ರಾಜ್ಯದಲ್ಲಿ 1763 ವೈದ್ಯರ ನೇಮಕ ಪ್ರಕ್ರಿಯೆ ಅಂತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ

ಬೆಂಗಳೂರು, ಮೇ. 24: ಮಹಾಮಾರಿ ಕೊರೊನಾ ಹೊಡೆತದಿಂದ ತತ್ತರಿಸಿರುವ ಜನರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ
ರಾಜ್ಯದಲ್ಲಿ 1763 ವೈದ್ಯರ ನೇಮಕ ಪ್ರಕ್ರಿಯೆ ಅಂತ್ಯವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1763 ವೈದ್ಯರ ನೇಮಕ ಪ್ರಕ್ರಿಯೆ ಅಂತ್ಯವಾಗಿದ್ದು, 700 ತಜ್ಞ ವೈದ್ಯರು, 40 ENT, 40 ಗೈನಕಾಲಜಿಸ್ಟ್, 30 ಡರ್ಮಟಾಲಜಿಸ್ಟ್, 142 ಅರಿವಳಿಕೆ ತಜ್ಙರು,
153 ಮಕ್ಕಳ ತಜ್ಞರು, 51 ನೇತ್ರ ತಜ್ಞರ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ,ಬೆಂಗಳೂರಿನಲ್ಲಿ ಕೊರೊನಾ ಕೇಸ್ ಇಳಿಮುಖ ಕಂಡಿದೆ. ಇನ್ನೂ ರಾಜ್ಯದ ಸಾವಿರಾರು ಗ್ರಾಮ ಕೋವಿಡ್ ಮುಕ್ತವಾಗಿದ್ದು, ಸೋಂಕಿತರ ಸಂಖ್ಯೆ, ಪ್ರಮಾಣವೂ ಇಳಿದಿದೆ
ಕೆಲವು ಜಿಲ್ಲೆಗಳಲ್ಲೂ ಸೋಂಕು ಇಳಿಕೆಯಾಗಿದೆ. ಆದರೆ ಈವರೆಗೆ ರಾಜ್ಯದಲ್ಲಿ ಬ್ಲ್ಯಾಕ್​ ಫಂಗಸ್​ಗೆ 12 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಕುರಿತಂತೆ ಮಾಹಿತಿ ನೀಡಿದ ಅವರು, ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ ಕಠಿಣ ಶಿಕ್ಷೆ ಒದಗಿಸಲಿದ್ದು, 5 ವರ್ಷ ಸೆರೆವಾಸ, 1 ಲಕ್ಷ ರೂ. ದಂಡ ಶಿಕ್ಷೆ ವಿಧಿಸಲಾಗುತ್ತದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಬಳ್ಳಾರಿ ವಿಮ್ಸ್​ ವೈದ್ಯೆಗೆ ಹಲ್ಲೆ ಬಳಿಕ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

Exit mobile version