ಪ್ರಚೋದನಾಕಾರಿ ಪೋಸ್ಟ್: ಅಮೆರಿಕಾ ಮಾಜಿ‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ಖಾತೆ ಅಮಾನತು

ವಾಷಿಂಗ್‌ಟನ್‌, ಜೂ. 05: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಫೇಸ್‌ಬುಕ್‌ ಖಾತೆಯನ್ನು ಫೇಸ್‌ಬುಕ್‌ ಸಂಸ್ಥೆ ಎರಡು ವರ್ಷಗಳ ಕಾಲ ಅಮಾನತು.

ʻಅಮೆರಿಕಾದ ಕ್ಯಾಪಿಟಲ್ ಕಟ್ಟಡದ ಮೇಲೆ ಜನವರಿ 6ರಂದು ನಡೆದ ದಾಳಿಗೆ, ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್​ಬುಕ್ ಪೋಸ್ಟ್​ಗಳು ಪ್ರಚೋದನಕಾರಿಯಾಗಿದ್ದವುʼ ಎಂದು ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ.

ಅನಿರ್ದಿಷ್ಟಾವಧಿವರೆಗೆ ಖಾತೆಯನ್ನು ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಸೂಚಿಸಿದ ಸಂಸ್ಥೆ ಸೂಕ್ತ ನಿರ್ಧಾರ ಕೈಗೊಳ್ಳಲು ಆರು ತಿಂಗಳ ಕಾಲವನ್ನು ನೀಡಿದೆ. ಟ್ರಂಪ್ ಖಾತೆಗಳಿಗೆ ಜನವರಿಯಿಂದಲೇ ತಡೆ ಹಿಡಿಯಲಾಗಿದ್ದು, ಪರಿಸ್ಥಿತಿ ಅವಕಾಶ ನೀಡಿದರೆ ಮತ್ತೆ ಪುನಃಸ್ಥಾಪಿಸಲಾಗುವುದು ಎಂದು ಫೇಸ್​ಬುಕ್ ತನ್ನ ಬ್ಲಾಗ್ ಪೋಸ್ಟ್​ನಲ್ಲಿ ವಿವರಿಸಿದೆ.

ಟ್ರಂಪ್ ಖಾತೆಗಳನ್ನು ಅಮಾನತುಗೊಳಿಸಿರುವ ಬಗ್ಗೆ ತಿಳಿಸಿರುವ ಫೇಸ್​ಬುಕ್, ʻಡೊನಾಲ್ಡ್ ಟ್ರಂಪ್ ಅವರ ನಡೆಯು ಫೇಸ್​ಬುಕ್ ಸಂಸ್ಥೆಯ ಹೊಸ ನಿಯಮಾವಳಿಗಳನ್ನು ಮುರಿದಿದೆ. ಪ್ರೊಟೊಕಾಲ್​ಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆʼ ಎಂದು ಸ್ಪಷ್ಟಪಡಿಸಿದೆ.
ಫೇಸ್‌ಬುಕ್‌ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ರಿಪಬ್ಲಿಕನ್‌ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Exit mobile version