ಎಫ್‌ಐಆರ್‌‌ನಲ್ಲಿ ಸಿಲುಕಿಕೊಂಡಿರುವ ಸಲ್ಮಾನ್‌ ಖಾನ್‌ ಸಹೋದರರು

ಮುಂಬೈ, ಜ. 05: ಬಾಲಿವುಡ್ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬವನ್ನು ಡಿ.27ರಂದು ಆಚರಿಸಿಕೊಂಡಿದ್ದಾರೆ. ಪ್ರತಿವರ್ಷವೂ ಅದ್ದೂರಿಯಾಗಿ ತಮ್ಮ ಜನ್ಮದಿನ ಹುಟ್ಟು-ಹಬ್ಬವನ್ನು ಆಚರಿಸಕೊಳ್ಳುತ್ತಿದ್ದ ಸಲ್ಮಾನ್ ಖಾನ್, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಅದ್ಧೂರಿ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿ, 55ನೇ ಹುಟ್ಟುಹಬ್ಬವನ್ನು ಸರಳವಾಗಿ ಮುಂಬೈ ಪಾನ್ವೆಲ್‌ ಫಾರ್ಮ್ ಹೌಸ್‍ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಹೋದರರಾದ ಸೋಹೈಲ್ ಖಾನ್, ಅರ್ಬಾಜ್ ಖಾನ್ ಭಾಗಿಯಾಗಿದ್ದರು. ಆದರೆ, ಇವರು ದುಬೈನಿಂದ ಬಂದು ಕ್ವಾರೆಂಟೈನ್‌ ಆಗದೇ,  ಮುಂಬೈಗೆ ಬಂದು ಸಹೋದರ ಸಲ್ಮಾನ್‌ ಕಾನ್‌ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರಿಂದ ಪೊಲೀಸ್ ಕೇಸ್‍ನಲ್ಲಿ ಸಿಲುಕಿಕೊಂಡಿದ್ದಾರೆ.

ಇವರ ವಿರುದ್ಧ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಕೋವಿಡ್‌ ನಿಯಮ ಉಲ್ಲಂಘ ಪ್ರಕರಣದ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ಇದಕ್ಕೆ ಕಾರಣವೆಂದರೆ ಇವರು ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಕೋವಿಡ್ ನಿಯಮದಂತೆ ಎಲ್ಲರೂ ಐಸೋಲೇಶನ್‍ಗೆ ಒಳಗಾಗಬೇಕಿತ್ತು ಆದರೆ ಅದನ್ನು ಲೆಕ್ಕಿಸದೆ ಎಲ್ಲರೂ ಮನೆಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Exit mobile version