Bangalore : ಹೊಸ ಬಾಡಿಗೆದಾರರ ವಾರ್ಷಿಕ ಸರಾಸರಿ ಮಿತಿಯನ್ನು ರಾಜ್ಯ ಸರ್ಕಾರವೇ ನಿರ್ಧಾರ ಮಾಡಿದ್ದು, ಕೇವಲ 59 ಯೂನಿಟ್ (fiftynine units for tenants) ಮಾತ್ರ ಫ್ರೀ ಎಂದು

ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ವಿರೋಧ (fiftynine units for tenants) ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನೀತಿಯ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿರುವ ಬಿಜೆಪಿ, ಇಷ್ಟು ಗೊಂದಲಗಳು, ಇಷ್ಟೊಂದು ಅಸ್ಪಷ್ಟತೆಯ ಹೇಳಿಕೆಗಳು.
ಮೊದಲಿಗೆ 12 ತಿಂಗಳ ಸರಾಸರಿಯ ಮೇಲೆ ಉಚಿತ ಯೂನಿಟ್ ನಿಗದಿ ಎಂದಿರಿ! ಅದರಲ್ಲೇ ಬಹಳಷ್ಟು ಗೊಂದಲಗಳು ಬಾಕಿಯುಳಿದಿರುವಾಗಲೇ,
ಇದೀಗ ಯಾವುದೇ ನಿರ್ದಿಷ್ಟ ಲೆಕ್ಕಾಚಾರಗಳಿಲ್ಲದೇ, ಯಾವುದೇ ಆಧಾರಗಳಿಲ್ಲದೇ ಎಲ್ಲಾ ಹೊಸ ಬಾಡಿಗೆದಾರರ 12 ತಿಂಗಳ ಸರಾಸರಿ 59 ಯೂನಿಟ್ ಎಂದು ತಾವುಗಳೇ

ತಮಗೆ ಖುಷಿ ಬಂದಹಾಗೆ ನಿಗದಿ ಮಾಡಿದ್ದೀರಿ. ನೀವುಗಳು ನಮ್ಮ ರಾಜ್ಯವನ್ನು ‘Taken For Granted’ ಎನ್ನುವ ರೀತಿಯಲ್ಲಿ ವರ್ತಿಸಲಾರಂಭಿಸಿದ್ದೀರಿ, ಇದು ಹೆಚ್ಚು ದಿವಸ ನಡೆಯದೆಂಬ ಎಚ್ಚರವಿರಲಿ ಎಂದು ಎಚ್ಚರಿಸಿದೆ.
ಇನ್ನೊಂದು ಟ್ವೀಟ್ನಲ್ಲಿ, ಮೋಸದ ಗ್ಯಾರಂಟಿ ತೋರಿಸಿ ಜನರನ್ನು ವಂಚಿಸಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದ ನೀತಿಗಳು ಈಗ ರಾಜ್ಯಕ್ಕೇ ಮಾರಕವಾಗಿದೆ.
ಇದನ್ನು ಓದಿ: ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
200 ಯುನಿಟ್ ಉಚಿತ ವಿದ್ಯುತ್ ಎಂದು ಇದೀಗ ಸ್ಪಷ್ಟತೆಯಿಲ್ಲದೆ ಇಳಿಸಿದ್ದೂ ಅಲ್ಲದೆ ವಿದ್ಯುತ್ ದರ ಏರಿಕೆಯ ಬಿಸಿ ನಾಗರೀಕರನ್ನು ಬೆಚ್ಚಿ ಬೀಳಿಸಿದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಗುಳೇ ಹೋಗುವಂತೆ ಮಾಡಿದೆ.
ಇನ್ನೊಂದೆಡೆ ಪೂರ್ವಸಿದ್ಧತೆಯಿಲ್ಲದೆ, ಸಾರಿಗೆ ಸೇವೆ ನೀಡಿ ಬದುಕು ಸಾಗಿಸುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಶಕ್ತಿ ಯೋಜನೆಯ ಯೋಚನಾರಹಿತ ಅನುಷ್ಠಾನದ ಮೂಲಕ ಅವರನ್ನು ನಿಶ್ಯಕ್ತರನ್ನಾಗಿಸಿದೆ.
ಹಿಟ್ಲರ್ ಸರ್ಕಾರ ಎಂದು ಜನ ಕರೆಯುತ್ತಿರುವುದು ಇದೇ ಅಂದಾದುಂಧಿ ಆಡಳಿತದ ಕಾರಣಕ್ಕೆ ಎಂದು ಲೇವಡಿ ಮಾಡಿದೆ.
ಮತ್ತೊಂದು ಟ್ವೀಟ್ನಲ್ಲಿ, ಜನರಿಗೆ ಬಿಟ್ಟಿ ಗ್ಯಾರಂಟಿಗಳ ಮೋಹಜಾಲ ಬೀಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಮಾತ್ರ ಮೇಲಿಂದ ಮೇಲೆ ಕನ್ನಡಿಗರ ಮೇಲೆ ಬರೆ ಎಳೆಯುವುದರಲ್ಲೆ ಮಗ್ನವಾಗಿದೆ.
ಆಸ್ತಿ ನೋಂದಣಿ, ಕಂದಾಯ, ಅಬಕಾರಿ, ಇಂಧನ, ಜಲಮಂಡಳಿ ಹೀಗೆ ಯಾವುದೇ ಇಲಾಖೆಯನ್ನೂ ಬಿಡದೆ ಜನಸಾಮಾನ್ಯನ ಜೇಬಿನಿಂದ ಕಾಂಗ್ರೆಸ್ ಸರ್ಕಾರ ಪಿಕ್ಪಾಕೆಟ್ ಮಾಡುತ್ತಿದೆ.
ಇದು ಕಾಂಗ್ರೆಸ್ಸಿನ ಬಿಟ್ಟಿ ಗ್ಯಾರಂಟಿ ಎಫೆಕ್ಟ್. ಮುಂಬಾಗಿಲಿನಲ್ಲಿ ನಿಂತು ಎಲ್ಲರಿಗೂ ಉಚಿತ ವಿದ್ಯುತ್ ಅಂತ ಹೇಳಿ, ಹಿಂಬಾಗಿಲಿನಿಂದ ವಿದ್ಯುತ್ ಬೆಲೆಗಳನ್ನು ಗಗನಕ್ಕೆ ಏರಿಸಿರುವ ಕಾಂಗ್ರೆಸ್
ಸರ್ಕಾರದ ತಂತ್ರ ಬಯಲಾಗಿದೆ ಎಂದು ಬಿಜೆಪಿ ಟೀಕಿಸಿದೆ.