ಹಣ ದುರುಪಯೋಗ ಹಿನ್ನಲೆ, ರಾಜ್ಯ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧ ದೂರು ದಾಖಲು

 ಬೆಂಗಳೂರು ಅ 1 : ಮೆಡಿಕಲ್ ವಿದ್ಯಾರ್ಥಿನಿಯ ಶುಲ್ಕ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧ ಬೆಂಗಳೂರಿನ ವಿವಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.ಜೊತೆಗೆ ಮಾಜಿ ಅಧ್ಯಕ್ಷ ಕಾಳೇಗೌಡ, ಮಾಜಿ ನಿರ್ದೇಶಕರಾದ ನರೇಂದ್ರ ಬಾಬು ಸೇರಿ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನಲೆ :

2016-17ನೇ ಸಾಲಿನಲ್ಲಿ ಕಿಮ್ಸ್ ನಲ್ಲಿ ಮೆಡಿಕಲ್ ಸೈನ್ಸ್ ಡಿಪ್ಲೋಮಾಗೆ ವಿದ್ಯಾರ್ಥಿನಿ ಮರಿ ಅನುಷಾ ದೀಪ್ತಿ ಸೇರಿದ್ದರು. ಅದರಂತೆ ಅವರ ತಂದೆ ವೀರಕೃಷ್ಣ ಶುಲ್ಕವನ್ನು ಅರ್ಧ ಮಾತ್ರ ಕಟ್ಟಿದ್ದರು. ಉಳಿದ ಹಣವನ್ನು ಕಟ್ಟುವಂತೆ 2018 ಅಕ್ಟೋಬರ್ 26ಕ್ಕೆ ಇವರು ನೋಟಿಸ್‌ ನೀಡಿದ್ದರು ಎನ್ನಲಾಗಿದೆ ನಂತರ ಅವರು ಹಣವನ್ನು ಅಪ್ಪಾಜಿಗೌಡರಿಗೆ ಹಂಚಿದ್ದರು, ಆದರೆ ಅವರು ಅ ಹಣವನ್ನು ಮತ್ತಿಬ್ಬರಿಗೆ ಹಂಚಿದ್ದರು ಹಾಗೂ ಪೋಷಕರು ನೀಡಿರುವ ಹಣವನ್ನು  ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಿಮ್ಸ್ ಕಡೆಯಿಂದ ಮೂವರ ವಿರುದ್ಧ ದೂರು ದಾಖಲಾಗಿದೆ.

ಅಪ್ಪಾಜಿಗೌಡ  ಹಾಗೂ ಇನ್ನಿತರರು  2016-17ರ ಶೈಕ್ಷಣಿಕ ಸಾಲಿನ ಮೆಡಿಕಲ್ ವಿದ್ಯಾರ್ಥಿ ಶುಲ್ಕ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಇಓ ಡಾ. ಸಿದ್ದರಾಮಯ್ಯ ದೂರು ನೀಡಿದ್ದರು. ಅಪ್ಪಾಜಿ ಗೌಡ ಮತ್ತು ಇತರರ ವಿರುದ್ಧ ಒಟ್ಟು 70 ಲಕ್ಷ ಹಣ ಪಡೆದು ಸಂಸ್ಥೆಗೆ ನೀಡದೆ ವಂಚಿಸಿರುವ ಆರೋಪದ ಮೇಲೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 420, 1206, 406, 417 ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Exit mobile version