ಅಸಭ್ಯ ಹೇಳಿಕೆ ; ಕೈ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಕಾರ್ಯದಿಂದ ನಿಷೇಧ..!

Haryana : ಹರಿಯಾಣದಲ್ಲಿ ಚುನಾವಣಾ (Elections in Haryana) ಪ್ರಚಾರದ ವೇಳೆ ಭಾರತೀಯ ಜನತಾ ಪಕ್ಷದ (election campaign banned Surjewala) ಸಂಸದೆ ಮತ್ತು ನಟಿ

ಹೇಮಾ ಮಾಲಿನಿ (Hema Malini) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಕಾಂಗ್ರೆಸ್ (Congress) ನಾಯಕ ರಣದೀಪ್

ಸುರ್ಜೇವಾಲಾ (Randeep Surjewala) ಅವರನ್ನು ಚುನಾವಣಾ (election campaign banned Surjewala) ಪ್ರಚಾರದಿಂದ 48 ಗಂಟೆಗಳ ಕಾಲ ನಿರ್ಬಂಧಿಸಿದೆ

ಚುನಾವಣಾ ಆಯೋಗವು (The Election Commission) ಮುಂದಿನ 48 ಗಂಟೆಗಳ ಕಾಲ ರಣ ದೀಪ್ ಸುರ್ಜೇವಾಲಾ (Randeep Surjewala) ಯಾವುದೇ ಸಾರ್ವಜನಿಕ ಸಭೆಗಳು, ಸಾರ್ವಜನಿಕ

ಮೆರವಣಿಗೆಗಳು, ಸಾರ್ವಜನಿಕ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಂದರ್ಶನಗಳು, ಮಾಧ್ಯಮಗಳಲ್ಲಿ (ಎಲೆಕ್ಟ್ರಾನಿಕ್, ಪ್ರಿಂಟ್, ಸಾಮಾಜಿಕ) (Electronic, Print, Social) ಸಾರ್ವಜನಿಕ

ಹೇಳಿಕೆಗಳನ್ನು ನಡೆಸದಂತೆ ನಿರ್ಬಂಧಿಸಿದೆ.

ಈ ತಿಂಗಳ ಆರಂಭದಲ್ಲಿ, ಚುನಾವಣಾ ಆಯೋಗವು ಸುರ್ಜೇವಾಲಾ (Surjewala) ವಿರುದ್ಧ ದೂರನ್ನು ಸ್ವೀಕರಿಸಿತು. ನಂತರ ಮಾದರಿ ನೀತಿ ಸಂಹಿತೆಯ (MCC) ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ

ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಚುನಾವಣಾ ಆಯೋಗವು ನೀಡಿದ ನೋಟಿಸ್ನಲ್ಲಿ, ಸುರ್ಜೇವಾಲಾ ಅವರು ನೀಡಿರುವ ಹೇಳಿಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಈ ಆಕ್ಷೇಪಾರ್ಹ ಹೇಳಿಕೆಯನ್ನು

ಆಯೋಗವು ಬಲವಾಗಿ ಖಂಡಿಸುತ್ತದೆ ಎಂದು (ECI) ಹೇಳಿದೆ. ಆದಾಗ್ಯೂ, ಆಯೋಗವು ರಾಜಕೀಯ ಪಕ್ಷಗಳು (Commission Political Parties) ಮತ್ತು ಅಭ್ಯರ್ಥಿಗಳಿಗೆ ಮಹಿಳೆಯರ ಗೌರವ ಮತ್ತು

ಘನತೆಗೆ ಚ್ಯುತಿ ತರುವಂತಹ ಯಾವುದೇ ಕಾರ್ಯಗಳು / ಕ್ರಿಯೆಗಳು / ಹೇಳಿಕೆಗಳಿಂದ ದೂರವಿರಲು ಸಲಹೆ ನೀಡಿದೆ

ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ (BJP) , ಕಲೆಕ್ಷನ್ ಏಜೆಂಟ್ (Collection Agent) ರಣದೀಪ್ ಸುರ್ಜೇವಾಲಾ ಅವರ ಮಹಿಳೆಯ ಕುರಿತ ಅಶ್ಲೀಲ ಹೇಳಿಕೆಗೆ ಅವರನ್ನು ಕೇಂದ್ರ

ಚುನಾವಣಾ ಆಯೋಗವು ಲೋಕಸಭಾ ಚುನಾವಣಾ (Lok Sabh) ಪ್ರಚಾರದಿಂದ ಬ್ಯಾನ್ ಮಾಡಿದೆ. ಇಷ್ಟಾದರೂ ಕಾಂಗ್ರೆಸ್ ಮೌನವಾಗಿದೆ. ಇದುವರೆಗೂ ಕ್ಷಮೆ ಕೇಳಿಲ್ಲ. ಪದೇ ಪದೆ ಕಾಂಗ್ರೆಸ್ಸಿಗರು

ಮಹಿಳೆಯರನ್ನು ಅವಮಾನಿಸುತ್ತಿದ್ದರೂ, ಯುವರಾಜ ರಾಹುಲ್ ಗಾಂಧಿ ಅವರು ಕೈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿರಲಿ, ಈ ಬಗ್ಗೆ ಮಾತೇ ಆಡುತ್ತಿಲ್ಲ. ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್

ಗಾಂಧಿಯವರೇ (Rahul Gandhi) , ರಾಜ್ಯದಲ್ಲಿ ಭಾಷಣ ಮಾಡಲು ನಿಮಗೆ ಯಾವ ಯೋಗ್ಯತೆ ಇದೆ? ನಾಡಿನ ಸ್ವಾಭಿಮಾನಿ ಮಹಿಳೆಯರು ನಿಮ್ಮನ್ನು ಕೇಳುತ್ತಿದ್ದಾರೆ ಉತ್ತರಿಸಿ. ಸುರ್ಜೇವಾಲಾ ಅವರ

ಹೇಳಿಕೆಯನ್ನು ನೀವು ಬೆಂಬಲಿಸುತ್ತಿರೋ? ಸ್ತ್ರೀಯನ್ನು ಕೀಳಾಗಿ ಕಾಣುವುದೇ ಕಾಂಗ್ರೆಸ್ಸಿನ (Congress) ಗ್ಯಾರಂಟಿಯೇ? ಎಂದು ಪ್ರಶ್ನಿಸಿದೆ.

ಇದನ್ನು ಓದಿ: ಅಚ್ಚೇ ದಿನ್ ಆಯೇಗಾ ಮಾತಿಗಷ್ಟೇ , ಇದುವರೆಗೂ ಒಳ್ಳೆದಿನ ಬರಲಿಲ್ಲ: ಸಿದ್ಧರಾಮಯ್ಯ

Exit mobile version