ಚುನಾವಣಾ ಬಾಂಡ್‌ ಪ್ರಕರಣ: ಎಸ್‌ಬಿಐ ನೀಡಿದ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಚುನಾವಣಾ ಆಯೋಗ

ಚುನಾವಣಾ ಆಯೋಗವು, ಸುಪ್ರೀಂ ಕೋರ್ಟ್ (Supreme Court) ನೀಡಿದ ಗಡುವಿಗಿಂತ ಒಂದು ದಿನ ಮೊದಲೇ ಬಹು ನಿರೀಕ್ಷಿತ (Electoral Bonds Case Update) ಚುನಾವಣಾ ಬಾಂಡ್ ಮಾಹಿತಿಯನ್ನು

ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ನೀಡಿರುವ ಮಾಹಿತಿಯನ್ನು ಮಾರ್ಚ್ 15ರಂದು ಸಂಜೆ 5ಗಂಟೆಯೊಳಗೆ ತನ್ನ ವೆಬ್ ಸೈಟ್‌ನಲ್ಲಿ

ಪ್ರಕಟಿಸುವಂತೆ ಸೂಚಿಸಿತ್ತು. ಆದರೆ, ಆಯೋಗ ಮಾರ್ಚ್‌ (March) 14ರಂದು ಸಂಜೆಯೇ ಪ್ರಕಟಿಸಿದೆ. ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಬಾಂಡ್‌ಗಳ ಕುರಿತು ಎರಡು ಪಟ್ಟಿಗಳನ್ನು ಪ್ರಕಟಿಸಲಾಗಿದ್ದು,

337 ಪುಟಗಳ ಮೊದಲ ಪಟ್ಟಿಯಲ್ಲಿ ಬಾಂಡ್‌ಗಳ ಮುಖಬೆಲೆ ಮತ್ತು ದಿನಾಂಕಗಳೊಂದಿಗೆ ಅವುಗಳನ್ನು (Electoral Bonds Case Update) ಖರೀದಿಸಿದ ಕಂಪನಿಗಳನ್ನು ಒಳಗೊಂಡಿವೆ.

426 ಪುಟಗಳ ಎರಡನೇ ಪಟ್ಟಿಯಲ್ಲಿ ರಾಜಕೀಯ ಪಕ್ಷಗಳ ಹೆಸರು, ಬಾಂಡ್‌ಗಳ ಮುಖಬೆಲೆ ಮತ್ತು ಅವುಗಳನ್ನು ನಗದೀಕರಿಸಿದ ದಿನಾಂಕಗಳು ಒಳಗೊಂಡಿವೆ. ಬಾಂಡ್‌ಗಳ ಸೀರಿಯಲ್ ನಂಬರ್

ವೆಬ್‌ಸೈಟ್‌ನಲ್ಲಿ (Website) ಒದಗಿಸಲಾಗಿಲ್ಲ. ಹಾಗಾಗಿ, ಎರಡು ಪಟ್ಟಿಗಳನ್ನು ಪರಸ್ಪರ ಸಂಬಂಧಿಸಲು ಮತ್ತು ಯಾವ ಕಂಪನಿ, ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಪ್ರಮುಖ 10 ಕಂಪನಿಗಳು :

  1. ಫ್ಯೂಚರ್ ಗೇಮಿಂಗ್ ಅಂಡ್ ಹೋಟೆಲ್ ಸರ್ವಿಸಸ್ ಲಿಮಿಟೆಡ್
  2. ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
  3. ಕ್ವಿಕ್ ಸಪ್ಲೈ ಚೈನ್ ಪ್ರೈ.ಲಿಮಿಟೆಡ್
  4. ವೇದಾಂತ ಲಿಮಿಟೆಡ್
  5. ಹಲ್ದಿಯಾ ಎನರ್ಜಿ ಲಿಮಿಟೆಡ್ (Haldiya energy Limited)
  6. ಎಸ್ಸೆಲ್ ಮೈನಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್
  7. ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್
  8. ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್
  9. ಎಂಕೆಜಿ ಎಂಟರ್‌ಪ್ರೈಸಸ್ ಲಿಮಿಟೆಡ್
  10. ಮದನ್‌ಲಾಲ್ ಲಿಮಿಟೆಡ್ (Madanlal Limited)

ಮಾರ್ಚ್ (March) 11ರಂದು ನೀಡಿರುವ ಆದೇಶದಲ್ಲಿ ಚುನಾವಣಾ ಬಾಂಡ್‌ (Election Bond) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಪಾಡು ಕೋರಿ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈ ಅರ್ಜಿಯ ವಿಚಾರಣೆ ಇಂದು (ಮಾರ್ಚ್ 15, ಶುಕ್ರವಾರ) ನಡೆಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ಈ ದಾಖಲೆಗಳ ಪ್ರತಿಗಳನ್ನು ತಾನು ಕಾದಿಟ್ಟುಕೊಂಡಿಲ್ಲ. ಹಾಗಾಗಿ ಪ್ರಕರಣದ ಕುರಿತ ದಾಖಲೆಗಳನ್ನು ತನಗೆ ಮರಳಿಸಿದರೆ

ಕೋರ್ಟ್ ನಿರ್ದೇಶನ ಪಾಲನೆ ಮಾಡಲು ಸಾಧ್ಯವಾಗಲಿದೆ ಎಂದು ಚುನಾವಣಾ ಆಯೋಗ (Election Commission of India) ಕೋರಿದೆ.

ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂ. ಇಳಿಕೆ: ಮಾರ್ಚ್ 15ರಂದು ಜಾರಿ

Exit mobile version