ಏಪ್ರಿಲ್ 1ರಿಂದ ವಿಮಾನ ಹಾರಾಟ ದುಬಾರಿ: ಹೆಚ್ಚಾಗಲಿದೆ ಫ್ಲೈಟ್ ಟಿಕೆಟ್‌ಗಳ ಬೆಲೆ

ಹೊಸದಿಲ್ಲಿ, ಮಾ. 30: ವಿವಿಧ ಭದ್ರತಾ ಸೇವೆಗಳಿಗಾಗಿ ಏಪ್ರಿಲ್‌ 1ರಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿಯಾಗಲಿವೆ.

ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಮತ್ತು ಅವರ ಲಗೇಜ್‌ಗಳ ತಪಾಸಣೆ ಸೇರಿ ವಿವಿಧ ಭದ್ರತೆ ಸೇವೆ ಒದಗಿಸಲು ವಿಮಾನಯಾನ ಭದ್ರತಾ ಶುಲ್ಕ (ಎಎಸ್‌ಎಫ್‌) ವನ್ನು ನಾಗರಿಕ ವಿಮಾನಯಾನ ನಿಯಂತ್ರಕರು ಹೆಚ್ಚಿಸಿದ್ದಾರೆ.
ದೇಶದೊಳಗೆ ಸಂಚರಿಸುವ ಪ್ರಯಾಣಿಕರಿಗೆ 200 ರೂ., ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್‌ ಡಾಲರ್‌ ಭದ್ರತಾ ಶುಲ್ಕ ನಿಗದಿಪಡಿಸಲಾಗಿದೆ. ಈವರೆಗೆ 160 ರೂ. ಮತ್ತು 5.20 ಡಾಲರ್‌ ಭದ್ರತಾ ಶುಲ್ಕ ಇತ್ತು ಎನ್ನಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಮಾನಯಾನ ಭದ್ರತಾ ಶುಲ್ಕವನ್ನು ಏರಿಕೆ ಮಾಡಲಾಗಿತ್ತು.

Exit mobile version