ಆಮ್ಲಜನಕ ಟ್ಯಾಂಕರ್‌ ಚಾಲಕರಿಗೆ ಕೊರೋನಾ ಲಸಿಕೆ ನೀಡಬೇಕೆಂದು ಕೇಂದ್ರ ಸೂಚನೆ

ನವದೆಹಲಿ, ಮೇ. 22: ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಎಲ್ಲ ಕಡೆ ಸರಿಯಾಗಿ ಲಸಿಕೆ ಸಿಗ್ತಿಲ್ಲ. ಕೆಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿಲ್ಲ. ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗ್ತಿದೆ.

ಈ ಮಧ್ಯೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲ ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದೆ. ಆಮ್ಲಜನಕ ಟ್ಯಾಂಕರ್ ಚಾಲಕರಿಗೆ ಲಸಿಕೆ ಹಾಕಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ.

ಆಮ್ಲಜನಕ ಟ್ಯಾಂಕರ್ ಚಾಲಕರಿಗೆ ಕೊರೊನಾ ಕಾಣಿಸಿಕೊಂಡಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ಸಚಿವಾಲಯ ಹೇಳಿದೆ. ಅಪಾಯಕಾರಿ ಸರಕು ಹಾಗೂ ರಾಸಾಯನಿಕಗಳನ್ನು ಸಾಗಣೆ ಮಾಡುವ ಚಾಲಕರಿಗೂ ಲಸಿಕೆ ನೀಡುವಂತೆ ಸಚಿವಾಲಯ ಸೂಚನೆ ನೀಡಿದೆ.

ಕೆಲ ವಾರಗಳಲ್ಲಿ 500 ಚಾಲಕರಿಗೆ ಲಸಿಕೆ ನೀಡಿದ್ರೆ ಎರಡು ತಿಂಗಳಲ್ಲಿ 2500 ಚಾಲಕರಿಗೆ ಲಸಿಕೆ ನೀಡುವ ಬಗ್ಗೆ ಗಮನ ನೀಡಿ ಎಂದು ಕೇಂದ್ರ ಹೇಳಿದೆ. ತರಬೇತಿ ಪಡೆದ ಚಾಲಕರ ಮಾಹಿತಿ ಕಲೆ ಹಾಕಿ ಪಟ್ಟಿ ಮಾಡಿದ್ದಲ್ಲಿ ಅವರ ಸೇವೆ ಪಡೆಯುವುದು ಸುಲಭ ಎಂದು ಸಚಿವಾಲಯ ಹೇಳಿದೆ.

Exit mobile version