ಇನ್ಮುಂದೆ ರೈಲುಗಳಲ್ಲಿನ ಉಚಿತ ವೈಫೈ ರದ್ದು

ನವದೆಹಲಿ, ಆ. 07: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಉಚಿತ ವೈಫೈ ನೀಡುತಿತ್ತು. ಆದರೆ ಇದೀಗ ರೈಲುಗಳಲ್ಲಿ ನೀಡುತ್ತಿರುವ ವೈಫೈ ಸೇವೆಗಳನ್ನು ರದ್ದು ಮಾಡುವುದಾಗಿ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಮಾಜಿ ಸಚಿವರ ಪಿಯೂಶ್ ಗೋಯಲ್ 2019ರಲ್ಲಿ ರೈಲುಗಳಲ್ಲಿ ಮುಂದಿನ ನಾಲ್ಕು ವರ್ಷಗಳ ಒಳಗೆ ರೈಲಿನಲ್ಲಿ ವೈ-ಫೈ ನೀಡುವ ಯೋಜನೆಗೆ ಚಾಲನೆ ನೀಡಿದ್ದರು ಆದರೆ, ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಹಲವು ಸಮಸ್ಯೆಗಳು ಎದುರಾಗಿರುವ ಕಾರಣ ಕೇಂದ್ರ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದೆ.  ಭಾರತೀಯರೈಲ್ವೆ ಇಲಾಖೆ  ಪ್ರಸ್ತುತ ಸುಮಾರು 6000ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ವೈ-ಫೈ ಇಂಟರ್ನೆಟ್ ಸೌಲಭ್ಯ ಒದಗಿಸುತ್ತಿದೆ. ಸಚಿವಾಲಯದ ಅಡಿ ಒಂದು ಪಿ ಎಸ್ ಯು ಅಡಿ ರೈಲ್ ಟೆಲ್  ನೆಟ್ವರ್ಕ್ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ರೈಲ್ವೆ ಇಲಾಖೆಯ ಬ್ರಾಡ್ ಬ್ಯಾಂಡ್ ಡಿಸ್ಟ್ರಿಬ್ಯೂಶನ್ ಮಾಡೆಲ್ ಆಗಿ ಕಾರ್ಯ ನಿರ್ವಿಹಿಸುತ್ತದೆ.

Exit mobile version