Bengaluru: ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಳೆದ ಭಾನುವಾರ ಪ್ಯಾಲೆಸ್ತೀನ್ಗೆ (FIR – Palestine Bengaluru supporters) ಬೆಂಬಲ ಸೂಚಿಸಿ ಮೌನ ಪ್ರತಿಭಟನೆ ನಡೆಸಿದ ಜನರ ಗುಂಪಿನ
ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರತಿಭಟನಾಕಾರರು ಅನುಮತಿ ಪಡೆಯದೆ ಮೌನ ಪಾದಯಾತ್ರೆ ನಡೆಸಿದ್ದಾರೆ ಎಂದು ಎಫ್ಐಆರ್ (FIR) ದಾಖಲಿಸಲಾಗಿದೆ.
ಇಸ್ರೇಲ್ (Israel)-ಹಮಾಸ್ ಯುದ್ಧ ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಪ್ರತಿಭಟನಾಕಾರರು ಅನುಮತಿ ಪಡೆಯದೆ ಮೌನ ಪಾದಯಾತ್ರೆ ನಡೆಸಿದ್ದಾರೆ ಎಂದು ಎಫ್ಐಆರ್ ದಾಖಲಿಸಲಾಗಿದ್ದು,
ಕಳೆದ ಭಾನುವಾರ ಸಂಜೆ ಪ್ಯಾಲೆಸ್ತೀನ್ಗೆ (Palestine) ಬೆಂಬಲ ಸೂಚಿಸಿ ಫಲಕಗಳು ಮತ್ತು ಪೋಸ್ಟರ್ಗಳನ್ನು ಹಿಡಿದು ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿ ಮೌನ ಪಾದಯಾತ್ರೆ ನಡೆಸಿದ ಜನರ ಗುಂಪು
ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹಿರಿಯ ಪೊಲೀಸ್ (FIR – Palestine Bengaluru supporters) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಹೈಕೋರ್ಟ್ (High Court) ಆದೇಶದಂತೆ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ಇದ್ದು, ಆದರೆ ಕೆಲ ಜನರ ಗುಂಪು ಪೋಸ್ಟರ್ಗಳನ್ನು ಹಿಡಿದು ಮೌನ ಮೆರವಣಿಗೆ
ಮಾಡಿದ್ದಾರೆ. ಇದರಿಂದ ಪಾದಚಾರಿ ಸಂಚಾರಕ್ಕೂ ಅಡ್ಡಿಯಾಗಿದೆ. ಆದ್ದರಿಂದ, ಸ್ವೀಕರಿಸಿದ ದೂರಿನ ಆಧಾರದ ಮೇಲೆ, ಪ್ರತಿಭಟನಾಕಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (Section)
149 (ಕಾನೂನುಬಾಹಿರ ಸಭೆ), 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ),
283 (ಸಾರ್ವಜನಿಕ ಮಾರ್ಗದಲ್ಲಿ ಅಥವಾ ನ್ಯಾವಿಗೇಷನ್ (Navigation) ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ) 290 (ಸಾರ್ವಜನಿಕ ಉಪದ್ರವ) ಮತ್ತು 291 (ತಡೆಯನ್ನು ನಿಲ್ಲಿಸಲು ತಡೆಯಾಜ್ಞೆಯ
ನಂತರ ಉಪದ್ರವವನ್ನು ಮಾಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
100 ಕ್ಕೂ ಹೆಚ್ಚು ಜನರು ಪ್ಯಾಲೆಸ್ತೀನ್ಗೆ ಬೆಂಬಲ ಸೂಚಿಸಿ ಭಾನುವಾರ (ನ.05) ಸಂಜೆ ಚರ್ಚ್ ಸ್ಟ್ರೀಟ್ನಲ್ಲಿ (Church Street) ಭಿತ್ತಿಪತ್ರಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಮೌನ ನಡಿಗೆ
ನಡೆಸಿದ್ದರು. ಹೋರಾಟಗಾರರು ಪೋಸ್ಟರ್ಗಳಲ್ಲಿ ಕಲ್ಲಂಗಡಿಗಳ ಚಿತ್ರಗಳನ್ನು ಪ್ರದರ್ಶಿಸಿದರು. ಪ್ಯಾಲೆಸ್ತೀನ್ ಧ್ವಜದ ಬಣ್ಣಕ್ಕೆ ಸಾಂಕೇತಿಕವಾಗಿ ಕಲ್ಲಂಗಡಿ ಹಣ್ಣಿನ್ನು ಪ್ರದರ್ಶಿಸಿ “ಕಲ್ಲಂಗಡಿಯನ್ನು
ಮುಕ್ತಗೊಳಿಸಿ” ಎಂಬ ಸಂದೇಶದೊಂದಿಗೆ ಮೌನ ಪ್ರತಿಭಟನೆ ಮಾಡಿದ್ರು.
ಈ ಪ್ರತಿಭಟನೆಯಲ್ಲಿ ಕೆಲವರು ತಮ್ಮ ಪೋಸ್ಟರ್ಗಳಲ್ಲಿ (Poster) ಕಲ್ಲಂಗಡಿ ಹಣ್ಣಿನ ಹಿಂದಿನ ಸಂದೇಶ ಜನರಿಗೆ ಮುಟ್ಟಲಿ ಎಂಬ ಉದ್ದೇಶದಿಂದ ಕೆಲವೊತ್ತು ನಿಂತು ಮುಂದೆ ಸಾಗಿದರು.
ಆದರೆ ಹೋರಾಟಗಾರರು ಯಾವುದೇ ಘೋಷಣೆಗಳನ್ನು ಕೂಗದೆ ಮೌನಾಚರಣೆ ಮೂಲಕ ಭಿತ್ತಿಚಿತ್ರ ಪ್ರದರ್ಶಿಸಿ ಮೆರವಣಿಗೆಯನ್ನು ಮಾಡಿದರು.
ಇದನ್ನು ಓದಿ: ಕಾಂಗ್ರೆಸ್ನ 45 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ
- ಭವ್ಯಶ್ರೀ ಆರ್ .ಜೆ