ಬೆಂಗಳೂರಿನಲ್ಲಿ ಉಗ್ರರಿಗೆ ಬಾಡಿಗೆ ಮನೆ ನೀಡಿದ ಮನೆಮಾಲೀಕರ ಮೇಲೂ ಎಫ್ಐಆರ್

Bengaluru: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ಸಂಚು ನಡೆಸಿದ್ದ ಐವರು ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆ (FIR on house owner) ನೀಡಿದ ಮಾಹಿತಿ ಆಧರಿಸಿ, ಬೆಂಗಳೂರು ಪೊಲೀಸರು, ಸಿಸಿಬಿ

(CCB) ಮತ್ತು ರಾಜ್ಯ ಗುಪ್ತಚರ ಇಲಾಖೆ ಜಂಟಿಯಾಗಿ ದಾಳಿ ನಡೆಸಿವೆ ಬಂದಿಸಿದ್ದು,ಇದೀಗ ಉಗ್ರರಿಗೆ ಮನೆ ಬಾಡಿಗೆ ನೀಡಿದ ಮನೆ ಮಾಲೀಕರಿಗೂ ಇದೀಗ ಸಂಕಷ್ಟ ಎದುರಾಗಿದೆ.

ಪೂರ್ವಾಪರ ತಿಳಿಯದೇ, ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೇ, ಅಪರಿಚಿತರಿಗೆ ಮನೆ ಬಾಡಿಗೆ ನೀಡಿರುವ ಮನೆ ಮಾಲೀಕರ ಮೇಲೂ ಕೂಡಾ ಎಫ್ಐಆರ್ ದಾಖಲಿಸುವ ಕುರಿತು ಬೆಂಗಳೂರು ಆಲೋಚನೆ ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಮನೆ ಬಾಡಿಗೆ (Rent Home) ನೀಡುವ ಮುನ್ನ ಸೂಕ್ತ ದಾಖಲೆಗಳನ್ನು ಪರಿಶೀಲನೆ ನಡೆಸುವ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೂಡಾ ಸಿದ್ದತೆ ನಡೆಸಲಾಗಿದೆ.

ಇದನ್ನು ಓದಿ:ಹಾಲು ಪೂರೈಕೆ ಡೇಟಾ ಪಡೆದು ಹೈನುಗಾರರಿಗೆ ಸಾಲ, ಆರ್‌ಬಿಐನಿಂದ ವಿನೂತನ ಕ್ರಮ

ಈ ಪ್ರಕರಣದಲ್ಲಿ ಮನೆ ಬಾಡಿಗೆ ಕೊಡಬೇಕಾದರೆ ಪಾಲಿಸಬೇಕಾದ ನಿಯಮ ಪಾಲಿಸದೇ ಮನೆ ಕೊಟ್ಟಿದ್ದಾರೆ. ಕರಾರು ಪತ್ರ (Rent Agreement)ಪಡೆಯದೇ ಮನೆ ಬಾಡಿಗೆ ಕೊಟ್ಟಿರುವ ಆರೋಪದ

ಮೇಲೆ ಪದ್ಮಾ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಲು (FIR on house owner) ಸಿದ್ದತೆ ನಡೆದಿದೆ.

ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಉಗ್ರರಿಗೆ ಬಾಡಿಗೆ ಮನೆ ಅಥವಾ ಆಶ್ರಯ ನೀಡಿರುವ ಮಾಲೀಕರ (House Owner) ಮೇಲೆ ಎಫ್ಐಆರ್ ದಾಖಲಾಗಿದೆ.ಇನ್ನು ಪ್ರಾಥಮಿಕ ತನಿಖೆಯ ಪ್ರಕಾರ, ಉಗ್ರರು ಪ್ರತಿ ಆರು

ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಮಾಡುತ್ತಿದ್ದರು. ಒಂದೇ ಮನೆಯಲ್ಲಿ ಇದ್ದರೆ ಪೊಲೀಸರಿಗೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ಆಗಾಗ ಮನೆ ಬದಲಾಯಿಸುತ್ತಿದ್ದರು.

ಹಿಂದೂ ಮುಖಂಡರೇ ಟಾರ್ಗೆಟ್ :


ಬಂಧಿತ ಶಂಕಿತ ಉಗ್ರರು ಕರ್ನಾಟಕದಲ್ಲಿರುವ ಪ್ರಮುಖ ಹಿಂದೂ ಮುಖಂಡರನ್ನು ಹತ್ಯೆ ಮಾಡಲು ಸಂಚು ನಡೆಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಯಾವ ಯಾವ ಹಿಂದೂ ನಾಯಕರನ್ನು ಹತ್ಯೆ ಮಾಡಬೇಕೆಂಬ

ಕುರಿತು ಚರ್ಚೆ ನಡೆಸಲಾಗಿತ್ತು ಎನ್ನಲಾಗಿದೆ. ಬಂಧಿತರಿಂದ ವಶಕ್ಕೆ ಪಡೆಯಲಾಗಿರುವ ಮೊಬೈಲ್ನಲ್ಲಿ ಹಿಂದೂ ಮುಖಂಡರ ಪೋಟೋಗಳು ಹರಿದಾಡಿವೆ ಎನ್ನಲಾಗಿದೆ. ಆದರೆ ರಾಜ್ಯದ ಯಾವ ಯಾವ ಹಿಂದೂ ಮುಖಂಡರನ್ನು

ಹತ್ಯೆ ಮಾಡಲು ಸಂಚು ನಡೆಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಉಗ್ರರು ಬೆಂಗಳೂರಿನಲ್ಲಿ ಭಯಾನಕ ಸ್ಪೋಟ ನಡೆಸಲು ಸ್ಥಳಗಳನ್ನು ಕೂಡಾ ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.

Exit mobile version