ಕೊರೊನಾ ಕಾರಣ ಸಿಡ್ನಿಯಲ್ಲಿ ತುರ್ತುಪರಿಸ್ಥಿತಿ ಘೋಷಣೆ

ಸಿಡ್ನಿ, ಜು. 23: ಸಿಡ್ನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನ್ಯೂಸೌಥ್ ವೇಲ್ಸ್‌ ರಾಜ್ಯ ಸರ್ಕಾರ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಶುಕ್ರವಾರ ಆದೇಶಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಕೋವಿಡ್‌–19ನ 136 ಹೊಸ ಪ್ರಕರಣಗಳು ವರದಿಯಾಗಿದ್ದು, ಒಬ್ಬ ವ್ಯಕ್ತಿ ಮೃತ್ತಪಟ್ಟಿದ್ದಾರೆ. ಕಳೆದ ಜೂನ್‌ ಮಧ್ಯಭಾಗದಲ್ಲಿ ಇಲ್ಲಿ ಕೊರೊನಾ ಸೋಂಕು ಪ್ರಸರಣ ಹೆಚ್ಚಿದ ನಂತರ ಒಂದೇ ದಿನದಲ್ಲಿ ವರದಿಯಾಗಿರುವ ಗರಿಷ್ಠ ಪ್ರಕಣಗಳು ಇವಾಗಿವೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಲಾಗಿದೆ ಎಂದು ಮೂಲಗಳು ಹೇಳಿವೆ.

ಕೊರೊನಾ ವೈರಸ್‌ನ ಡೆಲ್ಟಾ ಪ್ಲಸ್‌ ತಳಿಯ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಸಿಡ್ನಿ, ವಿಕ್ಟೋರಿಯಾ ರಾಜ್ಯ ಹಾಗೂ ದಕ್ಷಿಣ ಆಸ್ಟ್ರೇಲಿಯಾದ ರಾಜ್ಯಗಳಲ್ಲಿ ಲಾಕ್‌ಡೌನ್‌ ಹೇರಲಾಗಿದೆ.

Exit mobile version