ನೀರಿಲ್ಲದೆ ಬರಿದಾಗುತ್ತಿರುವ ಕಾವೇರಿ ಮಡಿಲು: ನಾಲೆಗಳಿಗೆ ನೀರು ಹರಿಸದಿರಲು ಕೃಷಿ ಸಚಿವರ ಸೂಚನೆ

Mandya: ರೈತರ ಜೀವನಾಡಿಯಾಗಿರುವ ಕಾವೇರಿ (Kaveri) ಜಲಾಶಯದಲ್ಲಿ ನೀರು (Farmers-Agriculture Minister Instruction) ಬರಿದಾಗುತ್ತಿದ್ದು, ಇರುವ ನೀರಿನ ಲಭ್ಯತೆಯನ್ನ

ನೋಡಿಕೊಂಡು ಕುಡಿಯುವುದಕ್ಕೆ ಮೀಸಲು ಇಟ್ಟು ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನು, ರೈತರು (Farmer) ಸಹಾ ಈ ಬಾರಿ ಬೆಳೆಗಳನ್ನ ಬೆಳೆಯದಂತೆ

ಸಹಾ ಕೃಷಿ ಸಚಿವರು ಕೂಡ (Farmers-Agriculture Minister Instruction) ಸೂಚನೆ ಹೊರಡಿಸಿದ್ದಾರೆ.

ಈ ಜಲಾಶಯವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದು, ಜಲಾಶಯದಲ್ಲಿ ನೀರು ಬರಿದಾಗುತ್ತಿರುವ ಕಾರಣ ಸರ್ಕಾರ ಇದೀಗ ಬೇಸಿಗೆ ಬೆಳೆಗೆ ನೀರು

ಹರಿಸದಿರಲು ತಿರ್ಮಾನ ಮಾಡಿದೆ. ಬೇಸಿಗೆ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಸೂಚನೆ ನೀಡಿದ್ದು, ಇದು ಜಿಲ್ಲೆಯ ರೈತರನ್ನ ಸಂಕಷ್ಟಕ್ಕೆ ಸಿಲುಕಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (Srirangapattana) ತಾಲೂಕಿನ ಕೆಆರ್​ಎಸ್ ಜಲಾಶಯ, ಜಿಲ್ಲೆಯ ರೈತರ ಜೀವನಾಡಿ. ಇದೇ ಜಲಾಶಯವನ್ನ ನಂಬಿಕೊಂಡು ಲಕ್ಷಾಂತರ ರೂ ರೈತರು ವ್ಯವಸಾಯ

ಮಾಡುತ್ತಾರೆ. ಆದರೆ ಭೀಕರ ಬರ, ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ಜಲಾಯಶ ಭರ್ತಿಯಾಗಿಲ್ಲ.

ಹಾಗಾಗಿ ಜಿಲ್ಲೆಯಲ್ಲಿ ಈಗ ಇದ್ದ ಬೆಳೆಗಳನ್ನ ಉಳಿಸಿಕೊಳ್ಳಲು ಕಟ್ ಪದ್ದತಿಯಂತೆ ನಾಲೆಗಳಿಗೆ ನೀರು ಹರಿಸಲಾಗಿತ್ತು. ಇದೀಗ ಬಹುತೇಕ ಕಬ್ಬು ಹಾಗೂ ಭತ್ತ ಕಟಾವು ಆದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು

ಹರಿಸುವುದನ್ನ ಸ್ಥಗಿತ ಮಾಡಲಾಗಿದ್ದು, ಜಲಾಶಯದಲ್ಲಿ ಇರುವ ನೀರಿನ ಲಭ್ಯತೆಯನ್ನ ನೋಡಿಕೊಂಡು, ಕುಡಿಯುವುದಕ್ಕೆ ಮೀಸಲು ಇಟ್ಟು, ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ.

ಇನ್ನು ರೈತರು ಸಹ ಈ ಬಾರಿ ಬೆಳೆಗಳನ್ನ ಬೆಳೆಯದಂತೆ ಕೃಷಿ ಸಚಿವರು ಕೂಡ ಮನವಿ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯ 124.80 ಅಡಿ ನೀರು ಸಂಗ್ರಹ

ಸಾಮರ್ಥ್ಯ ಹೊಂದಿದ್ದು, ಸದ್ಯ 96.92 ನೀರು ಸಂಗ್ರಹವಿದೆ. ಇನ್ನು ಟಿಎಂಸಿ ಲೆಕ್ಕದಲ್ಲಿ ನೋಡುವುದಾದರೇ 20.491 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ ಡೆಡ್ ಸ್ಟೋರೆಜ್ 4 ಟಿಎಂಸಿ (TMC) ಆದರೆ

ಉಳಿಯುವುದು 16 ಟಿಎಂಸಿ ಮಾತ್ರ.

ಇನ್ನು ಇದರಲ್ಲಿ ಬೆಂಗಳೂರು (Bengaluru), ಮಂಡ್ಯ, ಮೈಸೂರು ನಗರಗಳಿಗೆ ಕುಡಿಯುವ ನೀರು ಒದಗಿಸಬೇಕು. ಇನ್ನು ಪ್ರತಿತಿಂಗಳು ಇಷ್ಟು ನಗರಗಳಿಗೆ 2 ಟಿಎಂಸಿ ನೀರು ಬೇಕಾಗುತ್ತದೆ.

ಜೂನ್ ವರೆಗೂ ಸಹಾ ಬೇಕಾಗುತ್ತದೆ. ಹೀಗಾಗಿಯೇ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಮಾಡಿ, ಈ ಬಾರಿ ಬೇಸಿಗೆ ಬೆಳೆಗೆ ಕಾವೇರಿ ನೀರು ಕೊಡದಿರಲು ತೀರ್ಮಾನ ಮಾಡಿದೆ.

ಸರ್ಕಾರದ ತೀರ್ಮಾನಕ್ಕೆ ಜಿಲ್ಲೆಯ ರೈತರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ತಮಿಳುನಾಡಿಗೆ (Tamilnadu) ನೀರು ಹರಿಸುವುದನ್ನ ನಿಲ್ಲಿಸಿ ಶೇಖರಣೆ ಮಾಡಿದ್ರೆ ರೈತರಿಗೆ ಅನುಕೂಲವಾಗುತ್ತಿತ್ತು.

ಈ ಹಿಂದೆ ಜಲಾಶಯದಲ್ಲಿ 76 ಅಡಿ ಇದ್ದಾಗಲೂ ರೈತರಿಗೆ ನೀರು ಕೊಟ್ಟಿದ್ದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ: ಭಾರತೀಯ ಜೀವ ವಿಮಾ ನಿಗಮದಲ್ಲಿ ಭರ್ಜರಿ ಉದ್ಯೋಗಾವಕಾಶ ; ಇಂದೇ ಅರ್ಜಿ ಸಲ್ಲಿಸಿ

Exit mobile version