ಮಕ್ಕಳಿಗೆ ನಿಲುಕದ ಅಂಗನವಾಡಿ ಆಹಾರ

Anganavadi foods not for Kids | ಮಕ್ಕಳಿಗೆ ಸಿಗುತ್ತಿಲ್ಲ  ಅಂಗನವಾಡಿ ಆಹಾರ | Citizen journalist |

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ಪೇಟೆ ದಡದ ಹಳ್ಳಿ ಗ್ರಾಮದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವೇ ತಲುಪುತ್ತಿಲ್ಲ. ಇದಕ್ಕೆ ಕಾರಣ ಏನು ಅನ್ನೋದನ್ನ ಸಿಟಿಜನ್ ಜರ್ನಲಿಸ್ಟ್ ರಾಜೇಂದ್ರ ಸುಹಾಸ್ ಅವರು ಪತ್ತೆ ಹಚ್ಚಿದ್ದಾರೆ. ಇದು ಅಂಗನವಾಡಿ ಮಕ್ಕಳ ಹೊಟ್ಟೆ ಸೇರಬೇಕಿದ್ದ ಆಹಾರ ಪದಾರ್ಥಗಳು. ಆದ್ರೆ ಹೇಗೆ ಅನಾಥವಾಗಿ ಬಿದ್ದಿದೆ ನೋಡಿ. ಇದು ಇನ್ನು ಸ್ವಲ್ಪ ದಿನದಲ್ಲೇ ಹುಳಹುಪ್ಪಟೆಯಾಗಿ ಮಕ್ಕಳ ಹೊಟ್ಟೆ ಸೇರೋ ಬದಲು ನಾಯಿ, ದನಕರು ಪಾಲಾಗುತ್ತೆ.

ಮಕ್ಕಳ ಪೌಷ್ಟಿಕ ಆಹಾರಕ್ಕೆ ಇಂಥಾ ದುಸ್ಥಿತಿ ಬಂದಿದ್ದು ಎಲ್ಲಿ ಗೊತ್ತಾ? ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಪೇಟೆದಡದ ಹಳ್ಳಿ ಗ್ರಾಮದಲ್ಲಿ. ಇದಕ್ಕೆ ಮುಖ್ಯ ಕಾರಣ ಅಂಗನವಾಡಿ ಕಾರ್ಯಕರ್ತೆಯರ ದಿವ್ಯ ನಿರ್ಲಕ್ಷ್ಯ. ಕೊರೋನಾದಿಂದಾಗಿ ಸರ್ಕಾರ ಇನ್ನೂ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸಿಲ್ಲ. ಆದ್ರೆ ಮಕ್ಕಳಿಗೆ ತಲುಪಿಸಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದು, ಅದನ್ನು ಮಕ್ಕಳ ಪೋಷಕರಿಗೆ ತಲುಪಿಸುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ.ಆದ್ರೆ ದಡದಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಈ ಕೆಲಸ ಮಾಡುತ್ತಿಲ್ಲ. ಇದರಿಂಸ ಮಕ್ಕಳಿಗೆ ವಿತರಣೆ ಆಗಬೇಕಿದ್ದ ಆಹಾರ ಪದಾರ್ಥಗಳು ಶಾಲಾವರಣದಲ್ಲಿ ಅನಾಥವಾಗಿ ಬಿದ್ದಿದೆ. ಇದರಿಂದ ಸ್ಥಳೀಯರು ಆಕ್ರೋಶಿತರಾಗಿದ್ದಾರೆ.

ಈ ಅಂಗನವಾಡಿ ಕೇಂದ್ರವನ್ನು ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಕೇಂದ್ರಕ್ಕೆ  ಸರಿಯಾಗಿ ಬರುವುದಿಲ್ಲ ಮತ್ತು ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಭದ್ರವಾಗಿ ಇಡುವುದಿಲ್ಲ.  ಶಾಲೆಯ ಹೊರಗೇ ಆಹಾರ ಪದಾರ್ಥ ಇಟ್ಟಿರುತ್ತಾರೆ ಅನ್ನೋದು ಊರಿನ ಜನರ ದೂರು.ಕೊರೋನಾ ಭೀತಿ ಜನರನ್ನು ಇನ್ನೂ ಕಾಡುತ್ತಲೇ ಇದೆ. ಈ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗಿರುವುದು ತುಂಬಾ ಮುಖ್ಯ. ಅದರಲ್ಲೂ ಎಳೆ ಮಕ್ಕಳಿಗೆ ತಿನ್ನಿಸುವ ಆಹಾರವನ್ನು ಎಲ್ಲೆಂದರಲ್ಲಿ ಹೊರಗಡೆ ಇಟ್ಟು ಬಿಡುವುದು ಮಕ್ಕಳ ಆರೋಗ್ಯದ ಗತಿ ಏನಾಗಬೇಕು?ಎಂದು ಸಾರ್ವಜನಿಕರು ದೂರಿದ್ದಾರೆ.

ಅಂಗನವಾಡಿ ವ್ಯವಸ್ಥಾಪಕರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಇವರಿಬ್ಬರನ್ನೂ ವಜಾ ಗೊಳಿಸಿ ಬೇರೆ ಕಾರ್ಯಕರ್ತರನ್ನು ನೇಮಿಸಬೇಕೆಂಬು ಊರಿನ ಜನರ ಆಗ್ರಹವಾಗಿದೆ.ಆಹಾರ ವಿತರಣೆಯ ಬಗ್ಗೆಯೂ ತಾಲೂಕು ಅಧಿಕಾರಿಗಳು ಕೂಡಲೇ ತನಿಖೆ ನಡೆಸಬೇಕು. ಅಂಗನಾಡಿ ಶಿಕ್ಷಕರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಸ್ಥಳಿಯರು ಎಚ್ಚರಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರವಾಗಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ತನಿಖೆ ನಡೆಸಿ ನ್ಯಾಯ ನೀಡಲಿ ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ

Exit mobile version