vijaya times advertisements
Visit Channel

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ: ಸಚಿವ ನಿತಿನ್ ಗಡ್ಕರಿ!

ethanol-blending-to-go-up-to-22-5-says-nitin-gadkari

ನವದೆಹಲಿ,ಫೆ.20: ದಿನ ನಿತ್ಯ  ಡೀಸೆಲ್ ಪೆಟ್ರೋಲ್ ಇಂಧನ ಬೆಲೆಗಳು ಎಗ್ಗಿಲ್ಲದೆ ಏರುತ್ತಿದ್ದು ಕೊರೋನಾದಿಂದ ಈಗಾಗಲೇ ಜನಸಾಮಾನ್ಯರು ಆರ್ಥಿಕ ನಷ್ಟ ಅನುಭವಿಸುವ ಈ ಸಂದರ್ಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ದೆಹಲಿಯಲ್ಲಿರುವ ಎಲ್ಲ ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯ ಮಾಡಲಾಗುವುದು ಎಂದು ಹೇಳಿದ್ದಾರೆ.

ಲಾಂಚ್ ಗೋ ಎಲೆಕ್ಟ್ರಿಕ್ ಅಭಿಯಾನದಲ್ಲಿ ಮಾತನಾಡಿದ ಸಚಿವ ಗಡ್ಕರಿ, ತೈಲೋತ್ಪನ್ನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಬೇಕು. ಈ ಅಭಿಯಾನವನ್ನು ತಮ್ಮ ಇಲಾಖೆಯಿಂದಲೇ ಆರಂಭಿಸುವುದಾಗಿ ಹೇಳಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದ್ದಾರೆ. ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರಿಗೆ ಸಲಹೆ ನೀಡಿದ ನಿತಿನ್ ಗಡ್ಕರಿ, ತಮ್ಮ ಇಲಾಖೆಗಳ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿದ್ದಾರೆ.

ಇದೇ ವೇಳೆ, ‘ಭಾರತದ ತೈಲ ಆಮದು ಅವಲಂಬನೆ ಕಡಿತಗೊಳಿಸುವ ಪ್ರಯತ್ನದಲ್ಲಿ ಇತರ ಇಲಾಖೆಗಳು ಕೂಡ ಸರ್ಕಾರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವಂತೆ ಅವರು ಸಲಹೆ ನೀಡಿದರು. ಒಂದು ಲೆಕ್ಕಾಚಾರದ ಪ್ರಕಾರ, ದೆಹಲಿಯಲ್ಲಿ 10,000 ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಸುಮಾರು 30 ಕೋಟಿ ರೂಪಾಯಿಯಷ್ಟು ಉಳಿತಾಯವಾಗಬಹುದು. ಎಲೆಕ್ಟ್ರಿಕ್ ಅಡುಗೆ ಉಪಕರಣಗಳನ್ನು ಬಳಸುವುದರಿಂದ ಆಮದು ಮಾಡಿದ ಅಡುಗೆ ಅನಿಲ ದರಕ್ಕಿಂತ ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡಬಹುದು ಎಂದು ಹೇಳಿದರು.

ಅಡುಗೆ ಅನಿಲ ದರ ಭಾರಿ ದುಬಾರಿಯಾಗಿದೆ. ಅಡುಗೆಗಾಗಿ ಆಮದು ಮಾಡಿದ ದುಬಾರಿ ಅನಿಲ ಖರೀದಿಸುವ ಬದಲು ವಿದ್ಯುತ್ ಒಲೆ ಉಪಕರಣಗಳನ್ನು ಖರೀದಿಸಲು ಸಹಾಯಧನ ನೀಡುವಂತೆ ಸಚಿವರು ಸಲಹೆ ನೀಡಿದರು. ನಾವು ವಿದ್ಯುತ್ ಉಪಕರಣಗಳಿಗೆ ಏಕೆ ಸಬ್ಸಿಡಿ ಕೊಡಬಾರದು? ಅಡುಗೆ ಅನಿಲ ಸಬ್ಸಿಡಿ ನೀಡುತ್ತಿರುವ ಮಾದರಿಯಲ್ಲಿ ವಿದ್ಯುತ್ ಉಪಕರಣಗಳಿಗೆ ಸಬ್ಸಿಡಿ ನೀಡಬಹುದು. ಇದರಿಂದ ಅನಿಲದ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

Latest News

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.

ದೇಶ-ವಿದೇಶ

ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

ಲೈಫ್ ಸ್ಟೈಲ್

ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ

Priyank
ರಾಜಕೀಯ

‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ – ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ (No bribe campaign) ತನಿಖೆಗೆ ವಹಿಸುತ್ತಿದ್ದರು.