Farmers Delhi March: ವಿಫಲವಾದ 4ನೆಯ ಸುತ್ತಿನ ಮಾತುಕತೆ ಅನ್ನದಾತರಿಂದ ‘ದೆಹಲಿ ಮಾರ್ಚ್’ ಘೋಷಣೆ!

New Delhi: ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು ಇಂದಿನಿಂದ ದೆಹಲಿ ಚಲೋ (Delhi Chalo) ಪ್ರತಿಭಟನೆಯನ್ನು ಮತ್ತೆ ಮುಂದುವರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ರಾಷ್ಟ್ರರಾಜಧಾನಿಯಲ್ಲಿ ಭದ್ರತೆ ಬಿಗಿ ಮಾಡಲಾಗಿದೆ. ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ಪೊಲೀಸರು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಗೆ ಕಾನೂನು ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಫೆಬ್ರುವರಿ (February) 13ರಂದು ಆರಂಭವಾಗಿರುವ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇಶದ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶಗಳಿಗೆ ಬಂದು ಸೇರುತ್ತಿದ್ದಾರೆ.

ಕಿಸಾನ್ ಮಜದೂರ್ ಮೋರ್ಚಾ ಶಾಂತಿಯುತ ರ್ಯಾಲಿ (Rally) ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ಶಂಭು ಗಡಿಯಲ್ಲಿ 1,170 ಟ್ರ್ಯಾಕ್ಟರ್ಗಳು, ಖನೌರಿುಲ್ಲಿ 870 ಟ್ರ್ಯಾಕ್ಟರ್ಗಳನ್ನು ನಿಯೋ ಜಿಸಲಾಗಿದೆ. ಸಂಯುಕ್ತ ಕಿಸಾನ್ (SKM) ನಾಯಕ ಸರ್ವನ್ ಸಿಂಗ್ ಪಂಧೇರ್ (Sarwan Singh Pandher) ಮಾತನಾಡಿ, ರೈತರ ಪ್ರಮುಖ 3 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಿದ್ದೇವೆ. ಬುಧವಾರ ಬೆಳಗ್ಗೆ 11ಕ್ಕೆ ರ್ಯಾಲಿ ಆರಂಭಿಸುತ್ತಿದ್ದೇವೆ ಎಂದಿದ್ದಾರೆ. ಇತ್ತ ರೈತರ ದೆಹಲಿ ಪ್ರವೇಶದ ಕರೆ ಬೆನ್ನಲ್ಲೇ ರಾಜಧಾನಿಯಲ್ಲಿ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ.

ಮತ್ತೂಂದೆಡೆ ಅಶ್ರುವಾಯು, ರಬ್ಬರ್ ಬುಲೆಟ್ಗಳಿಂದ (Rubber Bullet) ತಪ್ಪಿಸಿಕೊಳ್ಳಲು ರೈತರು ಕಬ್ಬಿಣದ ಗುರಾಣಿ, ಸೆಣಬಿನ ಚೀಲಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.ಎಲ್ಲರಿಗೂ ಮೂಲಭೂತ ಹಕ್ಕುಗಳಿದೆ ಆದರೆ, ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ತೆರಳಿ ಪ್ರತಿಭಟಿಸುವುದು ಮೋಟಾರು ವಾಹನ ಕಾಯ್ದೆ ಪ್ರಕಾರ ತಪ್ಪು. ಹಕ್ಕುಗಳನ್ನು ಚಲಾಯಿಸುವಾಗ ಸಾಂವಿಧಾನಿಕ ಕರ್ತವ್ಯಗಳನ್ನು ಮರೆಯದಿರಿ ಎಂದು ಪಂಜಾಬ್ -ಹರ್ಯಾಣ ಕೋರ್ಟ್ (Panjab-Haryana) ಮಂಗಳವಾರ ರೈತರಿಗೆ ಸೂಚನೆ ನೀಡಿದೆ. ಹೆದ್ದಾರಿಗಳಲ್ಲಿ ಹೆಚ್ಚಿನ ಜನರು ಸೇರದಂತೆ ಖಾತರಿ ಪಡಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದೆ.

Exit mobile version