ಚುನಾವಣಾ ಬಾಂಡ್ ಹಗರಣ ಭಾಗ-4: ಕಳಪೆ ಔಷಧ ತಯಾರಿಸುವ ಕಂಪನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು?

ಚುನಾವಣಾ ಬಾಂಡ್‌ ಹಗರಣದ (Electoral Bond Scam) ಮತ್ತೊಂದು ಭಯಾನಕ ಮಾಹಿತಿ ಇದಾಗಿದ್ದು, ಕೊರೋನಾ ಕಾಲದಲ್ಲಿ ಜನರ ಪ್ರಾಣದ ಜೊತೆ ಚಲ್ಲಾಟವಾಡಿ, ಅದೆಷ್ಟೋ ಜನರ ಪ್ರಾಣ ಬಲಿ ಪಡೆದ ನಕಲಿ ಔಷಧಿ ತಯಾರಕಾ ಸಂಸ್ಥೆ ಕೂಡ ಚುನಾವಣಾ ಬಾಂಡ್‌ ಖರೀದಿಸಿದೆ. ಚುನಾವಣಾ ಬಾಂಡ್‌ ಖರೀದಿಸಿದ ಬಳಿಕ ಇದರ ಪಾಪವೆಲ್ಲಾ ಮನ್ನಾ ಆಗಿದೆ. ಯಾಕೆ? ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಕಂಪೆನಿ ಯಾವುದು ಗೊತ್ತಾ?
ಖರೀದಿದಾರರ ಹೆಸರು: ಗುಜರಾತಿನ ಝೈಡಸ್ ಹೆಲ್ತ್ ಕೇರ್
ದೇಣಿಗೆಯ ಒಟ್ಟು ಮೊತ್ತ : 29 ಕೋಟಿ ರೂ..
ಪಕ್ಷದ ಹೆಸರು: ಬಿಜೆಪಿ

ಈ ಝೈಡಸ್ ಹೆಲ್ತ್ ಕೇರ್ ಕಂಪನಿ (Zydus Health Care Company) ಅಂದರೆ ರೆಮ್ ಡಿಸಿವಿರ್ ಅನ್ನೋ ಔಷಧಿಯನ್ನು ತಯಾರಿಸಿದ ಕಂಪನಿಯಾಗಿದ್ದು, ನಿಮಗೆಲ್ಲ ನೆನಪಿರಬಹುದು ಕೊರೊನ ಅಟ್ಟಹಾಸದ ಸಂದರ್ಭದಲ್ಲಿ ಇದೇ ರೆಮ್‌ ಡಿಸಿವಿರ್ ಔಷಧಿಯನ್ನು ಸಂಜೀವಿನಿ ಅಂತ ಬಿಂಬಿಸಲಾಯಿತು. ಸರ್ಕಾರವೇ ಮುಂದೆ ನಿಂತು ಕೊರೋನಾ ರೋಗಿಗಳಿಗೆ ರೆಮ್ ಡಿಸಿವಿರ್ (Rem Disivir) ಯನ್ನೆ ಕೊಡಿ ಅಂತ ಮಾರ್ಗಸೂಚಿಯನ್ನು ಸಹ ಹೊರಡಿಸಿತ್ತು.

ಇದೇ ಮಾರ್ಗಸೂಚಿಯಿಂದ ಈ ಔಷಧೀಯ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಪ್ರಾಣದ ಜೊತೆ ಆಟವಾಡಿತ್ತು. ನೂರು ರೂಪಾಯಿಯ ಔಷಧಿಗೆ ಲಕ್ಷ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಝೈಡಸ್ ಹೆಲ್ತ್ ಕೇರ್’ಕಂಪೆನಿಯಂತು ಕೊರೋನಾ ಹೆಸರಲ್ಲಿ ಕೋಟಿ ಕೋಟಿ ಬಾಚಿತು. ಗುಜರಾತಿನ ಇದೇ ಕಂಪೆನಿ 2022 ಮತ್ತು 2023ರ ನಡುವೆ 29 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಖರೀದಿಸಿತು. ಯಾಕೆ? ಈ ಪ್ರಶ್ನೆಗೆ ಉತ್ತರ ತುಂಬಾ ಇಂಟರೆಸ್ಟಿಂಗ್ ಆಗಿದೆ.

