ಅತಿಯಾಗಿ ನಿಂಬೆ ಬಳಕೆಯಿಂದ ಈ ಅಡ್ಡಪರಿಣಾಮಗಳಾಗಬಹುದು ಎಚ್ಚರಿಕೆ!

ತೂಕ ಇಳಿಕೆಯಿಂದ ಹಿಡಿದು, ತ್ವಚೆಯ ರಕ್ಷಣೆವರೆಗೆ ಸಾಕಷ್ಟು ನಿಂಬೆಯ ಪ್ರಯೋಜನಗಳನ್ನು ನೀವು ಕೇಳಿರಬೇಕು, ಆದರೆ ಇದರ ಅತಿಯಾದ ಬಳಕೆಯು ಪ್ರಯೋಜನಕ್ಕೆ ಬದಲಾಗಿ ನಿಮಗೆ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ. ನಿಂಬೆಯ ಅಂತಹ 5 ಅಡ್ಡಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ:

ನಿಂಬೆಯ ಅಡ್ಡಪರಿಣಾಮಗಳನ್ನು ಈ ಕೆಳಗೆ ನೀಡಲಾಗಿದೆ:

ಚರ್ಮದ ಕಿರಿಕಿರಿ ಮತ್ತು ದದ್ದುಗಳು:
ನಿಂಬೆಯಲ್ಲಿರುವ ಆಸಿಡ್ ನ ಪ್ರಮಾಣವು ಚರ್ಮಕ್ಕೆ ಹಾನಿಕಾರಕವಾಗಿದೆ. ನಿಮ್ಮ ತ್ವಚೆಗೆ ನಿಂಬೆ ರಸ ಹಚ್ಚಿದ ನಂತರ ನೇರಳಾತೀತ ಕಿರಣಗಳ ಹತ್ತಿರ ಹೋಗುವುದರಿಂದ ಫೈಟೊಫೋಟೊಡರ್ಮಟೈಟಿಸ್ ಚರ್ಮದ ಪ್ರತಿಕ್ರಿಯೆಗೆ ಕಾರಣವಾಗಬಹುದು. ಇದರಿಂದಾಗಿ ಶುಷ್ಕತೆ, ದದ್ದುಗಳು, ಊತ, ಗುಳ್ಳೆಗಳು ಅಥವಾ ಚರ್ಮ ಕೆಂಪು ಬಣ್ಣ ಆಗುವುದು ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಆದ್ದರಿಂದ ನಿಂಬೆ ರಸ ಅತಿಯಾಗಿ ಹಚ್ಚಿಕೊಂಡು ಇಂತಹ ಕಿರಣಗಳಿಗೆ ತೆರೆದುಕೊಳ್ಳುವುದು ಸರಿಯಲ್ಲ.

ಚರ್ಮದ ಮೇಲೆ ಬಿಳಿ ಕಲೆ:
ಚರ್ಮದ ಮೇಲೆ ಕಂಡುಬರುವ ಬಿಳಿ ಕಲೆಗಳನ್ನು ಲ್ಯುಕೋಡರ್ಮಾ ಅಥವಾ ವಿಟಲಿಗೋ ಎಂದು ಕರೆಯಲಾಗುತ್ತದೆ. ಚರ್ಮದಲ್ಲಿ ಮೆಲನಿನ್ ಕಡಿಮೆ ಇರುವ ಕಾರಣ, ಚರ್ಮದ ಬಣ್ಣವು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಕೆಲವರು ತಮ್ಮ ಚರ್ಮದ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯಲು ಅನೇಕ ಬಾರಿ ನಿಂಬೆ ಬಳಸುತ್ತಾರೆ, ಆದರೆ ಚರ್ಮದ ಮೇಲೆ ನಿಂಬೆ ಅತಿಯಾಗಿ ಬಳಸುವುದರಿಂದ, ಈ ಕಪ್ಪು ಕಲೆಗಳು ದೂರ ಹೋಗುವ ಬದಲು ದೊಡ್ಡ ಮತ್ತು ಬಿಳಿ ಲ್ಯುಕೋಡರ್ಮಾ ತರಹದ ಕಲೆಗಳಾಗಿ ಬದಲಾಗುತ್ತವೆ. ಆದ್ದರಿಂದ ನಿಂಬೆ ರಸ ಬಳಸುವ ಮುನ್ನ ಎಚ್ಚರವಿರಲಿ.

ಬಿಸಿಲಿನ ಅಪಾಯ:
ಚರ್ಮದ ಮೇಲೆ ನಿಂಬೆಯಂತಹ ಸಿಟ್ರಸ್ ಹಣ್ಣುಗಳನ್ನು ಅತಿಯಾಗಿ ಬಳಸುವುದರಿಂದ ವ್ಯಕ್ತಿಯು ಬಿಸಿಲಿನ ಅಪಾಯಕ್ಕೆ ಸಿಲುಕಬಹುದು. ನೆನಪಿನಲ್ಲಿಡಿ, ಬಿಸಿಲಿಗೆ ಹೋಗುವ ಮೊದಲು ಚರ್ಮದ ಮೇಲೆ ನಿಂಬೆ ಬಳಸಬೇಡಿ. ಇದಲ್ಲದೆ, ನೀವು ಎಲ್ಲೋ ಹೊರಗೆ ಹೋಗುವ ಯೋಚನೆಯಲ್ಲಿದ್ದರೆ, ಅದಕ್ಕೆ ಕೆಲವು ದಿನಗಳ ಮೊದಲು ನಿಂಬೆ ಬಳಸುವುದನ್ನು ನಿಲ್ಲಿಸಿ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಚರ್ಮವನ್ನು ಹಾನಿಗೊಳಗಾಗಬಹುದು.

ಹಲ್ಲಿನ ಆರೋಗ್ಯ:
ನಿಂಬೆಯ ಅತಿಯಾದ ಸೇವನೆಯು ಹಲ್ಲಿನ ದಂತಕವಚವನ್ನು ಹಾಳುಮಾಡುತ್ತದೆ, ಅಂದರೆ ಹಲ್ಲುಗಳನ್ನು ಹುಳಿ ಮಾಡುವುದರ ಜೊತೆಗೆ ಹಲ್ಲುಗಳ ಹೊರ ಪದರಕ್ಕೂ ಹಾನಿಯಾಗುವುದು. ಇದರಿಂದ ಹಲ್ಲು ತನ್ನ ಬಲವನ್ನು ಕಳೆದುಕೊಮಡು ಅಲುಗಾಡಲು ಪ್ರಾರಂಭವಾಗಬಹುದು.

ಆರೋಗ್ಯದ ಮೇಲೆ ಪರಿಣಾಮ:
ನಿಂಬೆ ವಿಟಮಿನ್-ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಆದರೆ ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಅತಿಸಾರ, ವಾಕರಿಕೆ ಮತ್ತು ಹೊಟ್ಟೆ ಸೆಳೆತ ಉಂಟಾಗುತ್ತದೆ. ಆದ್ದರಿಂದ ಇದನ್ನು ಮಿತವಾಗಿ ಬಲಸುವುದು ಉತ್ತಮ. ಆಗ ಆರೋಗ್ಯಕ್ಕೂ ಉತ್ತಮ, ತ್ವಚೆಗೂ ಒಳ್ಳೆಯದು.

Exit mobile version