ವಿದೇಶಿಯರ ಸ್ಥಳಾಂತರದ ಗಡುವಿನ ವಿಸ್ತರಣೆ ಅಸಾಧ್ಯ: ತಾಲಿಬಾನ್

ಕಾಬೂಲ್‌  : ವಿದೇಶಿಯರಿಗೆ ಅಫ್ಗಾನಿಸ್ತಾನವನ್ನು ತೊರೆಯಲು ನೀಡಲಾಗಿರುವ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ತಾಲಿಬಾನ್‌ ಸ್ಪಷ್ಟಪಡಿಸಿದೆ.

ಅಫ್ಗಾನಿಸ್ತಾನದಿಂದ ವಿದೇಶಿಗರನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿರುವ ನಡುವೆ ಕಾಬೂಲ್‌ನ ಹಮೀದ್‌ ಕರ್ಜೈ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಬಿಗುವಿನ ಸನ್ನಿವೇಶಕ್ಕೆ ನಿರ್ಮಾಣವಾಗಿದೆ.

ದುರ್ಘಟನೆಯಲ್ಲಿ ಸುಮಾರು 70 ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಅಮೆರಿಕ 13 ಯೋಧರು ಸೇರಿದ್ದಾರೆ. ಮೃತಪಟ್ಟವರ ಪೈಕಿ 28 ಮಂದಿ ನಮ್ಮವರೂ ಸೇರಿದ್ದಾರೆ ಎಂದು ತಾಲಿಬಾನ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Exit mobile version