ಭಾರತದಲ್ಲಿ ನೀವು ಭೇಟಿ ನೀಡಲೇಬೇಕಾದ ವಿಚಿತ್ರ ಸ್ಥಳಗಳು ಇಲ್ಲಿವೆ ನೋಡಿ!

Lepakshi Temple

India : ಭಾರತವು (India) ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ನಮ್ಮ ದೇಶವು ಅದೆಷ್ಟೋ ವಿಚಿತ್ರ ಸಂಗತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಇಲ್ಲಿರುವ ಕೆಲವೊಂದು ಪ್ರದೇಶಗಳು ನಿಗೂಢವಾದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದ್ದು, ಐತಿಹಾಸಿಕ ಮಹತ್ವಗಳಿಗೆ ಹೆಸರುವಾಸಿಯಾಗಿದೆ.

ನಮ್ಮ ದೇಶದಲ್ಲಿ, ಗಿರಿಶಿಖರಗಳಿಂದ ಹಿಡಿದು ಪ್ರಾಣಿಗಳಿಗೆ, ಮೋಟಾರ್ ವಾಹನಗಳಿಗೂ ಸಹ ಕೆಲವೊಂದು ಸ್ಥಳಗಳಲ್ಲಿ ಪೂಜೆ ನಡೆಸಲಾಗುತ್ತದೆ.

ಹೀಗೆ ಕೆಲವೊಂದು ನಂಬಲು ಅಸಾಧ್ಯವಾಗಿರುವ ಆಚರಣೆಗಳನ್ನು, ನಮ್ಮ ದೇಶದ ಕೆಲ ಪ್ರದೇಶಗಳು ಹೊಂದಿವೆ. ಈ ಸ್ಥಳಗಳ ರಹಸ್ಯ ವಿಜ್ಞಾನದ ತರ್ಕಕ್ಕೂ ನಿಲುಕಲು ಅಸಾಧ್ಯವಾಗಿದೆ. ಅಂತಹ ಕೆಲವು ಸ್ಥಳಗಳು ಇಲ್ಲಿವೆ ನೋಡಿ.

ಲೇಪಾಕ್ಷಿಯಲ್ಲಿರುವ ತೇಲಾಡುವ ಕಂಬ : ಭಾರತದಲ್ಲಿರುವ ಅತಿ ಪ್ರಮುಖ ಪುರಾತತ್ವ ಹಾಗೂ ಐತಿಹಾಸಿಕ ತಾಣವಾಗಿರುವ ಲೇಪಾಕ್ಷಿಯಲ್ಲಿ (Lepakshi) ಭಗವಾನ್ ಶಿವನನ್ನು ಆರಾಧಿಸಲಾಗುತ್ತದೆ.

ಈ ದೇವಾಲಯದಲ್ಲಿ ತೇಲಾಡುವ ಕಂಬವೊಂದಿದ್ದು, ಇದು ನೆಲಕ್ಕೆ ಅಂಟಿಕೊಂಡಿಲ್ಲ ಎಂಬುದೇ ಅಚ್ಚರಿಯ ವಿಚಾರವಾಗಿದೆ.

ಇದನ್ನೂ ಓದಿ : https://vijayatimes.com/vande-bharat-express-to-south/

ಈ ಸ್ಥಳದಲ್ಲಿರುವ 70 ಕಂಬಗಳಲ್ಲಿ, ಒಂದು ಕಂಬ (Floating Pillar In India) ಮಾತ್ರ ಗಾಳಿಯಲ್ಲಿ ನೇತಾಡುತ್ತಿದೆ. ಎಂದರೆ, ಯಾವುದೇ ಬೆಂಬಲವಿಲ್ಲದೆ ಇದು ನಿಂತಿದೆ.

ಈ ದೇವಸ್ಥಾನಕ್ಕೆ ಭೇಟಿ ನೀಡಿದ ಜನರು, ಕಂಬದ ಕೆಳಗೆ ವಸ್ತುಗಳನ್ನು ಹಾಯಿಸುತ್ತಾರೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ.

ತಲಕಾಡಿನ ಚಿಕ್ಕಮರುಭೂಮಿ : ಕಾವೇರಿ ನದಿಯ ತಟದಲ್ಲಿರುವ, ಕರ್ನಾಟಕದ(Karnataka) ಚಾಮರಾಜನಗರ (Chamrajanagar) ಜಿಲ್ಲೆಯಲ್ಲಿರುವ ತಲಕಾಡು ಮರಳಿನಿಂದ ಆವೃತವಾಗಿರುವ ಸ್ಥಳವಾಗಿದೆ.

ಮೊದಲು ಇಲ್ಲಿ 30 ದೇವಸ್ಥಾನಗಳಿದ್ದವು ಎಂಬ ಪ್ರತೀತಿಯಿದ್ದು, ಅವುಗಳಲ್ಲಿ 5 ಲಿಂಗಗಳು ಶಿವನ 5 ಮುಖಗಳನ್ನು ಪ್ರತಿನಿಧಿಸುತ್ತಿದ್ದವು ಎಂಬ ನಂಬಿಕೆ ಇದೆ.

ಶಿವನ ವಿಧವೆ ಭಕ್ತೆಯೊಬ್ಬರು ಈ ಸ್ಥಳವನ್ನು ಶಪಿಸಿದರು ಎಂಬ ನಂಬಿಕೆಯಿದೆ. ಹೀಗಾಗಿ ಈ ಸ್ಥಳವು ಮರಳಿನಿಂದ ತುಂಬಿಕೊಂಡಿದೆ ಎಂಬುದಾಗಿ ಜನರು ಅನಾದಿ ಕಾಲದಿಂದ ನಂಬಿದ್ದಾರೆ.

ಇಲ್ಲಿ, ಕಾವೇರಿ ನದಿಯು (Floating Pillar In India) ನಿಗೂಢವಾಗಿ ಸುತ್ತುವ ಸುಂಟರಗಾಳಿಯಾಗಿ ಮಾರ್ಪಡುತ್ತದೆ ಎನ್ನುವ ಪ್ರತೀತಿ ಕೂಡ ಇದೆ.

https://fb.watch/g8TLZJVf8u/ ಜಾತ್ರೆಗೂ ಹೋಗಲು ಬೇಕು ಸರ್ಕಾರಿ ಕಾರು!

ಲೇಹ್ ಲಡಾಕ್‌ನಲ್ಲಿರುವ ಅಯಸ್ಕಾಂತೀಯ ಪರ್ವತ : ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ಅಯಸ್ಕಾಂತೀಯ ಪರ್ವತ (ಮ್ಯಾಗ್ನೆಟಿಕ್ ಹಿಲ್) ಭಾರತದಲ್ಲಿ ಭೇಟಿ ನೀಡಬಹುದಾದ ಅಸಾಮಾನ್ಯ ಸ್ಥಳಗಳಲ್ಲಿ ಒಂದಾಗಿದೆ.

ಇಲ್ಲಿ ಕಾರುಗಳು ತನ್ನಷ್ಟಕ್ಕೆ ಸೆಳೆಯಲ್ಪಡುತ್ತವೆ, ಇದಕ್ಕೆ ಕಾರಣ ವಾಸ್ತವವಾಗಿ ಬೆಟ್ಟದ ಗುರುತ್ವಾಕರ್ಷಣೆಯಿಂದ (Gravitational Force) ಉಂಟಾಗುವ ಆಪ್ಟಿಕಲ್ ಭ್ರಮೆ ಎನ್ನುವುದು ವಿಜ್ಞಾನಿಗಳ ವಾದ.
Exit mobile version