ಫ್ಯಾಂಟಮ್ ಈಗ “ವಿಕ್ರಾಂತ್ ರೋಣ”: ಜ.31ರಂದು ಬುರ್ಜ್ ಖಲೀಫಾದಲ್ಲಿ ಟೈಟಲ್ ಲೋಗೋ ಅನಾವರಣ

ಬೆಂಗಳೂರು, ಜ. 21: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಇದೀಗ “ವಿಕ್ರಾಂತ್ ರೋಣ”ನಾಗಿ ಬದಲಾಗಿದೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ,
ಚಿತ್ರೀಕರಣ ಶುರುವಾದ ದಿನದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಫ್ಯಾಂಟಮ್ ಚಿತ್ರದ ಕುರಿತು ಮಹತ್ವದ ವಿಷಯವೊಂದನ್ನು ಅನಾವರಣಗೊಳಿಸುವುದಾಗಿ ತಿಳಿಸಿದ್ದ ನಿರ್ದೇಶಕ ಅನೂಪ್, ಇದೀಗ ಚಿತ್ರದ ಟೈಟಲ್ ಬದಲಾವಣೆ ಮಾಡಿರುವ ವಿಷಯ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ಯಾಂಟಮ್ ಚಿತ್ರ, “ವಿಕ್ರಾಂತ್ ರೋಣ” ಎಂದು ಬದಲಾಗಿದೆ. ‌

ಅಲ್ಲದೇ, ಜ.31ರಂದು ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ(ದುಬೈ) ಮೇಲೆ ಕಿಚ್ಚನ ಕಟೌಟ್ ಹಾಗೂ “ವಿಕ್ರಾಂತ್ ರೋಣ” ಚಿತ್ರದ ಟೈಟಲ್ ಲೋಗೋ ಲಾಂಚ್‌ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Exit mobile version