Bengaluru: ಇನ್ನು ಮುಂದೆ ನಿಮ್ಮ ಮೊಬೈಲ್ಗೆ (Emergency Alert – Sample Testing Message) ಭೂಕಂಪ, ಪ್ರವಾಹದಂತಹ ಪ್ರಾಕೃತಿಕ ದುರಂತದ ಸಮಯಕ್ಕೆ ಸರಿಯಾಗಿ ಎಚ್ಚರಿಕೆ
ಸಂದೇಶ ಬರಲಿದೆ. ತುರ್ತು ಸಂವಹ ನೀಡುವ ಸಲುವಾಗಿ ದೂರ ಸಂಪರ್ಕ ಇಲಾಖೆಯ ಜೊತೆಗೂಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ ಪ್ರಯೋಗಾರ್ಥ
ಪರೀಕ್ಷೆ ನಡೆಯಲಿದ್ದು, ಈ ಕುರಿತಾದ (Emergency Alert – Sample Testing Message) ವರದಿ ಈ ಕೆಳಕಂಡಂತಿದೆ.
ಪ್ರಾಕೃತಿಕ ವಿಕೋಪದಂತಹ ಸಮಯದಲ್ಲಿ ತುರ್ತು ಸಂವಹನವನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ವಿಪತ್ತು
ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ (Cell Broadcast Alert System) ಪರೀಕ್ಷೆಯನ್ನು ನಡೆಸುತ್ತಿದೆ.
ಈ ಎಚ್ಚರಿಕೆಯ ಸಂದೇಶ ವ್ಯವಸ್ಥೆಯು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಗೊತ್ತುಪಡಿಸಿದ ಆಯಾ ಭೌಗೋಳಿಕ ಪ್ರದೇಶದ ಎಲ್ಲಾ ನಿವಾಸಿಗಳ ಮೊಬೈಲ್ ಸಾಧನಗಳಿಗೆ ವಿಪತ್ತಿಗೆ ಸಂಬಂಧಿಸಿದಂತೆ
ನಿರ್ಣಾಯಕ ಮತ್ತು ಸೂಕ್ಷ್ಮ ಸಂದೇಶಗಳ ಜೊತೆಗೆ ನಿಗದಿತ ಸಮಯವನ್ನೂ ಕಳುಹಿಸಲು ಸಹಾಯವಾಗಿದೆ. ಪ್ರಮುಖ ತುರ್ತು ಮಾಹಿತಿಯು ಸಕಾಲಿಕವಾಗಿ ಸಾಧ್ಯವಾದಷ್ಟು ಜನರನ್ನು ತಲುಪುತ್ತದೆ
ಎಂಬುದನ್ನು ಇದು ಖಚಿತಪಡಿಸುತ್ತದೆ.
ತುರ್ತು ಮಾಹಿತಿಯ ಎಚ್ಚರಿಕೆಯನ್ನು ಸಂಭಾವ್ಯ ವಿಪತ್ತು ಸಾರ್ವಜನಿಕರಿಗೆ ತಿಳಿಸಲು ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಅವರಿಗೆ ಸರ್ಕಾರಿ ಸಂಸ್ಥೆಗಳ ಮೂಲಕ ತುರ್ತು ಸೇವೆಯನ್ನೂ ನೀಡಲೂ
ಸಹ ಇದು ಸೆಲ್ ಬ್ರಾಡ್ಕಾಸ್ಟ್ ಸಹಕಾರಿಯಾಗಲಿದ್ದು, ತೀವ್ರ ಹವಾಮಾನ ಎಚ್ಚರಿಕೆಗಳಾದ ಸುನಾಮಿ (Tsunami), ಫ್ಲ್ಯಾಶ್ ಫ್ಲಡ್ (Flash Flood), ಭೂಕಂಪನಗಳ ಬಗ್ಗೆ ಮಾಹಿತಿ ನೀಡಲಿದೆ.
ಎಚ್ಚರಿಕೆ ಸಂದೇಶ ಈ ರೀತಿಯಾಗಿರಲಿದೆ
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ (Cell Broadcasting System) ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ.
ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. “ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ
TEST ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ
ಗುರಿಯನ್ನು ಹೊಂದಿದೆ.
ಪ್ರತಿ ಟೆಲಿಕಾಂ (Telecom) ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಿಸ್ಟಮ್ನ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ವಿವಿಧ ಮೊಬೈಲ್ ಆಪರೇಟರ್ಗಳು ಮತ್ತು ಸೆಲ್
ಬ್ರಾಡ್ಕಾಸ್ಟ್ ಸಿಸ್ಟಮ್ಗಳ ತುರ್ತು ಎಚ್ಚರಿಕೆಯ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ
ನಡೆಸಲಾಗುತ್ತದೆ. ಈ ಪ್ರಯತ್ನದ ಭಾಗವಾಗಿ, ಕರ್ನಾಟಕದಲ್ಲಿ ಅಕ್ಟೋಬರ್ (October) 12 ರಂದು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಇದನ್ನು ಓದಿ: ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ
- ಭವ್ಯಶ್ರೀ ಆರ್.ಜೆ