ನವದೆಹಲಿ, ಮೇ. 06: ರಾಷ್ಟ್ರೀಯ ಲೋಕಾ ದಳದ (ಆರ್ಡಿಎಲ್) ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್ ಸಿಂಗ್ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. 82 ವರ್ಷದ ಉತ್ತರಪ್ರದೇಶದ ಆರ್.ಎಲ್.ಡಿ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರು ಕೊವಿಡ್ ಪಾಸಿಟಿವ್ ವರದಿಯ ಬಳಿಕ ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಅಜಿತ್ ಸಿಂಗ್ ಅವರು ದೇಶಕ್ಕೆ ಹಿಂದಿರುಗುವ ಮೊದಲು ಅಮೆರಿಕಾದಲ್ಲಿ ಕಂಪ್ಯೂಟರ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 15 ವರ್ಷಗಳ ಕಾಲ ಈ ಉದ್ಯಮದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಜಿತ್ ಸಿಂಗ್ ಅವರು ಬಾಗ್ಪತ್ನಿಂದ ಏಳು ಬಾರಿ ಸಂಸದರಾಗಿದ್ದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.