ಲಸಿಕೆ ಪಡೆದವರಿಗೂ ಕೊರೊನಾ ಪಾಸಿಟಿವ್ !

ಬೆಂಗಳೂರು ಆ 21 : ಕೊರನಾ ವಿರುದ್ದ ದೇಶವೇ ಸಮರ ಸಾರಿದ್ದು, ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಸುಲಭ ಮಾರ್ಗವೆಂದರೆ ಲಸಿಕೆ ಪಡೆಯುವುದು ಎನ್ನುವು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಇದೀಗ ರಾಜ್ಯದಲ್ಲೂ ಕೂಡ ಕೊರೊನಾ ಲಸಿಕೆ ಪಡೆದವರಲ್ಲಿ ಕೂಡ ಕೊರನಾ ಪಾಸಿಟಿವ್ ಕಂಡು ಬಂದಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ.

ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಲಸಿಕೆ ಪಡೆದ 13768  ಮಂದಿಗೆ ಮತ್ತೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದರಲ್ಲಿ ಕೋವ್ಯಾಕ್ಸಿನ್ ಪಡೆದ 2618 ಜನರಿಗೆ ಮತ್ತು ಕೋವಿಶಿಲ್ಡ್ ಪಡೆದ 11150 ಮಂದಿಯಲ್ಲಿ ಪುನಃ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರಲ್ಲಿ ಕೇವಲ 1 ಡೋಸ್ ಪಡೆದ 11246 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, 2 ಡೋಸ್ ಪಡೆದ 2522 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಮೊದಲ ಡೋಸ್ ಕೋವಿಶಿಲ್ಡ್ ಪಡೆದ 9030 ಮಂದಿಯಲ್ಲಿ ಕೊರನಾ ಪಾಸಿಟಿವ್ ಕಾಣಿಸಿಕೊಂಡಿದ್ದು, 2 ಡೋಸ್ ಪಡೆದ 2120 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.  ಪ್ರಥಮ ಡೋಸ್ ಪಡೆದ 2216 ಮಂದಿಯಲ್ಲಿ ಪಾಸಿಟವ್ ಪ್ರಕರಣ ದಾಖಲಾಗಿದ್ದು, 2ನೇ ಡೋಸ್ ಪಡೆದ 402 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Exit mobile version