ವಿಶ್ವಾಸ ಗೆದ್ದ ಶಿಂಧೆ ; ಮಹಾರಾಷ್ಟ್ರದಲ್ಲಿ ಕೇಸರಿ ದರ್ಬಾರ್‌ ಶುರು

Eknath Shinde

ಮುಂಬೈ : ಕಳೆದ ಅನೇಕ ದಿನಗಳಿಂದ ಮಹಾರಾಷ್ಟ್ರದ ರಾಜಕೀಯದಲ್ಲಿ(Maharashtra Politics) ನಡೆಯುತ್ತಿದ್ದ, ಮಹಾ ಹೈಡ್ರಾಮಾಕ್ಕೆ ಇಂದು ಅಂತಿಮ ತೆರೆಬಿದ್ದಿದೆ.

ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ನೇತೃತ್ವದ ಮೈತ್ರಿಕೂಟ ಸರ್ಕಾರ ಪತನವಾಗಿ, ಶಿವಸೇನೆಯ ಬಂಡಾಯ ಶಾಸಕರು(Eknath shinde maharashtra politics) ಮತ್ತು ಬಿಜೆಪಿ(BJP) ನೇತೃತ್ವದ ಮೈತ್ರಿಕೂಟ ಸರ್ಕಾರ ರಚನೆಯಾಗಿದೆ.

ರಾಜ್ಯಪಾಲರ ಸೂಚನೆಯಂತೆ ಮುಖ್ಯಮಂತ್ರಿ ಏಕನಾಥ್‌ಶಿಂಧೆ(Eknath shinde maharashtra politics) ಇಂದು ವಿಶ್ವಾಸಮತಯಾಚನೆ ಗೆದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಇಂದಿನಿಂದ ಕೇಸರಿ ದರ್ಬಾರ್‌ ಶುರುವಾಗಿದೆ.

ಇಂದು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಪರವಾಗಿ, ೧೬೪ ಶಾಸಕರು ಮತ ಚಲಾಯಿಸಿದರು. ವಿರುದ್ದವಾಗಿ ೯೯ ಶಾಸಕರು ಮತಚಲಾಯಿಸಿದರು.

https://vijayatimes.com/bhairav-singh-is-a-environmentalist/

ಈ ಮೂಲಕ ಬಿಜೆಪಿ ಬೆಂಬಲಿತ ಶಿವಸೇನೆ ಬಂಡಾಯ ಸರ್ಕಾರ ಅಧಿಕಾರ ಹಿಡಿದಿದೆ. ಪರೋಕ್ಷವಾಗಿ ಬಿಜೆಪಿ ತನ್ನದೇ ಸರ್ಕಾರ ರಚಿಸಿ ಗೆದ್ದು ಬೀಗಿದೆ. ಇನ್ನು ಮಹಾರಾಷ್ಟ್ರದ ವಿಧಾನಸಭೆಯೂ ಒಟ್ಟು ೨೮೮ ಸದಸ್ಯ ಬಲವನ್ನು ಹೊಂದಿದ್ದು, ಸರಳ ಬಹುಮತಕ್ಕೆ ೧೪೫ ಸದಸ್ಯರ ಬೆಂಬಲ ಅಗತ್ಯವಾಗಿತ್ತು. 
ಆದರೆ ಒರ್ವ ಶಾಸಕರ ನಿಧನದಿಂದ ಸರಳ ಬಹುಮತಕ್ಕೆ ೧೪೪ ಸದಸ್ಯರ ಬೆಂಬಲ ಬೇಕಿತ್ತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106, ಶಿವಸೇನೆ 55, ಎನ್ಸಿಪಿ 53, ಕಾಂಗ್ರೆಸ್ 44, , ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ 2, ಎಐಎಂಐಎಂ 2, ರಾಷ್ಟ್ರೀಯ ಸಮಾಜ ಪಕ್ಷ 1, ಸಿಪಿಐ 1, ಸ್ವಾಭಿಮಾನಿ ಪಕ್ಷ 1, , ಪ್ರಹರ್ ಜನಶಕ್ತಿ 1 ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಸದಸ್ಯ ಬಲವನ್ನು ಹೊಂದಿವೆ.
Exit mobile version