ಎಲೆಕ್ಟ್ರಿಕ್ ಬೈಕ್​ಗಳು ಭರ್ಜರಿ ಸೇಲ್ : ಫ್ರೀ ಕರೆಂಟ್ ಘೋಷಣೆ ಬೆನ್ನಲ್ಲೇ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕರ್ನಾಟಕ : ರಾಜ್ಯದಲ್ಲಿ ಸರ್ಕಾರ ಉಚಿತ ವಿದ್ಯುತ್ (Electric products demand increasing) ನೀಡುತ್ತಿರುವುದರಿಂದ ಇ-ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಬೆಳಗಾವಿ ಗಡಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ

ಮಾರಾಟವಾಗುತ್ತಿದೆ. ದಿನವೊಂದಕ್ಕೆ ಎರಡರಿಂದ ಮೂರು ಬೈಕ್ ಮಾರಾಟ ಮಾಡುತ್ತಿದ್ದು, ಈಗ ದಿನಕ್ಕೆ ಎಂಟರಿಂದ ಹತ್ತು ಮಾರಾಟವಾಗುತ್ತಿದೆ ಎನ್ನುತ್ತಾರೆ ವಿತರಕರು. ಇಲ್ಲಿಯವರೆಗೆ 30 ಜನರು ಬೈಕ್‌ಗಳ ಬಗ್ಗೆ ವಿವರ

ಕೇಳಿದ್ದಾರೆ ಮತ್ತು ಇನ್ನೂ ಅನೇಕರು (Electric products demand increasing) ಖರೀದಿಸಿದರು.

ಕಳೆದ ಎರಡು ವಾರಗಳಲ್ಲಿ ಇ-ಬೈಕ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿವೆ. ಒಂದು ಬಾರಿ ಚಾರ್ಜ್ ಮಾಡಿದಾಗ ಕೇವಲ ಎರಡು ಯುನಿಟ್ ನಷ್ಟು ವಿದ್ಯುತ್ ಖರ್ಚಾಗುತ್ತದೆ ಆದ್ದರಿಂದ ಅನೇಕ ಜನರು

ಇ – ಬೈಸಿಕಲ್‌ಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಕೆಲ ದಿನಗಳ ಸ್ಟಾಕ್ ಮಾತ್ರ ಬಾಕಿ ಉಳಿದಿದ್ದು, ಬೇಡಿಕೆ ಹೀಗೆ ಮುಂದುವರಿದರೆ ಸ್ಟಾಕ್ ಖಾಲಿಯಾಗಲಿದೆ ಎಂದು ವಿತರಕರು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿಯೂ (Hassan) ಇ-ಬೈಕ್‌ಗೆ ಬೇಡಿಕೆ ಹೆಚ್ಚಿದ್ದು, 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆಯಾಗಿರುವುದರಿಂದ ಜನರು ಇ-ಬೈಕ್ ಖರೀದಿಸುವ ಪ್ರವೃತ್ತಿಯನ್ನು ಹೆಚ್ಚಿಸಿದ್ದಾರೆ.

ದುಬಾರಿ ಪೆಟ್ರೋಲ್ ಬೆಲೆಗೆ ಪರ್ಯಾಯವಾಗಿ ಹಾಸನದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಬೇಡಿಕೆ ಹೆಚ್ಚಿದೆ. ಜನರು ಬೈಕ್ ಖರೀದಿಸಲು ಶೋರೂಂಗಳಿಗೆ ಜನರು ಬೈಕ್ ಖರೀದಿಸಲು ಶೋರೂಂಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಎರಡು ಯುನಿಟ್ ಬಳಸಿದರೆ, 80 ಕಿ.ಮೀ ಪ್ರಯಾಣ ಮಾಡಬಹುದು. ಅಂದರೆ .80 ಕಿ.ಮೀ ವೆಚ್ಚ ಕೇವಲ 6 ರೂಪಾಯಿ, ಉಚಿತ ವಿದ್ಯುತ್ ಬಿಲ್ ಹೆಚ್ಚಿನ ಲಾಭದ ಕಾರಣ ಜನರು ಎಲೆಕ್ಟ್ರಿಕ್ ಬೈಕ್‌ಗಳನ್ನು ಖರೀದಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ : https://vijayatimes.com/icc-world-championship/

ಮತ್ತೊಂದೆಡೆ, ಇಂಡಕ್ಷನ್ ಕುಕ್ಕರ್‌ಗಳಿಗೆ(Induction Cooker) ಬೇಡಿಕೆಯೂ ಹೆಚ್ಚಾಗಿದೆ. ಇಂಡಕ್ಷನ್ ಕುಕ್ಕರ್ ಚೆನ್ನಾಗಿ ಮಾರಾಟವಾಗುತ್ತಿದೆ ಇದು ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಮಾರಾಟ ಮತ್ತಷ್ಟು ಹೆಚ್ಚಾಗುವ

