ಮನನೊಂದ ಮುಳಬಾಗಿಲು ರೈತರಿಂದ ಆಲೂಗೆಡ್ಡೆ ಬೆಳೆ ನಾಶ: ಕಂಪನಿಯಿಂದ ನಕಲಿ ಬೀಜ ಕೊಟ್ಟು ಮೋಸ.

Karnataka: ನಕಲಿ ಬೀಜ ದಂಧೆ ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಎಷ್ಟೇ ಮನವಿ ಮಾಡಿದರು ಕ್ರಮ ಕೈಗೊಳ್ಳಲಾಗುತ್ತಿಲ್ಲ. ನಮ್ಮ ಅಳಲನ್ನು ಯಾರೂ ಕೇಳುತ್ತಿಲ್ಲ ಎಂದು ಕೋಲಾರದ ಮುಳಬಾಗಿಲು ಜಿಲ್ಲೆಯ ರೈತರು ಹೇಳಿದ್ದಾರೆ. ನಕಲಿ ಬೀಜ ಬಿತ್ತಿದ್ದರಿಂದ ನೂರಾರು ಎಕ್ಕರೆಷ್ಟು ಆಲೂಗಡ್ಡೆ ಸಸಿಯನ್ನು ಕೈಯಾರೆ ನಾಶ ಮಾಡುವಂತಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಆಲೂಗಡ್ಡೆ ಬೆಳೆಯನ್ನು ಬೆಳೆಯಲು ಮುಂದಾದ ಮುಳಬಾಗಿಲಿನ (Mulabagilu) ರೈತರಿಗೆ ಒಂದುವರೆ ತಿಂಗಳಾದರೂ ಇನ್ನೂ ಆಲೂಗಡ್ಡೆ ಬಾರದ ಪರಿಣಾಮ ಹತಾಶೆಯಿಂದ ಆಲೂಗಡ್ಡೆ ಬೆಳೆಯನ್ನು ರೋಟರ್ ಮೂಲಕ ನಾಶ ಮಾಡಿದ್ದಾರೆ.

ಆಲೂಗಡ್ಡೆ ಬೆಳೆ ನಷ್ಟವಾಗಿರುವ ಕಾರಣ ಪ್ರತಿ ಎಕರೆಗೆ ಎರಡು ಲಕ್ಷ ರೂಪಾಯಿ ಪರಿಹಾರ ಧನವನ್ನು ಸರ್ಕಾರ ನೀಡಬೇಕು ಎಂದು ರೈತರು ಹೇಳಿದ್ದಾರೆ. ಹಾಗೆ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ಬೀಜ ಕಾಯಿದೆ ಜಾರಿಗೆ ತನ್ನಿ, ನಕಲಿ ಆಲೂಗಡ್ಡೆ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರ ಮೇಲೆ ಕ್ರಿಮಿನಲ್ (Criminal) ಮೊಕದ್ದಮೆ ದಾಖಲಿಸಬೇಕೆಂದು ನೊಂದ ರೈತರು ತಿಳಿಸಿದ್ದಾರೆ. ಮುಳಬಾಗಿಲು ತಾಲೂಕಿನಲ್ಲಿರುವ ನೂರಾರು ರೈತರ ಸಾವಿರಾರು ಆಲೂಗಡ್ಡೆ ಬೆಳೆ ನಷ್ಟವಾಗಿದೆ.

ಲೋಡ್ ಶೆಡ್ಡಿಂಗ್ (Load Shedding) ಸಂಕಷ್ಟದ ನಡುವೆ ಖಾಸಗಿ ಸಾಲ ಮಾಡಿ ಪ್ರತಿ ಮೂಟೆ ಬಿತ್ತನೆ ಆಲೂಗಡ್ಡೆಗೆ 2,700 ರಿಂದ 3000 ರೂಪಾಯಿ ಹಣ ನೀಡಿ ಖರೀದಿ ಮಾಡಿ, ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಮಾಡಿದ 60 ದಿನವಾದರೂ ಫಲ ಸಿಗದ ಕಾರಣ ರೈತರು, ಎಪಿಎಂಸಿ (APMC) ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ವೆಂದು ಕೂಡ ಅಳಲನ್ನು ತೋಡಿಕೊಂಡಿದ್ದಾರೆ. ಪ್ರತಿ ವರ್ಷ ಕಡಿಮೆ ಆಲೂಗಡ್ಡೆ ಬೆಳೆಯುತ್ತಿದ್ದ ರೈತರು, ಈ ವರ್ಷದ ಹವಾಮಾನವನ್ನು ನೋಡಿ ಹೆಚ್ಚು ಆಲೂಗಡ್ಡೆ ಬೆಳೆ ಬೆಳೆಯಲು ಮುಂದಾದ ರೈತರು ನಕಲಿ ಆಲೂಗೆಡ್ಡೆ ವಿತರಣೆಯಿಂದ ಮೋಸಗೊಂಡು ವಂಚಿತರಾಗಿದ್ದಾರೆ.

