ಸಾರ್ವಜನಿಕರು ಶಿಕ್ಷಣ ಸಂಸ್ಥೆಗಳಿಗೆ ಸ್ವಯಂಪ್ರೇರಿತವಾಗಿ ನೀಡುವ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ಇದೆ : ಹೈಕೋರ್ಟ್‌

Bengaluru (ಜೂ.29): ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡುವ ದೇಣಿಗೆಗೆ (educational institutions donations taxfree) ಆದಾಯ ತೆರಿಗೆ

ವಿನಾಯಿತಿ ಇದೆ ಎಂದು ಹೈಕೋರ್ಟ್‌(High Court) ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ (P.S Dinesh Kumar) ಅವರ ನೇತೃತ್ವದ ವಿಭಾಗೀಯ ಪೀಠ,

ರಾಜ್ಯ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನಂತರ ಮೇಲ್ಮನವಿ ವಜಾ ಮಾಡಿ ಈ (educational institutions donations taxfree) ಆದೇಶ ಮಾಡಿದೆ.

ಬೆಂಗಳೂರಿನ ‘ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌’(National Education Committee Trust) 2012-13ನೇ ಆರ್ಥಿಕ ವರ್ಷದಲ್ಲಿ ತನ್ನ ಆದಾಯ ಶೂನ್ಯ ಎಂದು ಆದಾಯ ತೆರಿಗೆ ರಿಟನ್ಸ್‌

(Income Tax Returns) ಸಲ್ಲಿಸಿ, ತಿಳಿಸಿತ್ತು.ಹೆಚ್ಚಿನ ವಿವರಣೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಟ್ರಸ್ಟ್‌ಗೆ ಆ ಬಗ್ಗೆ ಪರಿಶೀಲನೆ ನಡೆಸಿದ ನಂತರ ನೋಟಿಸ್‌ ನೀಡಿತ್ತು. ಒಟ್ಟು 27.23 ಕೋಟಿ ರು ಹಣವನ್ನು

ಸಾರ್ವಜನಿಕರು ದೇಣಿಗೆಯಾಗಿ ನೀಡಿದ್ದಾರೆ. ಇತರೆ ಆದಾಯ ಮೂಲವಾಗಿ ಅದನ್ನು ತೋರಿಸಲಾಗಿದೆ. ಜತೆಗೆ ತೆರಿಗೆ ಪಾವತಿಯಿಂದ ವಿನಾಯಿತಿ ಈ ಆದಾಯಕ್ಕೆ ಇದೆ ಎಂದು ಟ್ರಸ್ಟ್‌ ಪರಿಷ್ಕೃತ ರಿಟನ್ಸ್‌

ಸಲ್ಲಿಸಿ ಸ್ಪಷ್ಟೀಕರಣ ನೀಡಿತ್ತು.

ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

ಹೆಚ್ಚುವರಿ ಆದಾಯ ತೆರಿಗೆ (ವಿನಾಯಿತಿ) ಆಯುಕ್ತರು ಈ ಪ್ರಕಾರಣವನ್ನು 2015ರಲ್ಲಿ ಮತ್ತೆ ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡಿ ಇತರೆ ಆದಾಯ ಸಹ ಟ್ರಸ್ಟ್‌ನ ಆದಾಯವೇ ಆಗಿದೆ ಎಂದು ಆದೇಶಿಸಿತ್ತು.

ಆದಾಯ ತೆರಿಗೆ (ಮೇಲ್ಮನವಿ) ಆಯುಕ್ತರು ಈ ಆದೇಶವನ್ನು ಎತ್ತಿಹಿಡಿದಿದ್ದರು. ಆದರೆ, ಈ ಆದೇಶವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ಆದಾಯ ತೆರಿಗೆ ವಿನಾಯ್ತಿ

ಪಡೆಯಲು ಅರ್ಹವಾಗಿದೆ ಎಂದು 2018ರ ಏ.6ರಂದು ರದ್ದುಪಡಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಆದೇಶಿಸಿತ್ತು.

ಆದಾಯ ತೆರಿಗೆ ಇಲಾಖೆ ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್‌ ಈ ಮೇಲ್ಮನವಿಯನ್ನು ವಜಾಗೊಳಿಸಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 12(ಎ) ಅಡಿಯಲ್ಲಿ

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ನೋಂದಣಿಯಾಗಿದೆ.ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 11 ಮತ್ತು 12 ಅಡಿಯಲ್ಲಿ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿರುವ ಚಾರಿಟಬಲ್‌ ಶಿಕ್ಷಣ ಸಂಸ್ಥೆಗಳು ತೆರಿಗೆ

ಪಾವತಿಯಿಂದ ವಿನಾಯ್ತಿ ಪಡೆದಿರುತ್ತವೆ. ಹಾಗಾಗಿ ಶಿಕ್ಷಣಕ್ಕೆ ದೇಣಿಗೆ ರೂಪದಲ್ಲಿ ಬರುವ ಎಲ್ಲ ಹಣವನ್ನು ಬಳಸಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ರಶ್ಮಿತಾ ಅನೀಶ್

Exit mobile version