ಬೆಟ್ಟಿಂಗ್ ಆ್ಯಪ್​ ಪ್ರವರ್ತಕರಿಂದ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ 508 ಕೋಟಿ ಲಂಚ​: ಇ.ಡಿ ಗಂಭೀರ ಆರೋಪ

Chattisgarh: ಛತ್ತೀಸ್​ಗಢದಲ್ಲಿ ಇನ್ನೇನು ಚುನಾವಣೆ ಹತ್ತಿರವಾಗುತ್ತಿರುವಾಗಲೇ ಮಹದೇವ್ ಬೆಟ್ಟಿಂಗ್ ಆ್ಯಪ್​ (ED complain about Chhattisgarh cm) ಪ್ರವರ್ತಕರಿಂದ ಮುಖ್ಯಮಂತ್ರಿ

ಬಘೇಲ್ ಅವರು 508 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದ್ದು, ಭೂಪೇಶ್ ಬಘೇಲ್ (Bhupesh Baghel) ಅವರಿಗೆ ಸಂಕಷ್ಟ ಎದುರಾಗಿದೆ.

ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿದ್ದು, ಆರೋಪಗಳನ್ನು ಬಘೇಲ್ ಅಲ್ಲಗಳೆದಿದ್ದಾರೆ. ಇದೊಂದು ತಮಾಷೆ ಎಂದು ಅವರು ಲೇವಡಿ ಮಾಡಿದ್ದು, ಕ್ಯಾಷ್ ಕೊರಿಯರ್’ನ (Cash Courier)

ಅಸೀಮ್ ದಾಸ್ ಹೇಳಿಕೆ, ಮಹದೇವ್ ಆ್ಯಪ್​ನ ಉನ್ನತ ಕಾರ್ಯನಿರ್ವಹಣಾಧಿಕಾರಿ ಶುಭಂ ಸೋನಿ ಅವರ ಫೋನ್ ಮತ್ತು ಇಮೇಲ್‌ಗಳ ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ ಜಾರಿ

ನಿರ್ದೇಶನಾಲಯ (ED complain about Chhattisgarh cm) ಹೇಳಿಕೆ ನೀಡಿದೆ.

ಅಸೀಮ್ ದಾಸ್​ನನ್ನು (Aseem Das) ಗುರುವಾರ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಮಹದೇವ್ ಆ್ಯಪ್‌ನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಶುಭಂ ಸೋನಿ ತನಗೆ 5.39 ಕೋಟಿ ರೂಪಾಯಿ

ನಗದು ನೀಡಿದ್ದರು ಮತ್ತು ಇದನ್ನು ಛತ್ತೀಸ್​​ಗಢದ ಮುಖ್ಯಮಂತ್ರಿಯವರ ಸಹವರ್ತಿಗಳಿಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದರು ಎಂದು ವಿಚಾರಣೆಯ ಸಮಯದಲ್ಲಿ ದಾಸ್ ಒಪ್ಪಿಕೊಂಡಿದ್ದಾನೆ ಎಂದು ಇಡಿ

ಹೇಳಿಕೊಂಡಿದೆ.

ಈ ಹಿಂದೆ ನಿಯಮಿತ ಪಾವತಿಗಳನ್ನು ಮಾಡಲಾಗಿದೆ ಮತ್ತು ಇದುವರೆಗೆ ಸುಮಾರು 508 ಕೋಟಿ ರೂ.ಗಳನ್ನು ಮಹದೇವ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್

ಅವರಿಗೆ ಪಾವತಿಸಿದ್ದಾರೆ. ಅಸೀಂ ದಾಸ್‌ನಿಂದ ವಶಪಡಿಸಿಕೊಳ್ಳಲಾದ ಫೋನ್‌ನಿಂದ ವಶಪಡಿಸಿಕೊಂಡ ಫೊರೆನ್ಸಿಕ್ (Forensic) ಮತ್ತು ಡಿಜಿಟಲ್ (Digital) ಸಾಕ್ಷ್ಯಗಳು ಸಹ ಅವರು ಮಾಡಿದ

ಆರೋಪಗಳನ್ನು ದೃಢೀಕರಿಸುತ್ತವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಲುಕ್ಔಟ್ ನೋಟಿಸ್ (Lookout Notice) ಸಹ ಹೊರಡಿಸಲಾಗಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ಬಘೇಲ್ ತಿರಸ್ಕಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ತಮ್ಮ ಸರ್ಕಾರವೇ ಆರಂಭಿಸಿತ್ತು

ಎಂದು ಅವರು ತಿರುಗೇಟು ನೀಡಿದ್ದಾರೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೆವು ಮತ್ತು 400 ಜನರನ್ನು ಬಂಧಿಸಿದ್ದೇವೆ. ಕೇಂದ್ರ ಸರ್ಕಾರವು ಪ್ರವರ್ತಕರ ವಿರುದ್ಧ ಏಕೆ ರೆಡ್-ಕಾರ್ನರ್ ನೋಟಿಸ್

ಹೊರಡಿಸುತ್ತಿಲ್ಲ ಅವರು ಯಾಕೆ ಆ್ಯಪ್ ಅನ್ನು ಬ್ಯಾನ್ (Ban) ಮಾಡುತ್ತಿಲ್ಲ ಎಂದು ಬಘೇಲ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಗೋಮಾಂಸ ರಫ್ತಿನ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು : ನಟ ಚೇತನ್

Exit mobile version