ಸಾವಿರಾರು ಎಕರೆ ಆಲೂಗಡ್ಡೆ ಕೈಕೊಟ್ಟಿರುವುದರಿಂದ ಬಂಡವಾಳ ವಾಪಸ್ ಬಾರದೆ ಕಾಸಿಗೆ ಸಾಲಕ್ಕೆ ಸಿಲುಕಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ (K.Narayanagowda) ಮಾತನಾಡಿ ಆಲೂಗೆಡ್ಡೆ ನಕಲಿ ದಂಧೆ ಇಂದು ನೆನ್ನೆಯದಲ್ಲ,ಸುಮಾರು ಹತ್ತಾರು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಸುಮಾರ ಹತ್ತಾರು ವರ್ಷಗಳಿಂದ ಈ ದಂಧೆ ಅಧಿಕಾರಿಗಳ ಮುಂದೆಯೇ ನಡೆಯುತ್ತಿದೆ. ಪಂಜಾಬ್ (Punjab) ಮತ್ತು ಜಲಂಧರ್ ಕಡೆಯಿಂದ ತರಿಸುತ್ತಿರುವ ಬಿತ್ತನೆ ಆಲೂಗಡ್ಡೆಯನ್ನು ಅದರ ಗುಣಮಟ್ಟ ಪರಿಶೀಲನೆ ಮಾಡಿ ತದ ನಂತರ ರಸದಿ ನೀಡುವ ಮುಖಾಂತರ ವಿತರಣೆ ಮಾಡಬೇಕೆಂಬ ನಿಯಮ ಪಾಲಿಸಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಮೇಲೆ ಕಾಳಜಿ ಇದ್ದರೆ ನಕಲಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರಯೋಗಾಲಯ ಹಾಗೂ ಜಿಲ್ಲಾಧಿಕಾರಿಗಳ ಒಳಗೊಂಡಂತೆ ತಂಡ ರಚನೆ ಮಾಡಿ ಬೀಜ ಬಿತ್ತನೆ, ಕೀಟನಾಶಕ ನಿಯಂತ್ರಣ ಮಾಡಿದರೆ ಮಾತ್ರ ರೈತರ ಬೆವರಹನಿಗೆ ತಕ್ಕ ಫಲ ಸಿಗುತ್ತದೆ ಎಂದು ಹೇಳಿದ್ದಾರೆ.ತೋಟಗಾರಿಕೆ ಅಧಿಕಾರಿ ರಮೇಶ್ (Ramesh) ತೋಟಕ್ಕೆ ಭೇಟಿ ನೀಡಿ, ಮೇಲ್ನೋಟಕ್ಕೆ ನಕಲಿ ಬಿತ್ತನೆ ಬೀಜ ಹಾವಳಿ ಕಂಡು ಬರುತ್ತಿದೆ.

ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು. ಬೇಟಿ ಸಂದರ್ಭದಲ್ಲಿ ಸುಬ್ರಮಣಿ (Subbaramani) , ಚಿನ್ನಪ್ಪಯ್ಯ, ಹರಿನಾಥ್, ಅಮರಪ್ಪ, ಮಣಿ, ಸೀನಪ್ಪ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ಭಾಸ್ಕರ್ ಸುನಿಲ್ ಕುಮಾರ್ (Bhaskar Sunil Kumar), ಶ್ರೀನಿವಾಸ್ ಮುಂತಾದ ನೊಂದ ರೈತರು ಹಾಜರಾಗಿದ್ದರು.

ಧನಂಜಯ್

Exit mobile version