ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

Kidney Stones

ಕಿಡ್ನಿಸ್ಟೋನ್‌(Kidney Stone) ಸಮಸ್ಯೆ ಇಂದು ಅನೇಕರನ್ನು ಬಾಧಿಸುತ್ತಿದೆ. ಆಧುನಿಕ ಜೀವನ ಶೈಲಿಯಿಂದ ಇಂದು ಕಿಡ್ನಿಸ್ಟೋನ್‌ ಸಮಸ್ಯೆಗೆ ಅನೇಕರು ತುತ್ತಾಗುತ್ತಿದ್ದಾರೆ. ಆದರೆ ಆಪರೇಷನ್(Operation) ಇಲ್ಲದೆಯೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮೂಲಂಗಿ : ಮೂಲಂಗಿ(Raddish) ಸೇವನೆಯು ಕಿಡ್ನಿಸ್ಟೋನ್ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇದಕ್ಕೆ ಮೂಲಂಗಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

ಎಳನೀರು : ಎಳನೀರು(Tender Coconut) ಸೇವನೆಯಿಂದ ಇನ್ಸುಲಿನ್(Insulin) ಹೆಚ್ಚಾಗುತ್ತದೆ. ಇದು ಮೂತ್ರದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ಕ್ಯಾರೆಟ್ : ಕ್ಯಾರೆಟ್ನಲ್ಲಿ(Carrot) ಉತ್ಕರ್ಷಣ ನಿರೋಧಕ ಗುಣಗಳಿವೆ. ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಕಿಡ್ನಿಸ್ಟೋನ್ ಸಮಸ್ಯೆಯಿಂದ ಪಾರಾಗಬಹುದು.

ಸೇಬು : ಕಿಡ್ನಿಸ್ಟೋನ್ ಸಮಸ್ಯೆಗೆ ಸೇಬು(Apple) ಸಹ ಉತ್ತಮ ಆಯ್ಕೆಯಾಗಿದೆ. ಪ್ರತಿದಿನ ಒಂದು ಲೋಟ ಸೇಬಿನ ರಸವನ್ನು ಕುಡಿಯುವುದು ಉತ್ತಮ.

ಕಪ್ಪು ಜೀರಿಗೆ : ಕಿಡ್ನಿಸ್ಟೋನ್ ಸಮಸ್ಯೆಗೆ ಕಪ್ಪು ಜೀರಿಗೆ(Zeera) ಉತ್ತಮ ಔಷಧವಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ಒಂದು ಚಮಚ ಸೇವಿಸುವುದರಿಂದ ಕಿಡ್ನಿಸ್ಟೋನ್ ಉಂಟಾಗುವುದನ್ನು ತಡೆಯುತ್ತದೆ.

ನೀರು ಸೇವನೆ : ಕಿಡ್ನಿಸ್ಟೋನ್ ಸಮಸ್ಯೆ ಇರುವವರು ದಿನಕ್ಕೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು(Water) ಕುಡಿಯಬೇಕು. ಕಲ್ಲುಗಳನ್ನು ರೂಪಿಸುವ ರಾಸಾಯನಿಕಗಳನ್ನು ಕರಗಿಸಲು ನೀರು ಸಹಾಯ ಮಾಡುತ್ತದೆ.

ಬಾರ್ಲಿ ನೀರು : ಇದರಲ್ಲಿ ಕಂಡುಬರುವ ಪೋಷಕಾಂಶಗಳು ಕಲ್ಲುಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ ಕೆಲಸ ಮಾಡುತ್ತವೆ.

ಮಾಂಸಕ್ಕೆ ಕಡಿವಾಣ : ಕಿಡ್ನಿಸ್ಟೋನ್‌ ಸಮಸ್ಯೆ ಇರುವವರು ಮಾಂಸವನ್ನು(Meat) ಹೆಚ್ಚಾಗಿ ಸೇವಿಸಬಾರದು. ಇದರಿಂದ ಕಿಡ್ನಿಯ ಕಲ್ಲುಗಳ ಮತ್ತಷ್ಟು ದೊಡ್ಡದಾಗುತ್ತವೆ.

Exit mobile version