ನಿರೀಕ್ಷೆ ಇದೆ. ಇಂಡಕ್ಷನ್ ಸ್ಟವ್​ ನಲ್ಲಿ ಆಹಾರವನ್ನು ವೇಗವಾಗಿ ಬೇಯಿಸಬಹುದು. ವಿದ್ಯುತ್ ಸ್ಟವ್ ಮಾಡೆಲ್, ಕಂಪೆನಿ, ವ್ಯಾಟ್ಸ್ ಮೇಲೆ ವಿದ್ಯುತ್ ಖರ್ಚು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, 2000-ವ್ಯಾಟ್ ಇಂಡಕ್ಷನ್ ಕುಕ್ಕರ್

ಒಂದು ಗಂಟೆಗೆ 2.2 ಯುನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಇದು ಉತ್ತಮ ಮಾರಾಟವಾಗಲಿದೆ ಪ್ರಸ್ತುತ ಗೀಸರ್(Geysers) ಕೂಡ ಮಾರಾಟ ಆಗಬಹುದು.

ಉಚಿತ ವಿದ್ಯುತ್‌ ಗ್ಯಾರಂಟಿ ಹಿನ್ನೆಲೆ ಎಲೆಕ್ಟ್ರಿಕ್ ಉತ್ಪನ್ನಗಳ ಖರೀದಿ ಪ್ರಮಾಣ ಗಣನೀಯವಾಗಿ ಏರಿಕೆ :

ಇದೀಗ ರಾಜ್ಯಾದ್ಯಂತ ಎಲ್ಲೆಡೆ ಎಲೆಕ್ಟ್ರಿಕ್ ಉತ್ಪನ್ನಗಳ ಖರೀದಿ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ರಾಜ್ಯದ ಎಲ್ಲೆಡೆ ವಿದ್ಯುತ್ ಉಕರಣಗಳಿಗೆ ಬೇಡಿಕೆ ಹೆಚ್ಚಾಗಿದ್ದು ಫ್ರಿಜ್, ಎಸಿ, ಎಲೆಕ್ಟ್ರಿಕ್ ಒಲೆ, ಫ್ಯಾನ್‌ಗಳ ಖರೀದಿ ಭರಾಟೆ

ಜೋರಾಗಿದೆ. ಸರ್ಕಾರ ಉಚಿತವಾಗಿ ನೀಡುವ 200 ಯೂನಿಟ್‌ ವಿದ್ಯುತ್‌ ಅನ್ನು ಸದುಪಯೋಗಪಡಿಸಿಕೊಳ್ಳಲು ಮತದಾರರು ಮುಂದಾಗಿದ್ದಾರೆ.

ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳನ್ನು ನಂಬಿಕೊಂಡು ಮತಹಾಕಿದ ಮತದಾರರು ಈಗ ಅವುಗಳ ಪ್ರಯೋಜನ ಪಡೆಯಲು ಮುಗಿಬಿದ್ದಿದ್ದಾರೆ. ಅದರಲ್ಲೂ 200 ಯೂನಿಟ್ ಉಚಿತ ವಿದ್ಯುತ್ ಸದ್ಬಳಕೆಗೆ ಜನ ಮುಂದಾಗಿದ್ದು,

ಗ್ಯಾಸ್‌ಬಿಟ್ಟು ವಿದ್ಯುತ್‌ಒಲೆ ಬಳಕೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ರಾಜ್ಯದ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಜನರು ಮುಂದಾಗುತ್ತಿಲ್ಲ. ಸರ್ಕಾರದ ಅಧಿಕೃತ ಆದೇಶ ಇನ್ನೂ ಬಂದಿಲ್ಲವಾದರೂ, ಜನರು

ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shiva Kumar)ಘೋಷಣೆ ಮಾಡಿದ್ದಾರೆ, ಹೀಗಾಗಿ ನಾವು ಬಿಲ್‌ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರತಿ ಮನೆ ಅಂದಾಜು 30-50 ಯೂನಿಟ್‌ವಿದ್ಯುತ್‌ಬಳಕೆ ಮಾಡುತ್ತದೆ. ಆದರೆ ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ ನೀಡಿರುವುದು ಜನರ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಜನರು ಹಗಲು-ರಾತ್ರಿ ಎನ್ನದೇ

ವಿದ್ಯುತ್‌ ಬಳಕೆ ಮಾಡಿದರೂ, 200 ಯೂನಿಟ್‌ ತಲುಪುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಜನರು 200 ಯೂನಿಟ್‌ ಉಚಿತ ವಿದ್ಯುತ್‌ಅನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ತಯಾರಿ

ಆರಂಭಿಸಿದ್ದಾರೆ. ರಾಜ್ಯದ ಹಳ್ಳಿ ಮತ್ತು ನಗರ ಪ್ರದೇಶದ ಜನ ಕಳೆದ ತಿಂಗಳಿಗಿಂತ ಈ ತಿಂಗಳು ಅತಿ ಹೆಚ್ಚು ವಿದ್ಯುತ್ ಬಳಕೆ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಎಲೆಕ್ಟ್ರಿಕ್ ಉತ್ಪನ್ನಗಳ ಖರೀದಿ

ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎನ್ನಲಾಗಿದೆ.

ರಶ್ಮಿತಾ ಅನೀಶ್

Exit mobile version