ಹೊಸ ದಾಖಲೆ ಬರೆದ ಚುನಾವಣಾ ಆಯೋಗ: ಚುನಾವಣೆಗೂ ಮೊದಲೇ 4,658 ಕೋಟಿ ಮೌಲ್ಯದ ವಸ್ತುಗಳ ವಶ

New Delhi: ಭಾರತದ ಚುನಾವಣೆಗಳ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಚುನಾವಣಾ ಆಯೋಗ (EC Sets New Record) ಮಾಡಿದ್ದು, 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ

ಮೌಲ್ಯದ ಅಕ್ರಮ ವಸ್ತುಗಳನ್ನು ಚುನಾವಣಾ ಆಯೋಗ ತನ್ನ ವಶಕ್ಕೆ ಪಡೆದುಕೊಂಡಿದೆ. ಕೇಂದ್ರ ಚುನಾವಣಾ ಆಯೋಗ (Election Commission) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ

ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂಪಾಯಿ ಮೌಲ್ಯದ (EC Sets New Record) ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಗತಿಯನ್ನು ಆಯೋಗ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ಮಾರ್ಚ್ (March) 1 ರಿಂದ ಏಪ್ರಿಲ್ 13ರ ವರೆಗೆ ವಶಪಡಿಸಿಕೊಂಡ ವಸ್ತುಗಳ ವಿವರಗಳನ್ನು ಆಯೋಗ ತಿಳಿಸಿದೆ. ಇನ್ನು 2019

ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಒಟ್ಟು 3,475 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ, ಡ್ರಗ್ಸ್, (Drugs) ಉಚಿತ ಉಡುಗೊರೆ ಸೇರಿದಂತೆ ಅನೇಕ ವಸ್ತುಗಳನ್ನು

ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಚುನಾವಣೆ ನಡೆಯುವ ಮೊದಲೇ ಕಳೆದ ವರ್ಷದ ದಾಖಲೆಯನ್ನು ಸರಿಗಟ್ಟಲಾಗಿದೆ. ಕರ್ನಾಟಕ (Karnataka) ದಿಂದ 35 ಕೋಟಿ ರೂಪಾಯಿ ನಗದು, 1.30 ಕೋಟಿ

ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ವಶಕ್ಕೆ ಪಡೆದ ವಸ್ತುಗಳ ವಿವರ :
ನಗದು – 395.39 ಕೋಟಿ ರೂಪಾಯಿ
ಮದ್ಯ – 489.31 ಕೋಟಿ ರೂಪಾಯಿ
ಡ್ರಗ್ಸ್ – 2,068 ಕೋಟಿ ರೂಪಾಯಿ
ಅಮೂಲ್ಯ ಲೋಹ– 562.10 ಕೋಟಿ
ಉಚಿತ ಉಡುಗೊರೆ – 1,142.49 ಕೋಟಿ

ಇನ್ನು 2024ರ ಲೋಕಸಭಾ ಚುನಾವಣಾಯನ್ನು ಒಟ್ಟು 7 ಹಂತಗಳಲ್ಲಿ ನಡೆಸಲಾಗುತ್ತಿದ್ದು, ಕರ್ನಾಟದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ

14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಹಾಗೂ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಜೂನ್ (June) 4ರಂದು ದೇಶದ 543 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

ಇದನ್ನು ಓದಿ: ಚೊಂಬು ನೀಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡಿಗರೂ ಚೊಂಬು ನೀಡಬೇಕು : ಕಾಂಗ್ರೆಸ್ ನಿಂದ ವ್ಯಂಗ್ಯಭರಿತ ಜಾಹೀರಾತು ಪ್ರಕಟ

Exit mobile version