ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ; ಟ್ರಿಪಲ್ ಜಂಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಲ್ಡೋಸ್ ಪೌಲ್

Eldhose Paul

ಅಮೆರಿಕದಲ್ಲಿ(America) ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ(World Athletics Championship) ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪುರುಷರ ಟ್ರಿಪಲ್ ಜಂಪ್‍ನಲ್ಲಿ ಎಲ್ಡೋಸ್ ಪಾಲ್(Eldoes Paul) ಮತ್ತು ಜಾವೆಲಿನ್ ಥ್ರೋನಲ್ಲಿ(Javlien Throw) ರೋಹಿತ್ ಯಾದವ್(Rohith Yadav) ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಹೌದು, ಟ್ರಿಪಲ್ ಜಂಪ್‍ನಲ್ಲಿ ಎಲ್ಡೋಸ್ ಪಾಲ್ 16.68 ಮೀ. ಜಂಪ್ ಮಾಡುವ ಮೂಲಕ ಫೈನಲ್‍ಗೆ ಗ್ರೂಪ್ A ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಪ್ರವೇಶ ಪಡೆದರೆ, ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ.

ಎಸೆದು ಗ್ರೂಪ್ B ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಫೈನಲ್‍ಗೆ ಸೇರ್ಪಡೆಯಾಗಿದ್ದಾರೆ. ಇನ್ನು, ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ನಿರಜ್ ಚೋಪ್ರಾ(Neeraj Chopra) ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದು, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ 88.39 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಸಾಧನೆ ಮಾಡಿದ್ದಾರೆ.


39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಪದಕ ಗೆದ್ದಿದ್ದು, ಕೇವಲ ಒಂದು ಬಾರಿ ಮಾತ್ರ. 2003ರಲ್ಲಿ ಪ್ಯಾರಿಸ್‍ನಲ್ಲಿ(Paris) ನಡೆದ ಕ್ರೀಡಾಕೂಟದಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್(Anju Bobby George) ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದೀಗ ಮತ್ತೆ ಭಾರತದ ಮೂವರು ಕ್ರೀಡಾಪಟುಗಳು ವಿಶ್ವ ಅಥ್ಲೇಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಒಂದೇ ದಿನ ಫೈನಲ್‍ಗೆ ಲಗ್ಗೆ ಇಟ್ಟು ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.

Exit mobile version