ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(Foreign Exchange Law Violation) 1999ರ ಅಡಿಯಲ್ಲಿ ಮಂಗಳೂರಿನ(Mangaluru) ಮುಕ್ಕಾ ಕಂಪನಿಯ(Mukka Group) ಮಾಲೀಕ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ED) ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಂಸ್ಥೆ ಮಂಗಳವಾರ ತಿಳಿಸಿದೆ.
ಮಂಗಳೂರು ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್ ಮಾಲೀಕ ಕೆ. ಮೊಹಮ್ಮದ್ ಹ್ಯಾರಿಸ್ ಗೆ ಸೇರಿದ ಎರಡು ವಸತಿ ಗೃಹಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಅನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
FEMA ಕಾಯ್ದೆ ಉಲ್ಲಂಘಿಸಿ ವಿದೇಶದಲ್ಲಿ ಮುಕ್ಕಾ ಗ್ರೂಪ್ ಆಸ್ತಿ ಹೊಂದಿತ್ತು. ಕೆ. ಮೊಹಮ್ಮದ್ ಹ್ಯಾರಿಸ್ ಯುಎಇಯಲ್ಲಿ ಫ್ಲಾಟ್ ಅನ್ನು ಕೂಡ ಹೊಂದಿದ್ದರು.
ಈ ಸಂಬಂಧ ದೊರೆತ ಮಾಹಿತಿ ಆಧಾರಿಸಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ 17.34 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ತನಿಖೆಯ ಸಂದರ್ಭದಲ್ಲಿ, ಹ್ಯಾರಿಸ್ ಅಜ್ಮಾನ್ ಯುಎಇಯಲ್ಲಿ ಫ್ಲಾಟ್ ಅನ್ನು ಖರೀದಿಸಿದ್ದು,
ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆಗಳು/ಷೇರುಗಳನ್ನು ಹೊಂದಿದ್ದಾರೆ, ಇದರ ಸಂಪೂರ್ಣ ಮೌಲ್ಯ 17,34,80,746 ರೂ ಆಗಿದೆ. ಇದು FEMA ನ ವಿಭಾಗ 4ರ ಉಲ್ಲಂಘನೆಯಾಗಿದೆ.
FEMAದ ಸೆಕ್ಷನ್ 37A ಅಡಿಯಲ್ಲಿ ನಿಬಂಧನೆಗಳ ಪ್ರಕಾರ, ಭಾರತದ ಹೊರಗೆ ಇರುವ ಯಾವುದೇ ವಿದೇಶಿ ವಿನಿಮಯ, ವಿದೇಶಿ ಭದ್ರತೆ ಅಥವಾ ಸ್ಥಿರ ಆಸ್ತಿಯನ್ನು FEMA ದ ಸೆಕ್ಷನ್ 4 ರ ವಿರುದ್ಧ ಎಂದು ಹೇಳಲಾಗಿದೆ. https://vijayatimes.com/us-dump-garbage-in-pakistan/
