Chennai: ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ನಿರ್ಮಾಪಕರೊಂದಿಗಿನ ದುರ್ವರ್ತನೆಗಾಗಿ ನಾಲ್ವರು ಪ್ರಮುಖ ತಮಿಳು ನಟರಿಗೆ ರೆಡ್ ಕಾರ್ಡ್ (Red Card) ನೀಡಿದೆ. ಕಾರ್ಯಕಾರಿ ಸಮಿತಿ ಸಭೆಯು ಇಡೀ ತಮಿಳು ಚಿತ್ರರಂಗವನ್ನು ಬೆಚ್ಚಿ ಬೀಳಿಸುವ ಈ ನಿರ್ಧಾರಕ್ಕೆ ಬಂದಿದೆ.

ಮೂಲಗಳ ಪ್ರಕಾರ, ನಟ ಸಿಂಬು (Simbu), ವಿಶಾಲ್, ಎಸ್ಜೆ ಸೂರ್ಯ, ಅಥರ್ವ ಮತ್ತು ಯೋಗಿ ಬಾಬು ಈ ಜೂನ್ನಲ್ಲಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯಿಂದ (ಟಿಎಫ್ಪಿಸಿ) ಎಚ್ಚರಿಕೆ ನೊಟೀಸ್ (Notice) ಪಡೆದುಕೊಂಡಿದ್ದಾರೆ. ಆದರೆ ಈಗ ಬಂದಿರುವ ವರದಿಯ ಪ್ರಕಾರ ಖ್ಯಾತ ನಟ ಧನುಷ್, ಸಿಂಬು, ಅಥರ್ವ ಮತ್ತು ವಿಶಾಲ್ಗೆ ನಿರ್ಮಾಪಕರ ಮಂಡಳಿಯು ರೆಡ್ ಕಾರ್ಡ್ ನೀಡಿದೆ.
ಇನ್ನು ನಿರ್ಮಾಪಕರ ಮಂಡಳಿಯಿಂದ ನೀಡಲಾಗಿರುವ ರೆಡ್ ಕಾರ್ಡ್ಗಳು ನಟರಿಗೆ ಕಠಿಣ ಶಿಕ್ಷೆಯಾಗಿದ್ದು, ಮುಂದಿನ ಸೂಚನೆ ಬರುವವರೆಗೂ ಅವರು ತಮಿಳು (Tamil) ಚಿತ್ರರಂಗದಲ್ಲಿ ಯಾವುದೇ ನಿರ್ಮಾಪಕರೊಂದಿಗೆ ಕೆಲಸ ಮಾಡುವಂತಿಲ್ಲ. ಇನ್ನು ತಮಿಳಿನ ಸ್ಟಾರ್ ನಟರಿಗೆ ನಿರ್ಮಾಪಕರ ಮಂಡಳಿಯು ರೆಡ್ ಕಾರ್ಡ್ಗಳನ್ನು ನೀಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಟರು ತಮ್ಮ ತೆಗೆದುಕೊಂಡಿರುವ ಬಾಕಿ ಹಣವನ್ನು ತೀರಿಸುವವರೆಗೆ ಅಥವಾ ನಿರ್ಮಾಪಕರೊಂದಿಗಿನ ವಿವಾದಗಳನ್ನು ಇತ್ಯರ್ಥಗೊಳಿಸುವವರೆಗೆ, ಈ ರೆಡ್ ಕಾರ್ಡ್ ಪಡೆದಿರುವ ನಟರು ಯಾವುದೇ ತಮಿಳು ಚಿತ್ರದಲ್ಲಿ ಕೆಲಸ ಮಾಡಲು ಅವರಿಗೆ ಅನುಮತಿಸಲಾಗುವುದಿಲ್ಲ. ನಟನ ವೃತ್ತಿಜೀವನವು ರೆಡ್ ಕಾರ್ಡ್ನಿಂದ ತೀವ್ರವಾಗಿ ಪರಿಣಾಮ ಬೀರಬಹುದು, ಏಕೆಂದರೆ ಅದು ಅವರ ಖ್ಯಾತಿ ಮತ್ತು ಭವಿಷ್ಯದ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ.
ಸದ್ಯ ಸಂಕಷ್ಟದಲ್ಲಿರುವ ನಾಲ್ವರು ನಟರು ಈ ಆರೋಪಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ. ವಿಶಾಲ್ (Vishal) ಅವರ ಮುಂಬರುವ ಬಿಡುಗಡೆ ಮಾರ್ಕ್ ಆಂಟನಿ ಮತ್ತು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ (Captain Miller) ಚಿತ್ರಗಳು ಯಾವುದೇ ಪರಿಣಾಮವಿಲ್ಲದೆ ಬಿಡುಗಡೆಯಾಗುತ್ತದೆಯೇ ಎಂದು ನೋಡಬೇಕಾಗಿದೆ. ಈ ರೆಡ್ಕಾರ್ಟ್ ನೊಟೀಲ್ ಇದೀಗ ತಮಿಳು ಚಿತ್ರರಂಗದಲ್ಲಿ ನಟರು ಮತ್ತು ನಿರ್ಮಾಪಕರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.