರಿಗಳು, ಪ್ರೋಟೀನ್, ಕ್ಯಾಲ್ಸಿಯಂ (Calcium) ಮುಂತಾದ ಅಂಶಗಳು ಇರುತ್ತವೆ, ಹಾಲನ್ನು ಸೇವಿಸಿದರೆ ಮೂಳೆಗಳು ಗಟ್ಟಿಯಾಗುವುದು ಅಷ್ಟೇ ಅಲ್ಲದೆ ಒಂದು ಲೋಟ ಹಾಲು ಕುಡಿಯುವುದರಿಂದ ತೂಕವನ್ನು ಹೊಂದುತ್ತದೆ.

ಡೈರಿ ಉತ್ಪನ್ನಗಳು : ಡೈರಿ ಉತ್ಪನ್ನಗಳಾದ ಮೊಸರು ಮತ್ತು ಚೀಸ್ (Cheese) ಇತ್ಯಾದಿಗಳನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು, ಇದರಲ್ಲಿ ಕ್ಯಾಲೋರಿಸ್ ಹೆಚ್ಚು ಪ್ರಮಾಣದಲ್ಲಿ ಇದ್ದು, ಮೊಸರಿನಲ್ಲಿ ಪ್ರೋಟಿನ್ (Protien) ಅಂಶವಿರುವ ಕಾರಣ ಇದನ್ನು ತಿಂದರೆ ನೀವು ತೂಕ ಹೆಚ್ಚಿಸಿಕೊಳ್ಳಬಹುದು.

ಧನಂಜಯ್

Exit mobile version