ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಮಕ್ಕಳಿಗೆ ಉಚಿತ ಟ್ಯೂಷನ್ ಮತ್ತು ಕೌಶಲ್ಯ ತರಬೇತಿ  

bbmp - skill training free

ಬಿಬಿಎಂಪಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಕೌಶಲ್ಯ ತರಬೇತಿ ಬಡ ಸರಕಾರಿ ಶಾಲೆ ಮಕ್ಕಳಿಗೆ  ಮತ್ತು ಕೊಳಗೇರಿಯಲ್ಲಿ ವಾಸ ಮಾಡತ್ತಿರುವ ಮಕ್ಕಳಿಗೆ  ಉಪಯೋಗವಾಗಲಿದೆ.

ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಯೋಜನೆಯನ್ನು ಪ್ರಾರಂಭಿಸಲಿದ್ದು, ಅದರ ಅಡಿಯಲ್ಲಿ 3 ರಿಂದ 5 ತರಗತಿಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಆಗಸ್ಟ್ 15 ರಿಂದ ಎನ್ಜಿಒಗಳ ಸಹಕಾರದೊಂದಿಗೆ ಬೋಧನೆಯನ್ನು ಒದಗಿಸುತ್ತದೆ.

ಕೊಳೆಗೇರಿಗಳು ಮತ್ತು ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಕಲಿಕೆಯ ಅವಕಾಶಗಳು, ತರಬೇತಿ ಮನೆಕೆಲಸದಲ್ಲಿ ಸಹಾಯ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದು ಯೋಜನೆಯ ಉದ್ದೇಶವಾಗಿದೆ.

ಸದ್ಯಕ್ಕೆ ಬಿಬಿಎಂಪಿ ಶಾಲೆಗಳ ತರಗತಿ ಕೊಠಡಿಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಕಲ್ಯಾಣ ಇಲಾಖೆಯ ಆಯುಕ್ತ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ಟ್ಯೂಷನ್  ಸೆಂಟರ್ ಗಳ ಮೇಲೆ ನಿಗಾ ಇಡಲು ಸ್ಥಳೀಯ ಎನ್ಜಿಒಗಳಿಗೆ ಅಧಿಕಾರ ನೀಡಲಾಗಿದೆ. ವಿವಿಧ ಎನ್ಜಿಒಗಳು ವಿದ್ಯಾರ್ಥಿಗಳಿಗೆ ಅಗತ್ಯ ಉಪಕರಣಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ ಯುವಕರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮಾರ್ಗದರ್ಶನ ಮಾಡುತ್ತಾರೆ. ಬಿಬಿಎಂಪಿ ಈ ಮೂಲಕ ಬಾಲಕ-ಬಾಲಕಿಯರಿಗೆ 1500 ಗೌರವ ಧನ ನೀಡಲಿದ್ದಾರೆ, ಪ್ರತಿ ಟ್ಯೂಷನ್ ಸೆಂಟರ್ ನಲ್ಲಿ 20 ರಿಂದ 30 ವಿದ್ಯಾರ್ಥಿಗಳು ಇರುತ್ತಾರೆ.

Exit mobile version