ಫೇಸ್‌ಬುಕ್‌ ಕ್ಲೋನಿಂಗ್‌: ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ನ ಅಸಲಿ ವಂಚನೆ

Facebook Cloning : ಇತ್ತೀಚಿಗೆ ಸೈಬರ್ ಕ್ರೈಂ ಜಾಸ್ತಿಯಾಗಿದ್ದು, ನನ್ನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಆಗಿದೆ. ಯಾರಾದರೂ (Facebook Account Hack) ನಿಮ್ಮಲ್ಲಿ ಹಣ ಕೇಳಿದರೆ ದಯವಿಟ್ಟು

ನೀಡಬೇಡಿ’ ಅನ್ನುವ ಪೋಸ್ಟ್‌ಗಳು ಫೇಸ್‌ಬುಕ್‌ ಬಳಕೆದಾರರಿಗೆ ಇತ್ತೀಚೆಗೆ ಪರಿಚಿತವಾಗಿಬಿಟ್ಟಿದೆ. ಆದರೆ ಬಹುತೇಕ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಇದು ಫೇಸ್‌ಬುಕ್‌ ಹ್ಯಾಕಿಂಗ್‌ ಪ್ರಕರಣ ಅಲ್ಲ

ಎನ್ನುವುದು. ಹಾಗಾದರೆ ಏನಿದು ಪ್ರಕರಣ? (Facebook Account Hack) ಮಾಹಿತಿ ಇಲ್ಲಿದೆ.

ಹೌದು, ನಿಮಗೊಂದು ಫ್ರೆಂಡ್‌ ರಿಕ್ವೆಸ್ವ್‌ ನೋಟಿಫಿಕೇಶನ್‌ (Friend Request Notification) ಫೇಸ್‌ಬುಕ್ಕಲ್ಲಿ ಬರುತ್ತದೆ. ಆದರೆ ಅದು ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇರುವವರ ಅಕೌಂಟ್‌

ಆಗಿರುತ್ತದೆ. ಬಹುಶಃ ಅನ್‌ಫ್ರೆಂಡ್‌ ಆಗಿರಬೇಕು ಅಥವಾ ಹೊಸ ಅಕೌಂಟ್‌ ಮಾಡಿರಬಹುದು ಎಂದುಕೊಂಡು ನೀವು ಆ ರಿಕ್ವೆಸ್ಟನ್ನು ಸ್ವೀಕರಿಸುತ್ತೀರಿ. ಕೆಲವೇ ನಿಮಿಷಗಳಲ್ಲಿಆ ಖಾತೆಯಿಂದ ನಿಮಗೆ

‘ಹಾಯ್’ ಎಂದು ಮೆಸೇಜು ಬರುತ್ತದೆ. ನೀವು ಪ್ರತಿಕ್ರಿಯೆ ನೀಡುತ್ತೀರಿ. ಮರುಕ್ಷಣವೇ, ‘ವೇರ್‌ ಆರ್‌ ಯೂ’ ಅನ್ನುವ ಮೆಸೇಜ್‌. ನೀವು ಉತ್ತರ ನೀಡುತ್ತೀರಿ. ಅಲ್ಲಿಗೆ ಆ ಕಡೆಯಿಂದ ಕೊನೆಯ

ದಾಳ ಉರುಳಿಸಲಾಗುತ್ತದೆ.ಹತ್ತು ಸಾವಿರ ರೂಪಾಯಿ ಇದ್ದರೆ ಅರ್ಜೆಂಟಾಗಿ ಬೇಕಿತ್ತು. ನಾಳೆಯೇ ವಾಪಾಸ್‌ ಕೊಡುತ್ತೇನೆ. ದಯವಿಟ್ಟು ಕಳುಹಿಸಿಕೊಡಿ ನಾನು ಆಸ್ಪತ್ರೆಯಲ್ಲಿ ಇದ್ದೇನೆ ದಯವಿಟ್ಟು

