ಮೈಸೂರು – ಬೆಂಗಳೂರು ರಾಷ್ಟೀಯ ಹೆದ್ದಾರಿ ಸ್ಕೈವಾಕ್‌ಗೆ ಇರಲಿವೆ 126 ಮೆಟ್ಟಿಲುಗಳು !

Mysore: ರಾಜ್ಯ ಸರ್ಕಾರವು ಬೆಂಗಳೂರು (Bengaluru) – ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು (express way skywalk) ರಾಷ್ಟ್ರಿಯ ಹೆದ್ದಾರಿಯ

24 ಕಡೆಗಳಲ್ಲಿ ಸ್ಕೈವಾಕ್ ಗಳನ್ನು ನಿರ್ಮಿಸಲು ನಿರ್ಧರಿಸಿದೆ. ಆದ್ರೆ ಈ ಸ್ಕೈವಾಕ್ (Skywalk) 64 ಅಡಿ ಎತ್ತರವಿರಲಿದ್ದು. ಪ್ರತಿ ಸ್ಕೈವಾಕ್ ನಲ್ಲಿಯೂ 126 ಮೆಟ್ಟಿಲುಗಳು ಇರಲಿವೆ.

ಇಷ್ಟೊಂದು ಮೆಟ್ಟಿಲುಗಳಿರುವ ಸ್ಕೈವಾಕ್‌ ಅನ್ನು ಹತ್ತಿಳಿಯುವುದು ಸಾಧ್ಯವೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದ್ದು, ತಜ್ಞರೂ ಸಹ ಇದೊಂದು ಅವೈಜ್ಞಾನಿಕ ಯೋಜನೆ ಅಂತ ದೂರಿದ್ದಾರೆ.

ಬೆಂಗಳೂರು – ಮೈಸೂರು (Mysore) ರಾಷ್ಟ್ರಿಯ ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಸಾರಿಗೆ ಇಲಾಖೆ ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆಗಸ್ಟ್ 1ರಿಂದ

ಈಚೆಗೆ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಗೂಡ್ಸ್ (Goods) ವಾಹನಗಳನ್ನು ಓಡಾಡುವುದನ್ನು ನಿಷೇಧಿಸಿದ್ದರಿಂದ ಅಪಘಾತಗಳ ಸಂಖ್ಯೆಯೂ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಈಗ ಜನ

ಯರ್ರಾಬಿರ್ರಿಯಾಗಿ ರಸ್ತೆ ದಾಟಿ ಅಪಘಾತಗಳಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಈಗ (express way skywalk) ಮತ್ತೊಂದು ಕ್ರಮಕ್ಕೆ ಮುಂದಾಗಿದೆ.

ಅದೇನೆಂದರೆ ಮೈಸೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ 24 ಕಡೆ ಸುಮಾರು 64 ಕೋಟಿ ರೂ. ವೆಚ್ಚದಲ್ಲಿ ಈ ಸ್ಕೈವಾಕ್ ಗಳನ್ನು ನಿರ್ಮಿಸುವುದು. ರಾಷ್ಟೀಯ ಹೆದ್ದಾರಿ ತಜ್ಞರು ಹೇಳುವ ಪ್ರಕಾರ

ಪ್ರತಿಯೊಂದು ಸ್ಕೈವಾಕ್ ಗಳ (Skywalk) ಎತ್ತರ 64 ಅಡಿಯದ್ದಾಗಿರುತ್ತದೆ. ಅಲ್ಲದೆ ಈ ಸ್ಕೈವಾಕ್ ಗಳಲ್ಲಿ 124 ಮೆಟ್ಟಿಲುಗಳು ಇರಲಿದ್ದು. ಇಷ್ಟೊಂದು ಮೆಟ್ಟಿಲುಗಳನ್ನು ಹತ್ತಿ ಇಳಿಯುವವರು ಯಾರು

ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ.

ಇಷ್ಟು ಎತ್ತರದವರೆಗೆ ಇರುವ ಮೆಟ್ಟಿಲುಗಳನ್ನೂ ಹತ್ತಿ ಇಳಿಯುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ಹೇಳುತ್ತಿದ್ದಾರೆ. ಮೆಟ್ಟಿಲುಗಳನ್ನು ಹತ್ತಲು ಕಷ್ಟವಾದಾಗ ಸ್ಕೈವಾಕ್ ಗಳಿಗೆ ಲಿಫ್ಟ್ ಗಳನ್ನು (Lift)

ಅಳವಡಿಸುವುದು ಅನಿವಾರ್ಯವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ . ಪ್ರತಿಯೊಬ್ಬರೂ ಇದೆ ರೀತಿಯಾಗಿ ಲಿಫ್ಟ್ ಗಳಿಗೆ ಮುಗಿಬಿದ್ದರೆ ಲಿಫ್ಟ್ ಗಳ ಒಳಾಂಗಣವೂ ಸಹ ದೊಡ್ಡದಾಗಿರಬೇಕಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಕೈವಾಕ್ ಗಳನ್ನು ನಿರ್ಮಿಸಬೇಕಾಗುತ್ತೆ ಎಂಬುದು ತಜ್ಞರ ಸಲಹೆ.

ದೊಡ್ಡ ದೊಡ್ಡ ಸ್ಕೈವಾಕ್ ಗಳನ್ನು ನಿರ್ಮಿಸಿದರೆ ತೊಂದರೆಗಳು ಆಗಬಹುದು. ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ಬಳಕೆ ಹಾಗೂ ಸ್ಕೈವಾಕ್ ಗಳ ಕಬ್ಬಿಣದ ತುಂಡುಗಳ ಕಳ್ಳತನವಾಗುವ

ಸಾಧ್ಯತೆ ಹೆಚ್ಚು ಇರುತ್ತದೆ. ಈಗಾಗಲೇ ಹೆದ್ದಾರಿಗಳಲ್ಲಿ ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ತಂತಿ ಬೇಲಿಗಳು, ಕಬ್ಬಿಣದ ಪ್ಲೇಟ್ ಗಳು ಕಳ್ಳತನವಾಗಿದೆ. ಅಲ್ಲದೆ ಸ್ಕೈ ವಾಕ್ ಗಳನ್ನು ರಾತ್ರಿ ಸಮಯದಲ್ಲಿ ಯಾರೂ

ಉಪಯೋಗಿಸದೇ ಇರುವುದರಿಂದ ಅವು ಬೆಂಗಳೂರಿನ (Bengaluru) ಕೆಲವು ಅಂಡರ್ ಪಾಸ್ ಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುವ ಅಪಾಯಗಳು ಇರುತ್ತವೆ. ಹಾಗಾಗಿ

ಅವುಗಳಿಂದಲೂ ಸಹ ಸ್ಕೈ ವಾಕ್ ಗಳನ್ನು ರಕ್ಷಣೆ ಮಾಡಬೇಕಾದದ್ದು ಅನಿವಾರ್ಯವಾಗುತ್ತದೆ. ಹೀಗಾಗಿ, ಸ್ಕೈ ವಾಕ್ ಗಳ ರಕ್ಷಣೆ ಮಾಡಲು ಪೊಲೀಸರನ್ನು ರಾತ್ರಿ ಹೊತ್ತು ನೇಮಿಸುವುದು

ಇದನ್ನು ಓದಿ : ರೆಡ್ ಅಲರ್ಟ್‌: ರಾಜ್ಯದಲ್ಲಿ ಅಪಾಯದ ಮಟ್ಟಕ್ಕೆ ಕುಸಿಯುತ್ತಿದೆ ಅಂತರ್ಜಲ !

Exit mobile version