• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಓಮಿಕ್ರಾನ್‌ನಿಂದ ಮದುವೆ ಮುಂದೂಡಿಕೆ : ಪ್ರಧಾನಿಗೆ ಪತ್ರ ಬರೆದ ಯುವತಿ

Preetham Kumar P by Preetham Kumar P
in Vijaya Time
ಓಮಿಕ್ರಾನ್‌ನಿಂದ ಮದುವೆ ಮುಂದೂಡಿಕೆ : ಪ್ರಧಾನಿಗೆ ಪತ್ರ ಬರೆದ ಯುವತಿ
0
SHARES
0
VIEWS
Share on FacebookShare on Twitter

ಲಂಡನ್ ಡಿ 24 : ಕೊರೊನಾ ಬಂದ ಬಳಿಕ ಹಲವರ ಜೀವನ ಶೈಲಿಯೇ ಬದಲಾವಣೆಯಾಗಿದೆ ಜೊತೆಗೆ ಹಲವರ ಮದುವೆ ಕೂಡ ಮುಂದೂಡಿದ್ದ ಉದಾಹರಣೆಗಳು ಕೂಡ ಇವೆ. ಮದುವೆ ಮುಂದೂಡಿದ ಹಿನ್ನಲೆಯಲ್ಲಿ ಬೇಸರಗೊಂಡ ಯುವತಿಯೊಬ್ಬಳು ಪ್ರಧಾನಿಗೆ ಪತ್ರ ಬರೆದ ಘಟನೆ ಇಂಗ್ಲೆಂಡ್‌ನಲ್ಲಿ ನಡಿದಿದೆ.  ಹೆಚ್ಚುತ್ತಿರುವ ಒಮಿಕ್ರಾನ್ (Omicron) ಪ್ರಕರಣಗಳಿಂದಾಗಿ ಬ್ರಿಟಿಷ್ ಸರ್ಕಾರ ಕೂಡ ಲಾಕ್‌ಡೌನ್ Lockdown) ಹೇರಲು ಯೋಜಿಸುತ್ತಿದೆ. ಈ ಮಧ್ಯೆ, ಬ್ರಿಟನ್‌ನಲ್ಲಿ ಯುವತಿಯೊಬ್ಬಳು ದೇಶದ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ಪತ್ರ ಬರೆದಿದ್ದಾಳೆ. ಈ ಪತ್ರದಲ್ಲಿ ತನ್ನ ಮದುವೆಯನ್ನು ಮೂರನೇ ಬಾರಿಗೆ ಮುಂದೂಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ.  

ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ (Coronavirus) ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಮೂರನೇ ಬಾರಿಗೆ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈಗ ಒಮಿಕ್ರೋನ್ ಕಾರಣದಿಂದಾಗಿ ಮತ್ತೆ ನಿರ್ಬಂಧಗಳನ್ನು ಹೇರಲಾಗುತ್ತಿದೆ

ಕ್ಯಾಟ್ ತನ್ನ ಸಮಸ್ಯೆಯ ಬಗ್ಗೆ ನೇರವಾಗಿ ಪ್ರಧಾನಿ ಬೋರಿಸ್ ಜಾನ್ಸನ್‌ಗೆ (Boris Johnson) ಪತ್ರ ಬರೆದಿದ್ದಾರೆ. ತನ್ನ ತಂದೆ ಮತ್ತು ಭಾವಿ ಅತ್ತೆ, ಮಾವನ ವಯಸ್ಸಿನ ಕಾರಣದಿಂದಾಗಿ ಅವರು ಮದುವೆ ಕಾರ್ಯಗಳಲ್ಲೂ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. , ಹೆಚ್ಚುತ್ತಿರುವ ಕರೋನಾ  ಪ್ರಕರಣದಿಂದಾಗಿ ಸಮಸ್ಯೆಯಾಗದಂತೆ  ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ವಯಸ್ಸಾದವರು ಓಮಿಕ್ರಾನ್ ರೂಪಾಂತರಕ್ಕೆ ಹೆದರುತ್ತಿದ್ದಾರೆ. ಆರತಕ್ಷತೆ ಸ್ಥಳದಲ್ಲಿಯೂ ಸೀಮಿತ ವ್ಯಕ್ತಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಾಗ ಅತಿಥಿಗಳು ಬಾರದೇ ಹೋದರೆ  ನಷ್ಟವಾಗುತ್ತದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ
ಹೂವುಗಳನ್ನು ಆರ್ಡರ್ ಮಾಡಲಾಗಿದೆ ಮತ್ತು ಸಂಗೀತಗಾರರನ್ನು ಸಹ ಬುಕ್ ಮಾಡಲಾಗಿದೆ ಎಂದು ಕ್ಯಾಟ್ ತನ್ನ ಪತ್ರದಲ್ಲಿ ಬರೆದಿದ್ದಾರೆ. ಅತಿಥಿಗಳ ಆಗಮನಕ್ಕೆ ಬಸ್‌ಗಳನ್ನು ಕಾಯ್ದಿರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ಈಗಾಗಲೇ ಹಣವನ್ನು ಕೂಡಾ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದೋ ಹೆಚ್ಚು ಜನರು ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಬೇಕು ಅಥವಾ ನಾವು ಹೇಗೆ ಮದುವೆಯಾಗಬೇಕು ಎನ್ನುವುದನ್ನು ಸರಿಯಾಗಿ ತಿಳಿಸಬೇಕು ಎಂದು ಕೇಳಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧಗಳನ್ನು (Cororna guidelines) ಹಾಕುವ ಮೂಲಕ ಸರ್ಕಾರವು ಹಾನಿಯನ್ನುಂಟುಮಾಡುತ್ತಿದೆ ಎಂದು ಯುವತಿ ಪತ್ರದಲ್ಲಿ ಬರೆದಿದ್ದಾರೆ. ಇದರಿಂದ ನಮ್ಮ ಬಹಳಷ್ಟು ಹಣ ವ್ಯರ್ಥವಾಗುತ್ತದೆ. ಇದೀಗ ಮೂರನೇ ಬಾರಿಗೆ ಮದುವೆಯನ್ನು ಮುಂದೂಡಬೇಕಾಗಿದೆ ಎಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು
Vijaya Time

ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು

March 28, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.