ಸಹಾಯ ಮಾಡಿ’ ಎಂದು ಬರುವ ಮೆಸೇಜ್‌ ಅನ್ನು ನೋಡಿ, ಆ ಖಾತೆ ನಿಮ್ಮ ಆಪ್ತರದ್ದಾಗಿದ್ದರೆ ನೊಂದುಕೊಳ್ಳುತ್ತೀರಿ. ನೀವು ಮೆಚ್ಚುವ, ಗೌರವಿಸುವ ಗಣ್ಯರದ್ದಾಗಿದ್ದರೆ, ಇವರಿಗೇನಾಯ್ತು,

ಇವರೇ ನನ್ನಲ್ಲಿ ಹಣ ಕೇಳುತ್ತಿದ್ದಾರಲ್ಲಾ. ಪಾಪ, ಏನು ಕಷ್ಟವೋ ಏನೋ’ ಅಂದುಕೊಂಡು ಅವರು ನೀಡಿದ ಸಂಖ್ಯೆಗೆ ಹಣ ಕಳುಹಿಸಿಯೇ ಬಿಡುತ್ತೀರಿ.

ಈ ರೀತಿ ಎಡಿಎ ಬಳಿಕ ನೀವು ಫೇಸ್‌ಬುಕ್‌ ತೆರೆದಾಗ ಅದೇ ವ್ಯಕ್ತಿಯ ಹಳೆಯ ಖಾತೆಯಲ್ಲೊಂದು ಪೋಸ್ವ್‌ ಕಾಣಿಸುತ್ತದೆ. ಯಾರೋ ನನ್ನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಮಾಡಿದ್ದಾರೆ. ಹಣ ಕೇಳಿದರೆ

ಕೊಡಬೇಡಿ ಎಂದು ನೀವು ಗಾಬರಿಯಾಗಿ ಮೆಸೆಂಜರ್‌ ನೋಡಿದರೆ ಹಣ ಕಳುಹಿಸಿದ ಖಾತೆ ಅದಾಗಲೇ ಡಿಲೀಟ್‌ ಆಗಿರುತ್ತದೆ.

ಫೇಸ್‌ಬುಕ್‌ ಕ್ಲೋನಿಂಗ್‌ ಎಂದರೇನು?
ಸೈಬರ್‌ ವಂಚಕರು (Cyber ​​fraudsters) ಓರ್ವ ವ್ಯಕ್ತಿಯ ಫೇಸ್‌ಬುಕ್‌ ಖಾತೆಯನ್ನೇ ಹೋಲುವಂತೆ ಪ್ರೊಫೈಲ್ ಫೋಟೊ (Profile photo), ಕವರ್‌ ಫೋಟೊ ಹಾಗೂ ಮಾಹಿತಿಗಳನ್ನು ಬಳಸಿ ಸೃಷ್ಟಿಸುವ ನಕಲಿ

ಖಾತೆಯೇ ಫೇಸ್‌ಬುಕ್‌ ಕ್ಲೋನಿಂಗ್‌ ಹ್ಯಾಕಿಂಗ್‌ (Facebook Cloning Hacking) ಅನ್ನುವುದು ಚಾಲ್ತಿಯಲ್ಲಿ ಇರುವ ಖಾತೆಯನ್ನು ಹ್ಯಾಕರ್‌ಗಳು ಹಿಡಿತಕ್ಕೆ ತೆಗೆದುಕೊಳ್ಳುವುದಾಗಿದೆ. ಫೇಸ್‌ಬುಕ್‌

ಕ್ಲೋನಿಂಗ್‌ನಲ್ಲಿ ನಿಮ್ಮ ಖಾತೆಯ ಹಿಡಿತ ನಿಮ್ಮಲ್ಲೇ ಇರುತ್ತದೆ. ಆದರೆ, ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಹೆಸರು ಹಾಗೂ ಫೋಟೋಗಳನ್ನು ಬಳಸಿ ನಕಲಿ ಖಾತೆಯನ್ನು ಸೃಷ್ಟಿಸಲಾಗಿರುತ್ತದೆ.

