ಪೆಟ್ರೋಲ್‌ ದರ ಶೀಘ್ರದಲ್ಲೇ ಇನ್ನಷ್ಟು ಇಳಿಕೆ

ನವದೆಹಲಿ ಡಿ 17  : ಪೆಟ್ರೋಲ್‌, ಡೀಸೆಲ್‌ ಬೆಲೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ  ಶೀಘ್ರದಲ್ಲೇ ದರ ಕಡಿತಗೊಳಿಸುವ ಭರವಸೆ ನೀಡಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಎಥೆನಾಲ್ ಮೇಲಿನ ಜಿಎಸ್ ಟಿ ದರವನ್ನು ಶೇ.18 ರಿಂದ ಶೇ.5% ಇಳಿಸಿದೆ. EBP ಕಾರ್ಯಕ್ರಮದ ಅಡಿಯಲ್ಲಿ, ಎಥೆನಾಲ್ ಅನ್ನು ಪೆಟ್ರೋಲ್ ನಲ್ಲಿ ಬೆರೆಸ ಲಾಗುತ್ತದೆ ಎಂದು ವಿವರಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಈ ಮಾಹಿತಿ ನೀಡಿದ್ದಾರೆ.

2018 ರಲ್ಲಿ ಮೊದಲ ಬಾರಿಗೆ, ಎಥೆನಾಲ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಸರ್ಕಾರವು ಎಥೆನಾಲ್ ದರವನ್ನು ನಿಗದಿಪಡಿಸಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳ ಎಥೆನಾಲ್ ಖರೀದಿಯೂ ಹೆಚ್ಚಾಗಿದೆ.

C&B ಹೆವಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ, ಸಕ್ಕರೆ ಪಾಕದಂತಹ ಕಬ್ಬು ಆಧಾರಿತ ಫೀಡ್ ಸ್ಟಾಕ್ ನಿಂದ ಉತ್ಪಾದಿಸಲಾದ ಎಥೆನಾಲ್ ನ ಖರೀದಿ ಬೆಲೆಯನ್ನು ಸರ್ಕಾರ ನಿರ್ಧರಿಸುತ್ತದೆ. ಪೆಟ್ರೋಲ್ ಗೆ ಹೆಚ್ಚು ಎಥೆನಾಲ್ ಸೇರಿಸುವುದರಿಂದ ಮಾಲಿನ್ಯವೂ ಕಡಿಮೆಯಾಗುತ್ತದೆ ಮತ್ತು ರೈತರಿಗೆ ಪ್ರತ್ಯೇಕ ಆದಾಯವನ್ನು ಗಳಿಸುವ ಮಾರ್ಗವನ್ನು ನೀಡುತ್ತದೆ ಎಂದು ಸರ್ಕಾರ ಹೇಳುತ್ತದೆ.

Exit mobile version