ರೆಮ್ ಡಿಸಿವಿರ್ ಕೊರೊನ ಸೋಂಕಿತರಿಗೆ ನೀಡಬೇಡಿ: WHO!
ಕೊರೋನಾ (Corona) ಆರ್ಭಟದ ಕೆಲವೇ ದಿನಗಳ ಬಳಿಕ ಇದೇ ರೆಮ್ ಡಿಸಿವಿರ್‍ನ ಅಡ್ಡ ಪರಿಣಾಮದಿಂದ ಪ್ರಾಣ ಹೋಗ್ತಿದೆ ಅನ್ನೋ ಆರೋಪ ಕೇಳಿ ಬಂದಿತು. ನವೆಂಬರ್ (November) 2020ರಲ್ಲಿ ರೆಮ್ ಡಿಸಿವಿರ್ ಅನ್ನು ಕೊರೊನ ಸೋಂಕಿತರಿಗೆ ನೀಡಬಾರದು ಅಂತ WHO ಸಲಹೆ ಕೊಟ್ಟಿತ್ತು. ಯಾಕಂದ್ರೆ, ಇದು ಚಿಕಿತ್ಸೆಯ ಮೇಲೆ ಉತ್ತಮ ಪರಿಣಾಮ ಬೀರುತ್ತೆ ಅಥವಾ ಇದು ಜೀವಗಳನ್ನು ಉಳಿಸುತ್ತೆ ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು WHO ಸಷ್ಟವಾಗಿ ಹೇಳಿತ್ತು. ಆದರೆ ದುರಂತ ಏನಂದರೆ WHO ಸಲಹೆಯ ಒಂದೂಕಾಲು ವರ್ಷಗಳವರೆಗೆ ಈ ಔಷಧವನ್ನು ಭಾರತದಲ್ಲಿ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿತು.

ರೆಮ್ ಡಿಸಿವಿರ್ ಔಷಧ ಉತ್ಪಾದಿಸಿದ ಜನರ ಪ್ರಾಣ ತೆಗೆದ ಗುಜರಾತಿನ ಝೈಡಸ್ ಹೆಲ್ತ್ ಕೇರ್ ಕಂಪೆನಿ ಇಷ್ಟೊಂದು ದೊಡ್ಡ ಮೊತ್ತದ ಚುನಾವಣಾ ಬಾಂಡ್ ಯಾಕೆ ಖರೀದಿಸಿದೆ ಅಂತ. ತಾನು ಮಾಡಿದ ಗಂಭೀರ ಅಪರಾಧವನ್ನು ಮುಚ್ಚಿಹಾಕಲು. ಈ ಔಷದಿಯಲ್ಲಿ ಭಾರೀ ಹಾನಿಕಾರಕ ಅಂಶಗಳಿವೆ ಎಂಬ ಕಟು ಸತ್ಯ ತನಿಖಾ ವರದಿಯಲ್ಲಿ ಬಯಲಾದ್ರು, ಈ ಗುಜರಾತಿ ಕಂಪೆನಿ ವಿರುದ್ಧ ಕೇಂದ್ರ ಸರ್ಕಾರ (Central Government) ಕೂಡ ಏನೂ ಕ್ರಮ ತೆಗೆದುಕೊಳ್ಳಲಿಲ್ಲ.

ಹೇಗಿದೆ ನೋಡಿ ರಾಷ್ಟ್ರಭಕ್ತಿ, ದೇಶ ಪ್ರೇಮದ ಹೆಸರಲ್ಲಿ ಜನರನ್ನು ಮರಳು ಮಾಡಿದ ಪಕ್ಷ ಜನರಿಗೆ ಹೇಗೆ ದ್ರೋಹ ಮಾಡಿತು. ಜನರ ಪ್ರಾಣಕ್ಕೇ ಬೆಲೆ ಕೊಡದ ಇಂಥಾ ರಾಜಕೀಯ ಪಕ್ಷಗಳು ಇನ್ನೇನು ದೇಶವನ್ನು ಉದ್ಧಾರ ಮಾಡುತ್ತಾರೆ ಎಂದು ನಾವು ನೀವೆಲ್ಲಾ ಯೋಚಿಸಬೇಕು. ಚುನಾವಣಾ ಬಾಂಡ್‌ ಹೆಸರಲ್ಲಿ ನಡೆದ ದೇಶದ್ರೋಹದ ಕೆಲಸ ಇಷ್ಟಕ್ಕೆ ಮುಗಿಯುವುದಿಲ್ಲ. ಚುನಾವಣಾ ಬಾಂಡ್ ಖರೀದಿಸಿದ್ದಕ್ಕಾಗಿ ಇಂತಹ ಮನೆಹಾಳ್ ಕಂಪನಿಗಳಿಗೆ ಲಕ್ಷ ಕೋಟಿಯ ಬಿಸಿನೆಸ್ (Business) ಕೂಡ ಸಿಕ್ಕಿದೆ ಅನ್ನೋದು ನಮ್ಮ ದೇಶದ ದೊಡ್ಡ ದುರಂತವಾಗಿದೆ.

ಭವ್ಯಶ್ರೀ ಆರ್ ಜೆ

Exit mobile version