ಈ ವಂಚನೆಯಿಂದ ಪಾರಾಗುವುದು ಹೇಗೆ?
*ನಕಲಿ ಫೇಸ್‌ಬುಕ್‌ ಖಾತೆಗಳು ಹಣಕಾಸಿನ ವಂಚನೆ ಮಾತ್ರವಲ್ಲದೆ ನಮ್ಮ ಘನತೆಗೆ ಕುಂದುತರುವ ಪ್ರಯತ್ನವೂ ಮಾಡಬಹುದು ಎನ್ನುವುದನ್ನು ಅರಿಯಿರಿ
*ಬರವಣಿಗೆ, ಫೋಟೋಗ್ರಫಿ ಸೇರಿದಂತೆ ವಿವಿಧ ಹವ್ಯಾಸಗಳಿಗಾಗಿ ಫೇಸ್‌ಬುಕ್‌ ಬಳಸುವವರನ್ನು ಹೊರತುಪಡಿಸಿ, ಪಬ್ಲಿಕ್‌ ಪ್ರೊಫೈಲ್‌ನ *ಅನಿವಾರ್ಯತೆ ಇಲ್ಲದವರು ಪ್ರೊಫೈಲ್ ಲಾಕ್‌ ಮಾಡಿಕೊಳ್ಳಿ
*ಫೋಟೊಗಳನ್ನು ಹಾಕುವುದು ಅನಿವಾರ್ಯವೇ ಎಂದಾದಲ್ಲಿ ಅದನ್ನು ನಿಯಮಿತವಾಗಿ ಡಿಲೀಟ್‌ ಮಾಡುತ್ತಿರಿ
*ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಣಗಳಲ್ಲಿ ಹಂಚಬೇಡಿ
*ನಿಮ್ಮ ಸ್ನೇಹಿತರ ಪಟ್ಟಿಯನ್ನು ಬೇರೆಯವರು ನೋಡದಂತೆ ಸೆಟ್ಟಿಂಗ್‌ ಬದಲಾಯಿಸಿ
*ಫೇಸ್‌ಬುಕ್ಕನ್ನು ಫೋಟೋ ಆಲ್ಬಂ (Photo album) ರೀತಿ ಬಳಸಬೇಡಿ.
*ಖಾಸಗಿ ಬದುಕಿನ ಫೋಟೊಗಳನ್ನು, ಪ್ರಯಾಣದ ವಿವರಗಳನ್ನು ಹಾಕುವುದನ್ನು ಆದಷ್ಟು ಕಡಿಮೆ ಮಾಡಿ.
*ಫ್ರೆಂಡ್‌ ರಿಕ್ವೆಸ್ವ್‌ ಸ್ವೀಕರಿಸುವಾಗ ತುಂಬಾ ಜಾಗರೂಕರಾಗಿರಿ. ಯಾವುದೇ ಅನುಮಾನಾಸ್ಪದ ಸ್ನೇಹ ಕೋರಿಕೆಗಳಿಗೆ ಮಣೆ ಹಾಕಬೇಡಿ.
*ಪರಿಚಿತರ ಸ್ನೇಹ ಕೋರಿಕೆ ಹೊಸ ಖಾತೆಯ ಮೂಲಕ ಬಂದಾಗ ಜಾಗರೂಕರಾಗಿರಿ.
*ಫೇಸ್‌ಬುಕ್‌ ಮೂಲಕ ಯಾವುದೇ ಕಾರಣಕ್ಕೂ ಹಣದ ವ್ಯವಹಾರ ಮಾಡಬೇಡಿ. ಪೋನ್‌ ಕರೆ ಮೂಲಕ ಮಾತನಾಡಿ, ಖಾತರಿಪಡಿಸಿಕೊಂಡೇ ಮಾತುಕತೆ ಮುಂದುವರೆಸಬೇಕು.

ಇದನ್ನು ಓದಿ: ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮುರುಘಾಶ್ರೀ‌: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ

Exit mobile version